ಮುಂಡಾಜೆ: ಇಂದು ಚಿರತೆ ಕಂಡು ಬಂದ ಮುಂಡಾಜೆ ಸೀಟ್ ನ ಮೂರು ಮಾರ್ಗದ ಬಳಿ ಅರಣ್ಯ ಇಲಾಖೆ ಪರಿಶೀಲನೆ ನಡೆಸಿತು.

ಚಿರತೆ ಎದುರಾದ ಶಾಲಾ ಬಾಲಕ ಜ್ಞಾನೇಶ್ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿದರು.
ಇದರ ಬೆನ್ನಲ್ಲೇ ಸಂಜೆ ವೇಳೆಗೆ ಚಿರತೆಯೊಂದು ಸೋಮಂತಡ್ಕ ಪೇಟೆ ಸಮೀಪ ಬಲ್ಯಾರ್ಕಾಪು ರಸ್ತೆಯ ಮೂಲಕ ಹೈಸ್ಕೂಲ್ ಮೈದಾನದ ಕಡೆ ದಾಟಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಸಾರ್ವಜನಿಕರು ಜಾಗೃತರಾಗಿರಬೇಕಾಗಿದೆ.






