ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ಉತ್ಸಾಹದ ಚಿಲುಮೆಯನ್ನು ಉಕ್ಕಿಸಬಲ್ಲ, ನೊಂದ ಜೀವಗಳ ಬೆನ್ನಿಗೆ ನಿಂತು ಸಾಂತ್ವನ ನೀಡಬಲ್ಲ, ನೆಮ್ಮದಿಯ ಬದುಕಿನ ಬಗ್ಗೆ ಒಲವು ಮೂಡಿಸಬಲ್ಲ, ಮನದಾಳದಿಂದ ಬಾರದ ಸಾವಿರ ಸಾವಿರ ಸಾಂತ್ವನ ನುಡಿ ಅಥವಾ ನಿಧಿಗಿಂತಲೂ ಭರವಸೆಯ ಬೆಳಕಿನ ಸ್ಪರ್ಶ ನೀಡಬಲ್ಲ ಕೆಲವೇ ಕೆಲವು ಜನರ ಸಾಂತ್ವನ ನುಡಿ ಅಥವಾ ನಿಧಿ ಬಹಳ ಪ್ರಮುಖವೆನಿಸುತ್ತದೆ.
ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕೊಂಬಿನಡ್ಕ ಮನೆ ಶ್ರೀ ಜಯಂತ ಪೂಜಾರಿಯವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಎನ್ನುವ ಮಾರಕ ರೋಗಕ್ಕೆ ತುತ್ತಾಗಿ ಜೀವನ್ಮರಣದ ನಡುವೆ ಹೋರಾಟದ ಸ್ಥಿತಿಯಲ್ಲಿದ್ದಾರೆ. ಬದುಕಿನ ರಥ ಎಳೆಯಲು ತನ್ನ ಜೀವನೋಪಾಯಕ್ಕಾಗಿ ಗಾರೆ ಕೆಲಸ ಮಾಡುತ್ತಾ ಬಂದಿರುವ ಆದಾಯದಲ್ಲಿ ಹೆಂಡತಿ ವಸಂತಿ ಹಾಗೂ ತನ್ನ ಐದು ವರ್ಷದ ಮಗ ಮತ್ತು ಒಂದುವರೆ ವರ್ಷದ ಹೆಣ್ಣು ಮಗಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದ ಈ ದಂಪತಿಗಳ ಬದುಕಿನಲ್ಲಿ ಬರಸಿಡಿಲಿನಂತೆ ಬಂದಪ್ಪಳಿಸಿದ ಮಹಾಮಾರಿಯೇ ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆ.
ಈ ಸಂಕಷ್ಟದ ವಿರುದ್ದ ಹೋರಾಡಲು ಕಳೆದ ಎರಡು ವರ್ಷಗಳಿಂದ ಸಾಲಶೂಲ ಮಾಡಿ, ಸಂಬಂಧಿಕರಿಂದ, ದಾನಿಗಳಿಂದ ಸಹಾಯ ಪಡೆದು ಆರು ಲಕ್ಷಕ್ಕಿಂತಲೂ ಹೆಚ್ಚು ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಇಷ್ಟಾದರೂ ವಿಷಮಪರಿಸ್ಥಿತಿಯ ಕೈಗೊಂಬೆಯಾಗಿರುವ ಈ ಕುಟುಂಬಕ್ಕೆ ಮುಂದಿನ ಚಿಕಿತ್ಸೆಗೆ ಹಾಗೂ ಜೀವನೋಪಾಯಕ್ಕಾಗಿ ಹಣ ಹೊಂದಿಸಲಾಗದೇ ಕೈಚೆಲ್ಲಿ ಕುಳಿತಿದೆ ಈ ಕುಟುಂಬ. ಪತ್ನಿ ಬೀಡಿ ಕಟ್ಟಿ ಬಂದಿರುವ ಆದಾಯವು ಸಾಕಾಗದೇ ಮುಂದೇನು ಮಾಡಬೇಕೆನ್ನುವ ದಾರಿ ತೋಚದೇ ಕಂಗಲಾಗಿದ್ದಾರೆ.
ಪ್ರಸ್ತುತ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಚಿಕಿತ್ಸೆಗೆ ಹೋಗಿ ಬರಲು ಪ್ರಯಾಣ ವೆಚ್ಚಕ್ಕೂ ಹಣದ ಕೊರತೆಯಾಗಿದೆ. ಇದೀಗ ಕೊಂಬಿನಡ್ಕ ಜಯಂತ ಪೂಜಾರಿಯವರಿಗೆ ಸಾವಿರಾರು ಸಹೃದಯ ಗೆಳೆಯರ ನೆರವಿನ ಆಸರೆ ಬೇಕಾಗಿದೆ.
ನಮ್ಮ ಕೈಲಾದ ನೆರವನ್ನು ನೊಂದ ಕುಟುಂಬಕ್ಕೆ ನೀಡಿ ಜಯಂತರ ಚಿಕಿತ್ಸೆಗೆ ನೆರವಾಗೋಣ.
ಸಹಾಯಧನ ಮಾಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆ ಸಂಖ್ಯೆಗೆ ಜಮಾಗೊಳಿಸಬಹುದು
ಬ್ಯಾಂಕ್: ಸಿಂಡಿಕೇಟ್ ಬ್ಯಾಂಕ್ ಬಂಗಾಡಿ
A/c No : 01982200037445
IFSC Code : SYNB 000O198
ಜಯಂತ S/o ಗಿರಿಯಪ್ಪ ಪೂಜಾರಿ
ದೂ.ಸಂಖ್ಯೆ : 9900785019