ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮುಂಡಾಜೆ ಉಜಿರೆ ಪುಂಜಾಲಕಟ್ಟೆ ಹೆದ್ದಾರಿಯ ಕಾಮಗಾರಿಗೆ DP Jain construction ಗೆ ಟೆಂಡರ್ ಆಗಿದ್ದು ಬಹುತೇಕ ಕಾಮಗಾರಿ ಪ್ರಾರಂಭವಾಗಿದ್ದು ಇತ್ತೀಚಿನ ಕೆಲವು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡು ಈ ಹೆದ್ದಾರಿಯಲ್ಲಿ ಯಾರು ಸಂಚರಿಸಲು ಆಗದಿರುವ ಹಾಗೆ ರಸ್ತೆಯ ಸ್ಥಿತಿ ನಿರ್ಮಾಣವಾಗಿದೆ
ಸಂಪೂರ್ಣ ಹದಗೆಟ್ಟು ಹೋದ ಹೆದ್ದಾರಿ
ಒಂದೆಡೆ ಗುತ್ತಿಗೆದಾರರು ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಪ್ರತಿಭಟಿಸಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಕಾರ್ಮಿಕರು, ಇನ್ನೊಂದೆಡೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ನೌಕರರು, ಧಾರ್ಮಿಕ ಕೇಂದ್ರಗಳಿಗೆ ಬರುತ್ತಿರುವ ಭಕ್ತರು ಸ್ಥಳೀಯ ನಾಗರಿಕರು ಈ ಅವೈಜ್ಞಾನಿಕ ಕಾಮಗಾರಿಯಿಂದ ಬೇಸೆತ್ತು ಹೋಗಿದ್ದು ವಾಹನ ಚಾಲಕರ ಹಾಗೂ ಮಾಲಕರ ಪಾಡಂತೂ ಹೇಳತೀರದೂ ಪ್ರತಿನಿತ್ಯ ಟ್ರಾಫಿಕ್ ಜಾಮ್, ಅಳಡಿ ಎತ್ತರದ ಗುಂಡಿಗಳಿಗೆ ಎದ್ದು ಬಿದ್ದು ಸಾಗುತ್ತಿರುವ ವಾಹನಗಳು ಕೇವಲ 7ಕಿ.ಮೀ ಸಾಗಲು ಕನಿಷ್ಠ 1ಗಂಟೆ ಈ ರಸ್ತೆಯಲ್ಲಿ ಸಾಗಬೇಕಾದ ದುಸ್ಥಿತಿ ಇವೆಲ್ಲವೂ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದೆ ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗ ಜರೂರಾಗಿ ಈ ಹಿಂದೆ ಟೆಂಡರ್ ವಹಿಸಿದ್ದ ಡಿ.ಪಿ ಜೈನ್ ಕಂಪೆನಿಯ ಪರವಾನಿಗೆಯನ್ನು ಬ್ಲಾಕ್ ಲೀಸ್ಟ್ ಹಾಕಿ ಹೊಸ ಟೆಂಡರ್ ಕರೆದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಸ್ಥಳೀಯ ಯುವಕರು ಸೇರಿಕೊಂಡು ಜನರು, ವಾಹನ ಮಾಲೀಕರು ಚಾಲಕರು ಪಡುತ್ತಿರುವ ಸಂಕಟವನ್ನು ರೀಲ್ಸ್ ಮೂಲಕ ಸಂದೇಶ ರವಾನಿಸಿದ್ದು ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೀಲ್ಸ್ ನಲ್ಲಿ ರಾಹುಲ್ ಕಾನರ್ಪ, ರಜನೀಶ್, ರಾಜೇಶ್ ಸೋಮಂತ್ತಡ್ಕ ಸೇರಿಕೊಂಡು ವಾಹನ ಚಾಲಕ, ಮಾಲೀಕ ಹಾಗೂ ಪಿಟ್ಟರ್ ನಾ ಸದ್ಯದ ಪರಿಸ್ಥಿತಿಯನ್ನು ರೀಲ್ಸ್ ಮೂಲಕ ತೋರಿಸುವುದರೊಂದಿಗೆ ಮತ್ತೊಮ್ಮೆ ಜನಮನ ಗೆದ್ದಿದ್ದಾರೆ. ಒಟ್ಟಾರೆಯಾಗಿ ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ಸಿಗಲಿ ಎಂಬುದೇ ನಮ್ಮ ಆಶಯ.