ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ ವತಿಯಿಂದ 30ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

ಕಾನರ್ಪ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ ವತಿಯಿಂದ 30ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮವನ್ನು ಯುವಕ ಮಂಡಲದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸರಳವಾಗಿ ಆಚರಿಸಲಾಯಿತು.

ಶ್ರೀ ಕೃಷ್ಣ ಪೂಜೆ: ವರ್ಷಂಪ್ರತಿ ನಡೆಯುವ ಶ್ರೀ ಕೃಷ್ಣ ಪೂಜೆಯನ್ನು ಅರ್ಚಕರಾದ ಮಧುಸೂಧನ್ ಮತ್ತು ರಾಘವೇಂದ್ರ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಕೃಷ್ಣ ಪೂಜೆ ಮತ್ತು ನಾಮಜಪ ವನ್ನು ನಡೆಸಲಾಯಿತು.

READ ALSO

ಭಾರತೀಯ ಮಜ್ದೂರ್ ಸಂಘದ ರಾಜ್ಯಕಾರ್ಯದರ್ಶಿ ಜಯರಾಜ್ ಸಾಲಿಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

ಸಮ್ಮಾನ: ಚಿರಂಜೀವಿ ಯುವಕ ಮಂಡಲದ ಸಕ್ರೀಯವಾಗಿ ತೊಡಗಿಸಿಕೊಂಡು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಭಾರತೀಯ ಮಸ್ದೂರ್ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಜಯರಾಜ್ ಸಾಲಿಯಾನ್ ಕಾನರ್ಪ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಜನಾರ್ಧನ ಕಾನರ್ಪ, ಗೌರವಾಧ್ಯಕ್ಷರಾದ ಬಾಲಕೃಷ್ಣಗೌಡ ಮಾವಿನಕಟ್ಟೆ, ಸಂಚಾಲಕರಾದ ರಾಮಚಂದ್ರ ಗೌಡ, ದುರ್ಗಾಶಕ್ತಿ ಮಹಿಳಾ ಸಂಘದ ಅಧ್ಯಕ್ಷರಾದ ಸುಮಿತ್ರ ಹಾಗೂ ಯುವಕ ಮಂಡಲ ಮತ್ತುದುರ್ಗಾಶಕ್ತಿ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಜೇಶ ಎಂ ಕಾನರ್ಪ ನಿರ್ವಹಿಸಿದರು.