
ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಘಾಟ್ ನ 4ನೇ ತಿರುವಿನಲ್ಲಿ ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಮುಂದಾದ ಪ್ರಯಾಣಿಕರಿಗೆ ಕೊನೆಗೂ ಅರಣ್ಯ ಸಚಿವರು ಖಡಕ್ ಸೂಚನೆ ರವಾನಿಸಿದ್ದಾರೆ. ಇನ್ಮುಂದೆ ಅರಣ್ಯ ಪ್ರದೇಶದೊಳಗೆ ಸಂಚರಿಸುವಾಗ ವಾಹನದಿಂದ ರಸ್ತೆಗಿಳಿದು ಪೋಟೋ ತೆಗೆಯುವುದಾಗಲಿ ಮೋಜು ಮಸ್ತಿ ಮಾಡುವುದಾಗಲಿ ಕಾಡುಪ್ರಾಣಿಗಳ ಜೊತೆಗೆ ಸೆಲ್ಫಿ ತೆಗೆಯುವುದಾಗಲಿ ಕಂಡುಬಂದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಹಾಗೂ ಕಾಡಾನೆ ಜೊತೆ ಸೆಲ್ಫಿ ತೆಗೆದ ಪ್ರವಾಸಿಗರನ್ನು ಪತ್ತೆ ಹಚ್ಚಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವಂತೆ ಆದೇಶ ಹೊರಡಿಸಿದ್ದಾರೆ
