ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಕಡಿರುದ್ಯಾವರ ಗ್ರಾಮದ ಕಾನರ್ಪ, ನೂಜಿ ಪರಿಸರದಲ್ಲಿಯೂ ನಾಲ್ಕು ಮರಿಗಳ ಜೊತೆ ಚಿರತೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.
ಅರಣ್ಯ ಇಲಾಖೆ ಮೌನ: ಕಳೆದ ಒಂದು ವಾರದಿಂದ ನಿರಂತರವಾಗಿ ಚಿರತೆಗಳು ಮುಂಡಾಜೆ ಹಾಗೂ ಕಡಿರುದ್ಯಾವರ ಪರಿಸರದಲ್ಲಿ ಕಾಣಿಸಿಕೊಂಡ ಮಾಹಿತಿ ಇಲಾಖೆಯ ಗಮನಕ್ಕೆ ಬಂದಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಇರುವುದು ರೈತಾಪಿ ವರ್ಗದವರನ್ನು ಕಂಗಾಲಾಗಿಸಿದೆ. ರೈತರು ಸಾಕುಪ್ರಾಣಿಗಳನ್ನು ಹಾಗೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮನೆಬಿಟ್ಟು ಹೊರ ಬರಲು ಭಯಭೀತರಾಗಿದ್ದಾರೆ.
ಕಡಿರುದ್ಯಾವರದ ಕಾನರ್ಪದ ಸನಿಹದ ಗುಡ್ಡವೊಂದರಲ್ಲಿ 2ಚಿರತೆಗಳು ಹಾಗೂ ನೂಜಿ ಪರಿಸರದಲ್ಲಿಯೂ ನಾಲ್ಕು ಮರಿಗಳ ಜೊತೆ ಚಿರತೆಯೊಂದು ಕಾಣಿಸಿಕೊಂಡಿದ್ದು ಇದರ ಬೆನ್ನಲ್ಲೇ ಮುಂಡಾಜೆ ಗ್ರಾಮದ ಸೀಟು ಪರಿಸರದಲ್ಲಿಯೂ ಶಾಲಾಬಾಲಕನೋರ್ವನಿಗೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.






