ಚಿಕ್ಕಮಗಳೂರು: ಅರಣ್ಯ ಭೂಮಿ ಒತ್ತುವರಿ ತೆರವು ಖಂಡಿಸಿ ಕೊಪ್ಪ ಶೃಂಗೇರಿ N.Rಪುರ ತಾಲೂಕು ಬಂದ್ ಗೆ ಮಳೆನಾಡು ರೈತ ಹಿತರಕ್ಷಣಾ ಸಂಘದಿಂದ ಕರೆ ನೀಡಿದ್ದಾರೆ.
ಈಗಾಗಲೇ ಅರಣ್ಯ ಸಚಿವರು ಅರಣ್ಣ ಒತ್ತುವರಿ ಬಗ್ಗೆ ತುರ್ತಾಗಿ ತೆರವು ಕಾರ್ಯಾಚರಣೆ ಮಾಡುವ ಬಗ್ಗೆ ಅಧಿಸೂಚನೆ ನೀಡಿದ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು ಹಲವು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಕುಟುಂಬಗಳಿ ಸರ್ಕಾರದಿಂದ ಶಾಕ್ ನೀಡಿದಂತ್ತಾಗಿದೆ ಇದರ ಬೆನ್ನಲ್ಲೇ ಚಿಕ್ಕಮಗಳೂರಿನ ಕೆಲವು ತಾಲೂಕಿನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದ್ದು ಇದನ್ನು ಖಂಡಿಸಿ ಜಿಲ್ಲೆಯ 3ತಾಲೂಕುಗಳನ್ನು ಬಂದ್ ಮಾಡಿ ಕೊಪ್ಪದಲ್ಲಿ ಬೃಹತ್ ಜನಾಕ್ರೋಶ ಸಭೆ ನಡೆಸಿ ಪ್ರತಿಭಟಿಸುವ ಸಾಧ್ಯತೆ ಇದೆ