ಬೆಳ್ತಂಗಡಿ: ಬಸ್ಸಿನಲ್ಲೇ ಹೃದಯಾಘಾತ ವಾಗಿದ್ದರೂ ಬಸ್ಸಿನಿಂದ ಇಳಿಸಿ ಮುಂದೆ ಸಾಗಿದ ಬಸ್ ನ ಚಾಲಕ ನಿರ್ವಾಹಕ ಮತ್ತು ಸಹಪ್ರಯಾಣಿಕರ ಅಮಾನವೀಯತೆಗೆ ಒಂದು ಜೀವ ಬಲಿಯಾದ ಘಟನೆ ಉಜಿರೆಯಲ್ಲಿ ನಡೆದಿದೆ.
ಮೂಲತಃ ದಾವಣಗೆರೆಯ ಹರಿಹರ ಮೂಲದ ವ್ಯಕ್ತಿಯೋರ್ವರು ಉಜಿರೆಯಲ್ಲಿ ಬಸ್ಸಿನಲ್ಲಿ ಕೂತ ಸಂದರ್ಭ ಏಕಾಏಕಿ ಕುಸಿದು ಬಿದ್ದಿದ್ದು ಬಸ್ಸಿನಲ್ಲಿ ಇದ್ದವರು ಹಾಗೂ ಸಿಬ್ಬಂದಿ ಇವರನ್ನು ಹಾಗೆಯೇ ಬಸ್ಸಿನಿಂದ ಇಳಿಸಿ ಉಜಿರೆಯ ಬಸ್ಟ್ಯಾಂಡಿನಲ್ಲಿ ಕೂರಿಸಿದ್ದಾರೆ. ದುರಾದೃಷ್ಟವಶಾತ್ ಇವರಿಗೆ ಹೃದಯಾಘತವಾಗಿ ಪ್ರಾಣ ಬಿಟ್ಟಿದ್ದಾರೆ.
ಬಸ್ಸಿನಲ್ಲಿ ಇರುವವರು ಮತ್ತು ಸಿಬ್ಬಂದಿ ಸ್ವಲ್ಪ ಮುಂಜಾಗ್ರತೆ ವಹಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡುತ್ತಿದ್ದರೆ ಈ ವ್ಯಕ್ತಿ ಬದುಕುಳಿಯುತ್ತಿದ್ದರೇನೋ? ಇದ್ಯಾವುದನ್ನೂ ಮಾಡದೆ ಜನ ಮಾನವೀಯತೆ ಮರೆತಿದ್ದಾರೆ ಮಾನವೀಯತೆ ಮರೆತ ಕಾರಣಕ್ಕಾಗಿ ಒಂದು ಜೀವ ಬಲಿಯಾಗಿದೆ.
ಇವರ ಮಗಳು ಉಜಿರೆಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಹಾಸ್ಟೆಲ್ಲೊಂದರಲ್ಲಿ ವಾಸ್ತವ್ಯ ಇರುವ ಕಾರಣ, ಮಗಳನ್ನು ನೋಡಿಕೊಂಡು ಬರಲು ಅಪ್ಪ ಹರಿಯಾಣದಿಂದ ಆಗಮಿಸಿದ್ದಾರೆ. ಮಗಳನ್ನು ಭೇಟಿಯಾಗಿ ವಾಪಸ್ಸು ತೆರಳುವ ಸಂದರ್ಭದಲ್ಲಿ ವಿಧಿ ಬೇರೆಯದೇ ಆಟ ತೋರಿದೆ.
ಸಾರಿಗೆ ಸಚಿವರೇ ಸಿಬ್ಬಂದಿಗೆ ಮಾನವೀಯತೆಯ ಮೆರೆಯುವ ಪಾಠ ಮಾಡಬೇಕಾಗಿದೆ. ಈ ಒಂದೇ ವಿಚಾರವಲ್ಲ ಸಾರ್ವಜನಿಕವಾಗಿ ಉತ್ತಮ ಬಾಂಧವ್ಯ ಬೆರೆಸುವ ಪಾಠವನ್ನು ಬೋಧಿಸುವ ಅಗತ್ಯತೆಯಿದೆ.