ಚಾರ್ಮಾಡಿ: ಚಾರ್ಮಾಡಿ ಘಾಟಿಯಲ್ಲಿ ಬೆಂಕಿಯ ಕೆನ್ನಾಲಿಗೆಯಿಂದ ಅರಣ್ಯ ಪ್ರದೇಶದಲ್ಲಿ ಗಿಡಮರಗಳು ಹೊತ್ತಿ ಉರಿಯುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಚಾರ್ಮಾಡಿ ಘಾಟಿ ದಟ್ಟ ಕಾನನ. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕೂಡಿರೋ ಅರಣ್ಯ ಬೇಸಿಗೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಒಣಗಿ ನಿಂತಿರುತ್ತೆ. ಯಾರೋ ಕಿಡಿಗೇಡಿಗಳು ಕೊಟ್ಟ ಬೆಂಕಿಗೆ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿದೆ.

ಅರಣ್ಯದ ಮೇಲ್ಭಾಗದಲ್ಲಿ ಹೊತ್ತಿ ಉರಿಯುತ್ತಿರುವ ದೃಶ್ಯ ಕಾಣುತ್ತಿದ್ದು ಸಂಜೆ ವೇಳೆಗೆ ಹೊಗೆಯಾಡುತ್ತಿದ್ದ ಬಗ್ಗೆ ನಿಮ್ಮ ಕಾಲನಿರ್ಣಯನ್ಯೂಸ್ ವಿಸ್ತ್ರತ ವರದಿ ಮಾಡಿತ್ತು ರಾತ್ರಿಯಾಗುತ್ತಿದ್ದಂತೆ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿದ್ದು ಇದೀಗ ನಿಯಂತ್ರಣ ಮೀರಿ ಬೆಂಕಿ ಆವರಿಸಿದ್ದು ಆತಂಕಕ್ಕೆ ಕಾರಣವಾಗಿದೆ.

ವನ್ಯಜೀವಿ, ಸಸ್ಯ ಪ್ರಬೇಧಗಳು ಪ್ರಾಣಿ ಸಂಕುಲಕ್ಕೆ ಯಾವುದೇ ಅನಾಹುತ ಆಗದಿರಲಿ ಎಂದು ಪ್ರಾರ್ಥಿಸೋಣ ಇಂತಹ ಕಾಡ್ಗಿಚ್ಚಿಗೆ ಅಥವಾ ಮಾನವ ನಿರ್ಮಿತ ಸ್ವಯಂಕೃತ ಅಪರಾಧ ಕೃತ್ಯ ಮಾಡುವವರನ್ನು ತಡೆದು ಶಾಶ್ವತ ಪರಿಹಾರ ಕಂಡುಕೊಂಡು ಬರುವಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ.






