BIG NEWS: ಮಕ್ಕಳಿಗೆ ಮೂಗಿನ ಮೂಲಕ ಲಸಿಕೆ, ಸೆಪ್ಟೆಂಬರ್‌ ನಲ್ಲಿ ನೇಸಲ್ ವ್ಯಾಕ್ಸಿನ್ ಲಭ್ಯ!

ರಷ್ಯಾ ಮಕ್ಕಳಿಗೆ ಮೂಗಿನ ಮೂಲಕ ಕೊರೋನಾ ಲಸಿಕೆ ನೀಡುವ ಪ್ರಯೋಗ ನಡೆಸಿದ್ದು, ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಈ ಲಸಿಕೆ ಲಭ್ಯವಾಗಲಿದೆ.

ರಷ್ಯಾದ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಮೂಗಿನ ಮೂಲಕ ಸಿಂಪಡಿಸುವ ಲಸಿಕೆಯನ್ನು ಸಿದ್ಧಪಡಿಸುತ್ತಿದ್ದು, 8 -12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷಿಸಲು ಪ್ರಾರಂಭಿಸಿದೆ. ಸೆಪ್ಟೆಂಬರ್ 15 ರೊಳಗೆ ಮಕ್ಕಳಿಗೆ ಸಿದ್ಧವಾಗಲಿದೆ ಎಂದು ಗಮಾಲೆ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್‌ ಬರ್ಗ್ ಹೇಳಿದ್ದಾರೆ.

ಮಕ್ಕಳಿಗಾಗಿ ಸೂಜಿಯ ಬದಲು ಸ್ಪ್ರೇ ಮಾಡುವ ಲಸಿಕೆಯನ್ನು ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಂಶೋಧನಾ ತಂಡ 8 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಕೊರೋನಾ ಲಸಿಕೆ ಪರೀಕ್ಷಿಸಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ, ದೇಹದ ಉಷ್ಣತೆಯೂ ಹೆಚ್ಚಾಗಿಲ್ಲ ಎಂದು ಹೇಳಿದ್ದಾರೆ.

ನಮ್ಮ ಪುಟಾಣಿಗಳಿಗೆ ನೇಸಲ್ ವ್ಯಾಕ್ಸಿನ್ ನೀಡುವ ಮೂಲಕ ಕೊರೋನಾ ಲಸಿಕೆ ನೀಡುತ್ತಿದ್ದೇವೆ. ಮಕ್ಕಳ ಮೇಲಿನ ಲಸಿಕೆ ಪರಿಣಾಮದ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗಮಾಲೆ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಸಂಶೋಧನಾ ಕೇಂದ್ರ ಕೊರೋನಾ ವಿರುದ್ಧ ‘ಸ್ಪುಟ್ನಿಕ್ ವಿ’ ಲಸಿಕೆ ಅಭಿವೃದ್ಧಿಪಡಿಸಿದೆ. 2020 ರ ಆಗಸ್ಟ್ ನಲ್ಲಿ ನೀಡಲಾದ ವಿಶ್ವದ ಮೊದಲ ಅಧಿಕೃತ ನೋಂದಾಯಿತ ಲಸಿಕೆ ಇದಾಗಿದೆ. ಒಂದೇ ಡೋಸ್ ನೀಡುವ ‘ಸ್ಪುಟ್ನಿಕ್ ಲೈಟ್’ ಲಸಿಕೆಯನ್ನು ಕೂಡ ಗಮಾಲೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ.

ಭಾರತದಲ್ಲಿ ಕೊರೋನಾ ವೈರಸ್ ಲಸಿಕೆಗೆ ಪರ್ಯಾಯವಾಗಿ ಮೂಗಿನ ಸಿಂಪಡಣೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟ್ರಾ ನೇಸಲ್ ಕೋವಿಡ್ -19 ಲಸಿಕೆಯ ಬಿಬಿವಿ 154 ನ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ.

Spread the love
  • Related Posts

    ಫೆಂಗಲ್ ಚಂಡಮಾರುತ ಹಿನ್ನೆಲೆ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    ಮಂಗಳೂರು: ಫೆಂಗಲ್‌ ಚಂಡಮಾರುತದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ದಿನಾಂಕ 03-12-2024 ರಂದು ರಜೆ ಘೋಷಣೆ ಮಾಡಲಾಗಿದೆ. Spread the love

    Spread the love

    ಬೆಳ್ತಂಗಡಿಯ ವೇಣೂರಿನಲ್ಲಿ ನದಿಯಲ್ಲಿ ಸ್ನಾನಕ್ಕೆ ಇಳಿದ ಮೂವರು ನೀರುಪಾಲು

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಮೃತ ಯುವಕರು ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಎಂಬವರಾಗಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ…

    Spread the love

    You Missed

    ಫೆಂಗಲ್ ಚಂಡಮಾರುತ ಹಿನ್ನೆಲೆ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    • By admin
    • December 2, 2024
    • 56 views
    ಫೆಂಗಲ್ ಚಂಡಮಾರುತ ಹಿನ್ನೆಲೆ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    ಬೆಳ್ತಂಗಡಿಯ ವೇಣೂರಿನಲ್ಲಿ ನದಿಯಲ್ಲಿ ಸ್ನಾನಕ್ಕೆ ಇಳಿದ ಮೂವರು ನೀರುಪಾಲು

    • By admin
    • November 27, 2024
    • 111 views
    ಬೆಳ್ತಂಗಡಿಯ ವೇಣೂರಿನಲ್ಲಿ ನದಿಯಲ್ಲಿ ಸ್ನಾನಕ್ಕೆ ಇಳಿದ ಮೂವರು ನೀರುಪಾಲು

    ವೈವಿಧ್ಯಮಯ ಪುರಾತನ ವಸ್ತುಗಳ ಸಂಗ್ರಹ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಗರಿ

    • By admin
    • November 25, 2024
    • 28 views
    ವೈವಿಧ್ಯಮಯ ಪುರಾತನ ವಸ್ತುಗಳ ಸಂಗ್ರಹ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಗರಿ

    “ಇದು ನಮ್ ಶಾಲೆ” ಚಿತ್ರ ನವೆಂಬರ್ 29ಕ್ಕೆ ಬಿಡುಗಡೆ

    • By admin
    • November 25, 2024
    • 27 views
    “ಇದು ನಮ್ ಶಾಲೆ” ಚಿತ್ರ ನವೆಂಬರ್ 29ಕ್ಕೆ ಬಿಡುಗಡೆ

    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    • By admin
    • November 19, 2024
    • 57 views
    ಕೂಲಿ ಕಾರ್ಮಿಕರನ್ನು ಕರೆದೊಯ್ದುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಟಾಟಾ ಏಸ್

    ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

    • By admin
    • November 19, 2024
    • 154 views
    ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ