
ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ (ರಿ) ಕಾನರ್ಪ ಕಡಿರುದ್ಯಾವರ ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘ ಕಾನರ್ಪ, ಚಿರಂಜೀವಿ ಉತ್ಸವ 2023 ಆಚರಣಾ ಸಮಿತಿ ಕಾನರ್ಪ ಕಡಿರುದ್ಯಾವರ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಿರಂಜೀವಿ ಉತ್ಸವ 2023 ಕಾರ್ಯಕ್ರಮವು ದಿನಾಂಕ 16/12/2023ನೇ ಶನಿವಾರ ಸ.ಹಿ.ಪ್ರಾ ಶಾಲೆ ಕೊಡಿಯಾಲ್ ಕಾನರ್ಪದಲ್ಲಿ ನಡೆಯಲಿದೆ.
ಗ್ರಾಮೀಣ ಕ್ರೀಡಾಕೂಟ, ವಲಯ ಮಟ್ಟದ ಆಹ್ವಾನಿತ ತಂಡಗಳ ಕಬ್ಬಡಿ ಪಂದ್ಯಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ವೈಭವ, ಸಾಧಕರ ಸನ್ಮಾನ ಕಾರ್ಯಕ್ರಮ, ಹಾಗೂ ಶಿವದೂತ ಗುಳಿಗೆ ತುಳು ವಿಭಿನ್ನ ಶೈಲಿಯ ತುಳು ನಾಟಕ ನಡೆಯಲಿದೆ.
ಸಮಾರೋಪ ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ, ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಗೌಡ, ಮೋಹನ್ ಕುಮಾರ್ ಉಚಿರೆ, ಸುರೇಶ್ ಪರ್ಕಳ, ಡಾ. ಗೋಪಾಲಕೃಷ್ಣ ಭಟ್, ಹಾಗೂ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.




