ಚಾರ್ಮಾಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮೃತ್ಯುಂಜಯ ನದಿ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಅಂತರ – ಅರಣೆಪಾದೆ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟುಗಳು ತುಂಬಿಹರಿಯುತ್ತಿದ್ದು, ಗುಡ್ಡಗಳೆಲ್ಲ ಕುಸಿತಗೊಂಡು ಬೃಹದಾಕಾರದ ಮರಗಳು, ದಿಮ್ಮಿಗಳು ಮತ್ತು ಕಸ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಬಂದು ಕಿಂಡಿ ಅಣೆಕಟ್ಟು ಸಂಪೂರ್ಣ ಮುಚ್ಚಿ ಹೋಗಿದೆ.

ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನೀರಿನ ಪ್ರಮಾಣ ಹೆಚ್ಚಾಗಿ ಮನೆಯ ಬಾಗಿಲಿನವರೆಗೂ ನೀರು ಹರಿದು ಬಂದು ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ನದಿಯ ಹತ್ತಿರದ ಮನೆಗಳ ಜನರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ.
ಈ ಪಶ್ಚಿಮ ಘಟ್ಟದ ತಪ್ಪಲಿನ ಮೃತ್ಯುಂಜಯ ನದಿಯ ಆರ್ಭಟಕ್ಕೆ ಜನರು ಪ್ರತಿ ದಿನ ಭಯದಿಂದ ಜೀವನ ನಡೆಸುತ್ತಿದ್ದಾರೆ.

READ ALSO

ಕಳೆದ ಬಾರಿ ಆಗಸ್ಟ್ 09 ರಂದು ಚಾರ್ಮಾಡಿಯಲ್ಲಿ ಜಲಪ್ರಳಯದಿಂದಾಗಿ 150 ಕ್ಕೂ ಹೆಚ್ಚಿನ ಮನೆಗಳಿಗೆ ನಷ್ಟಸಂಭವಿಸಿತ್ತು.

ವರದಿ:- ಪ್ರದೀಪ್ ಎ.ಸಿ ಅಂತರ.