ಚಾರ್ಮಾಡಿ: ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವ ಸಾಧ್ಯತೆ ಇದ್ದು ಬೆಟ್ಟಗುಡ್ಡಗಳ ಮೇಲಿಂದ ಹೊಗೆಯಾಡುತ್ತಿರುವುದು ಕಂಡುಬಂದಿದೆ.
ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ಗುಡಿಯ ಹಿಂಭಾಗದಲ್ಲಿ ಇರುವ ಬೆಟ್ಟದಲ್ಲಿ ಬೆಂಕಿ ಬಿದ್ದಿರುವುದರಿಂದ ಹೊಗೆ ದಟ್ಟವಾಗಿ ಆವರಿಸಿಕೊಂಡಿದೆ. ಇದು ಕಾಡ್ಗಿಚ್ಚಿನಿಂದ ಆಯ್ತೋ ಅಥವಾ ಇನ್ನೇನಾದರೂ ಕಾರಣಕ್ಕೆ ಆಯ್ತೋ ತಿಳಿಯಬೇಕಾಗಿದೆ. ಬೆಟ್ಟದ ಮೇಲಿರುವ ಹುಲ್ಲುಗಳಿಗೆ ಬೆಂಕಿ ಆವರಿಸಿದ್ದು ಈ ಪ್ರದೇಶದಲ್ಲಿ ಅಪಾರ ಪ್ರಾಣಿ ಸಂಕುಲಗಳು ನೆಲೆಸಿದ್ದು ಇದೀಗ ಮತ್ತೆ ಪ್ರದೇಶದಲ್ಲಿ ಹೊಗೆಯಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ





