TRENDING
Next
Prev

ಚಿರಂಜೀವಿ ಯುವಕ ಮಂಡಲ ಮತ್ತು ಭಜನಾ ತಂಡಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ (ರಿ.), ಕಾನರ್ಪ ಇದರ ಸರ್ವ ಸದಸ್ಯರ ಸಭೆಯು ದಿನಾಂಕ 15.06.2022ನೇ ಬುಧವಾರ ಚಿರಂಜೀವಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಚಿರಂಜೀವಿ ಯುವಕ ಮಂಡಲದ ಹಾಗೂ ಚಿರಂಜೀವಿ ಭಜನಾ ತಂಡಕ್ಕೆ ಸರ್ವ ಸದಸ್ಯರ ಒಮ್ಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಚಿರಂಜೀವಿ ಯುವಕ ಮಂಡಲದ ನೂತನ ಸಮಿತಿ

ಗೌರವಾಧ್ಯಕ್ಷರು : ಶ್ರೀ ಬಾಲಕೃಷ್ಣ ಗೌಡ ಮಾವಿನಕಟ್ಟೆ.
ಅಧ್ಯಕ್ಷರು : ಶ್ರೀ ಜನಾರ್ದನ ಕಾನರ್ಪ.
ಕಾರ್ಯದರ್ಶಿ : ಶ್ರೀ ರವೀಂದ್ರ ಕಾನರ್ಪ.
ಸಂಚಾಲಕರು : ಶ್ರೀ ರಾಮಚಂದ್ರ ಗೌಡ ಕಾನರ್ಪ.
ಉಪಾಧ್ಯಕ್ಷರು : ಶ್ರೀ ಪ್ರವೀಣ್ ಮಂಗೆರಪಾಲು; ಶ್ರೀ ಗುರುರಾಜ್ ಕಾನರ್ಪ.
ಜೊತೆ ಕಾರ್ಯದರ್ಶಿ : ಶ್ರೀ ಶ್ರೇಯಸ್ಸ್ ಮಾವಿನಕಟ್ಟೆ.
ಕೋಶಾಧಿಕಾರಿ : ಶ್ರೀ ಉದಯ ಗೌಡ ಪಣಿಕ್ಕಲ್.
ಸಾಂಸ್ಕೃತಿಕ ನಿರ್ದೇಶಕರು : ಶ್ರೀ ಮಧುರಾಜ್ ಕುದುರು.
ಕ್ರೀಡಾ ನಿರ್ದೇಶಕರು : ಶ್ರೀ ವಸಂತ ಕನಪ್ಪಾಡಿ.
ಕಾರ್ಯಕಾರಿಣಿ ಸದಸ್ಯರು : ಶ್ರೀ ಜಗದೀಶ್ ಗೌಡ ಪಣಿಕ್ಕಲ್; ಶ್ರೀ ಜಯೇಂದ್ರ ಗುಂಡೂರು; ಶ್ರೀ ಚಂದ್ರಶೇಖರ ಕಾನರ್ಪ; ಶ್ರೀ ರವಿಚಂದ್ರ ಕನಪ್ಪಾಡಿ; ಶ್ರೀ ರಾಜೇಂದ್ರ ಎಂ; ಶ್ರೀ ಕಮಲಾಕ್ಷ ಕೋಡಿ; ಶ್ರೀ ಚಂದ್ರಕಾಂತ ಕನಪ್ಪಾಡಿ.

ಗೌರವ ಸಲಹೆಗಾರರು : ಶ್ರೀ ಜಯರಾಜ್ ಸಾಲ್ಯಾನ್ ಕಾನರ್ಪ; ಶ್ರೀ ಗಿರಿಯಪ್ಪ ಗೌಡ; ಶ್ರೀ ಗೋಪಾಲಕೃಷ್ಣ ಸಾಲ್ಯಾನ್; ಶ್ರೀ ದಾಮೋದರ ಗೌಡ ಗುಂಡೂರು; ಶ್ರೀ ರಾಜೇಶ್ ಎಂ ಕಾನರ್ಪ; ಶ್ರೀ ಸಂಜೀವ ಗೌಡ ನೂಜಿ; ಶ್ರೀ ಜಯಂತ ಗೌಡ ಎಂ; ಶ್ರೀ ಯಶೋಧರ ಗೌಡ ಮಾಲ್ನ; ಶ್ರೀ ಮೋಹನ ಗೌಡ ಬಾಯಿತ್ಯಾರು; ಶ್ರೀ ಶ್ರೀ ಹರಿಪ್ರಸಾದ್ ಭಟ್ ಹಿತ್ತಿಲಕೋಡಿ; ಶ್ರೀ ಓಬಯ್ಯ ಗೌಡ ಕಾನರ್ಪ; ಶ್ರೀ ಜಿನ್ನಪ್ಪ ಗೌಡ ಕುದುರು; ಶ್ರೀ ರಾಘವೇಂದ್ರ ಭಟ್ ಕೋಡಿ; ಶ್ರೀ ಯಶೋಧರ ಗೌಡ ನೆಲ್ಲಿಗುಡ್ಡೆ; ಶ್ರೀ ಆನಂದ ಗೌಡ ಕುರುಡ್ಯ.

ಚಿರಂಜೀವಿ ಭಜನಾ ತಂಡದ ಸಮಿತಿ


ಸಂಚಾಲಕರು : ಶ್ರೀ ಜಯಂತ ಗೌಡ ಮುಂಡೆಹಲಸು.
ಸಹ ಸಂಚಾಲಕರು : ಶ್ರೀ ಆನಂದ ಗೌಡ ಕುರುಡ್ಯ.

ಸಮಿತಿಯ ಸಭೆಯಲ್ಲಿ ಮುಂದುವರಿದು, 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಬಗ್ಗೆ ಪೂರ್ವಭಾವಿ ಚರ್ಚೆ ಮಾಡಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿಯ‌ ದಿನ ಸರಳ ಕಾರ್ಯಕ್ರಮ ನಡೆಸುವುದು ಹಾಗೂ ಧಾರ್ಮಿಕ ಮತ್ತು ವೈದಿಕ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಶ್ರೀ ಕೃಷ್ಣ ಪೂಜೆ ಮಾಡುವುದೆಂದು ಎಂದು ನಿರ್ಧರಿಸಲಾಯಿತು.

READ ALSO