ಬೆಂಗಳೂರು: ಕಾರ್ನಲ್ಲಿ ಒಬ್ಬರೇ ಹೋಗುತ್ತಿದ್ದರೂ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಲೇಬೇಕು ಅಂತಾ ದೆಹಲಿ ಹೈಕೋರ್ಟ್ ಹೇಳಿದೆ. ಮಾಸ್ಕ್ ಅನ್ನೋದು ಸುರಕ್ಷಾ ಕವಚವಾಗಿದೆ. ಹೀಗಾಗಿ ಮಾಸ್ಕ್ ಅನ್ನು ಧರಿಸಲೇ ಬೇಕು ಅಂತಾ ಹೈಕೋರ್ಟ್ ತಿಳಿಸಿದೆ.
ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದಾಗಲೂ ಮಾಸ್ಕ್ ಧರಿಸದೇ ಇರೋದಕ್ಕೆ ದಂಡ ಹಾಕಿದ ಕೇಸ್ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್, ದೇಶದಲ್ಲಿ ಇಂದು ಕೊರೊನಾ ಸೋಂಕು ವಿಪರೀತವಾಗಿ ಹಬ್ಬತ್ತಿದೆ. ಹೀಗಾಗಿ ಮಾಸ್ಕ್ ಅನ್ನೋದು ಸುರಕ್ಷಾ ಕವಚವಾಗಿದೆ. ಮಾಸ್ಕ್ ಅನ್ನು ಒಬ್ಬರೇ ಹೋಗುತ್ತಿದ್ದರೂ ಧರಿಸಲೇಬೇಕು ಅಂತಾ ಕೋರ್ಟ್ ಆದೇಶಿಸಿದೆ. ಅಲ್ಲದೇ ವಾಹನ ಸಹ ಸಾರ್ವಜನಿಕ ಪ್ರದೇಶ ಅಂತಾ ಹೈ ಕೋರ್ಟ್ ಹೇಳಿದೆ