ತುಳು ರಾಜ್ಯ ಭಾಷೆಗಾಗಿ ಇಂದು ಟ್ವೀಟ್ ಅಭಿಯಾನ! ಟ್ವಿಟ್ಟರ್ ನಲ್ಲಿಂದು ತುಳು ಭಾಷಿಕರ ಹೋರಾಟ

ಮಂಗಳೂರು: ಜೈ ತುಳುನಾಡು ಸೇರಿದಂತೆ ತುಳುನಾಡಿನ ವಿವಿಧ ಸಂಘಟನೆಗಳ ಆಶ್ರಯದಲ್ಲಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ನಿರ್ಣಯವನ್ನು ಸೆ. 13ರಿಂದ 24ರ ವರೆಗೆ ನಡೆಯುವ ಅಧಿವೇಶನದಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ರವಿವಾರದಂದು “ಟ್ವೀಟ್‌ ಅಭಿಯಾನ’ ನಡೆಯಲಿದೆ.

ಅಧಿವೇಶನದಲ್ಲಿ “ನಮ್ಮ ಶಾಸಕರು ಮಸೂದೆ ಮಂಡನೆ ಮಾಡಿ ತುಳು ಭಾಷೆಯನ್ನು ನಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು’ ಎಂಬ ಒತ್ತಾಯದೊಂದಿಗೆ ಸೆ. 4ರ ಮಧ್ಯರಾತ್ರಿ 12 ಗಂಟೆಯಿಂದ ಸೆ. 5ರ ಮಧ್ಯರಾತ್ರಿ 11.59ರ ವರೆಗೆ #TuluOfficialinKA_KL ಮತ್ತು #SpeakUpForTulu ಎಂಬ ಹ್ಯಾಶ್‌ಟ್ಯಾಗ್‌ ಮುಖೇನ ಟ್ವೀಟರ್‌ ಅಭಿಯಾನ ನಡೆಯಲಿದೆ.

READ ALSO