ಮಂಗಳೂರು: ಯುವತಿಯೋರ್ವರಿಗೆ ಖಾಸಗಿ ಬಸ್ನಲ್ಲಿ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದ್ದು ಈ ಬಗ್ಗೆ ತಪ್ಪಿತಸ್ಥನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೋಲೀಸ್ ಕಮಿಷನರ್ ತಿಳಿಸಿದ್ದಾರೆ.
ಜ.14ರಂದು ಮಧಾಹ್ನ ಖಾಸಗಿ ಬಸ್ನಲ್ಲಿ ದೇರಳಕಟ್ಟೆಯಿಂದ ಪಂಪ್ವೆಲ್ ಕೆಡೆಗೆ ಬರುತ್ತಿದ್ದ ವೇಳೆಯಲ್ಲಿ ಯುವತಿಯೊಬ್ಬಳು ಪ್ರಯಾಣ ಮಾಡುತ್ತಿದ್ದ ವೇಳೆಯಲ್ಲಿ ಯುವತಿ ಪಕ್ಕದಲ್ಲಿ ಕುಳಿತ ವ್ಯಕ್ತಿಯೊಬ್ಬ ಆಕೆಯ ಬೆರಳನ್ನು ಸವರಲು ಶುರುಮಾಡಿದ್ದಾನಂತೆ, ಈ ವೇಳೆಯಲ್ಲಿ ಯುವತಿ ವಿರೋಧ ವ್ಯಕ್ತಪಡಿಸಿದರು ಕೂಡ ಆಕೆಯ ಬೆಂಬಲಕ್ಕೆ ಬಸ್ಸಿನಲ್ಲಿದ್ದ ಯಾರು ಕೂಡ ಬರಲಿಲ್ಲ ಎನ್ನಲಾಗಿದೆ.
ಇದಲ್ಲದೇ ಆ ವ್ಯಕ್ತಿಗೆ ಯುವತಿ ಎಚ್ಚರಿಕೆ ನೀಡಿ ನಿನ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ, ಆಗ ನಿನ್ನ ಪರಿಸ್ಥಿತಿ ಏನಾಗುವುದು ಎನ್ನುವುದನ್ನು ಅರ್ಥ ಮಾಡಿಕೊ ಅಂತ ಹೇಳಿದ್ರೆ, ಆ ವ್ಯಕ್ತಿ ಮಾಸ್ಕ್ ತೆಗೆದು ಫೋಟೋಕ್ಕೆ ಫೋಸ್ ನೀಡಿದ ಎನ್ನಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಮಾತನಾಡಿದ ನಗರದ ಪೋಲೀಸ್ ಕಮಿಷನರ್ ಶಶಿಕುಮಾರ್, ನಗರದ ಮಹೇಶ್ ಬಸ್ ಅಲ್ಲಿ ನಡೆದ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಫೋಟೋ ಮತ್ತು ಘಟನೆಯ ಮಾಹಿತಿ ನಮ್ಮ ಗಮನಕ್ಕೆ ಬಂದಿದ್ದು ತಪ್ಪಿತಸ್ಥನ ವಿರುದ್ದ ಅತೀ ಶೀಘ್ರದಲ್ಲಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.