ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ (ಸಿಎಎ) ಕರ್ನಾಟಕದಲ್ಲಿ ಪೌರತ್ವ ಪಡೆದ ಐವರು ಬಾಂಗ್ಲಾ ನಿರಾಶ್ರಿತರು

ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿ ಆ‌ರ್.ಎಚ್. ಕ್ಯಾಂಪ್‌ಗಳಲ್ಲಿ ವಾಸವಿರುವ ಬಾಂಗ್ಲಾ ನಿರಾಶ್ರಿತರ ಪೈಕಿ ಐವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಡಿ ಭಾರತೀಯ ಪೌರತ್ವ ನೀಡಿದ್ದು, ಇದು ಕಾಯ್ದೆಯಡಿ ಪೌರತ್ವ ಪಡೆದ ರಾಜ್ಯದ ಮೊದಲ ಪ್ರಕರಣವಾಗಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಸಿಎಎ ಅಡಿ ಕೆಲವರಿಗೆ ಈಗಾಗಲೇ ಪೌರತ್ವ ನೀಡಲಾಗಿದ್ದು, ಇದೀಗ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆರ್.ಎಚ್. ಕ್ಯಾಂಪ್‌ಗಳಲ್ಲಿರುವ ರಾಮಕೃಷ್ಣನ್ ಅಭಿಕರಿ, ಸುಕುಮಾರ ಮೊಂಡಲ್, ಬಿಪ್ರದಾಸ ಗೋಲ್ಡರ್, ಜಯಂತ ಮೊಂಡಲ್, ಅದ್ವಿತ ಅವರಿಗೆ ಕರ್ನಾಟಕ ಗೃಹ ಸಚಿವಾಲಯದ ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯದಿಂದ ಪೌರತ್ವ ನೀಡಲಾಗಿದೆ.

ಸಿಂಧನೂರಲ್ಲಿದ್ದಾರೆ 25000 ವಲಸಿಗರು

1971ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಭಾರತದಲ್ಲಿ ನೆಲೆಸಲಿಚ್ಛಿಸಿದ್ದ ಕುಟುಂಬಗಳಿಗೆ ಸಿಂಧನೂರು ತಾಲೂಕಿನಲ್ಲಿ ಒಟ್ಟು 5 ಪುನರ್ವಸತಿ ಕೇಂದ್ರ ಸ್ಥಾಪಿಸಿ 932 ಕುಟುಂಬಗಳಿಗೆ ನೆಲೆ ಒದಗಿಸಲಾಗಿತ್ತು. ಆ ಪೈಕಿ, 1 ರಿಂದ 4 ಕ್ಯಾಂಪ್ ಗಳಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ 727 ಕುಟುಂಬ, 5ನೇ ಕ್ಯಾಂಪ್‌ನಲ್ಲಿ ಬರ್ಮಾದಿಂದ ಬಂದ 205 ಕುಟುಂಬಗಳಿವೆ. ನಾಲ್ಕು ದಶಕಗಳಿಂದ ಆರ್. ಎಚ್. ಕ್ಯಾಂಪ್‌ನಲ್ಲಿಯೇ ವಾಸಿಸುತ್ತಿರುವವರ ಸಂಖ್ಯೆ ಈಗ ಸುಮಾರು 25,000 ಗಡಿ ದಾಟಿದೆ. ಆ ಪೈಕಿ, 20 ಸಾವಿರ ಮಂದಿ ಬಾಂಗ್ಲಾ ನಿರಾಶ್ರಿತರಾಗಿದ್ದು, 5 ಸಾವಿರ ಮಂದಿ ಬರ್ಮಾದವರಾಗಿದ್ದಾರೆ.

ಪೌರತ್ವಕ್ಕೂ ಮುನ್ನ ವಿಸ್ತ್ರತ ಪರಿಶೀಲನೆ

ಇಲ್ಲಿವರೆಗೆ ಆರ್.ಎಚ್. ಕ್ಯಾಂಪ್ ಗಳಲ್ಲಿ ವಾಸವಿರುವ 146 ಬಾಂಗ್ಲಾ ನಿರಾಶ್ರಿತರು ಸಿಎಎಯಡಿ ಪೌರತ್ವ ಕ್ಕಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ. ಅಂಚೆ ಕಚೇರಿ, ರೈಲ್ವೆ ಮತ್ತು ಗುಪ್ತಚರ ಇಲಾಖೆಗಳ ನ್ನೊಳಗೊಂಡ ಜಿಲ್ಲಾಮಟ್ಟದ ಪರಿ ಶೀಲನಾ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ನಡೆಸಿ, ವಾಸಸ್ಥಳ, ದಾಖಲೆಗಳನ್ನು ಪರಿಶೀಲಿಸಿ, ಪೌರತ್ವಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಅದನ್ನಾಧರಿಸಿ ಪೌರತ್ವ ಮಂಜೂರು ಮಾಡಲಾಗುತ್ತಿದೆ.

Spread the love
  • Related Posts

    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    ರಾಯಚೂರು: ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಬಳಿಕ ಘಟನೆ ನಡೆದಿದ್ದು ಘಟನೆಯ ಬಳಿಕ ಕಾರ್ಮಿಕ ಮಹಿಳೆಯರನ್ನು ವಾಹನದಲ್ಲೇ ಬಿಟ್ಟು ಚಾಲಕ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ…

    Spread the love

    ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ ರೈತರಲ್ಲಿ ಹೆಚ್ಚಿದ ಆತಂಕ

    ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸಮೀಪದಲ್ಲಿ ರವಿವಾರ ಮುಂಜಾನೆ 7 ಗಂಟೆಗೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ತೋಟಗಳ ಮೂಲಕ ಹಾಗೂ ನದಿಯಲ್ಲಿ ಓಡಾಟ ನಡೆಸಿದ ಒಂಟಿ ಸಲಗ ಹೊಸಮಠ ಕಡೆಗೆ ತೆರಳಿರುವ ಬಗ್ಗೆ ವರದಿಯಾಗಿದೆ.…

    Spread the love

    You Missed

    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    • By admin
    • November 19, 2024
    • 37 views
    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

    • By admin
    • November 19, 2024
    • 133 views
    ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

    ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನಲ್ಲಿ ಮೊಳಗಿದ ಗುಂಡಿನ ಸದ್ದು ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌

    • By admin
    • November 19, 2024
    • 70 views
    ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನಲ್ಲಿ ಮೊಳಗಿದ ಗುಂಡಿನ ಸದ್ದು ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್‌

    ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ ರೈತರಲ್ಲಿ ಹೆಚ್ಚಿದ ಆತಂಕ

    • By admin
    • November 17, 2024
    • 50 views
    ಬೆಳ್ಳಂಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ ರೈತರಲ್ಲಿ ಹೆಚ್ಚಿದ ಆತಂಕ

    ಧರ್ಮಸ್ಥಳ “ಗ್ರಾಮೀಣ ಯೋಜನೆಯ ಪ್ರಯೋಗಾಲಯ” ಗ್ರಾಮೀಣ ಭಾಗದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿದೆ: ನಿರ್ಮಲಾ ಸೀತಾರಾಮನ್

    • By admin
    • November 14, 2024
    • 56 views
    ಧರ್ಮಸ್ಥಳ “ಗ್ರಾಮೀಣ ಯೋಜನೆಯ ಪ್ರಯೋಗಾಲಯ” ಗ್ರಾಮೀಣ ಭಾಗದ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿದೆ: ನಿರ್ಮಲಾ ಸೀತಾರಾಮನ್

    ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ

    • By admin
    • November 9, 2024
    • 57 views
    ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಂಡಾಜೆಯ ತೇಜಲ್ ಗೆ ಚಿನ್ನದ ಪದಕ