ಚಿತ್ರದುರ್ಗ: ಚಿತ್ರದುರ್ಗದ ಪ್ರತಿಷ್ಠಿತ ಮಠವೊಂದರಲ್ಲಿ ಅತ್ಯಾಚಾರ ಪ್ರಕರಣವೊಂದು ಕೇಳಿಬಂದಿದೆ.
ಮಠವೊಂದರ ಸಿಇಒ ಲೈಂಗಿಕ ದೌರ್ಜನ್ಯವೆಸಗಿ, ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡುತ್ತಿರುವುದಾಗಿ ಉಪನ್ಯಾಸಕಿಯೋರ್ವರು ದೂರು ನೀಡಿದ್ದಾರೆ.
ಬೆಂಗಳೂರಿನ ಆರ್.ಎಂ.ಸಿ. ಪೊಲೀಸ್ ಠಾಣೆಗೆ ಉಪನ್ಯಾಸಕಿಯೊರ್ವರು ದೂರು ನೀಡಿದ್ದು, ಪ್ರತಿಷ್ಠಿತ ಮಠದ ಸಿಇಒ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ್ದ ಮಠದ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ ಹಾಗೂ ಸಮಾಜವೊಂದರ ಅಧ್ಯಕ್ಷನ ವಿರುದ್ಧವೂ ದೂರು ದಾಖಲಾಗಿದೆ.
ಉಪನ್ಯಾಸಕಿ 2019 ರ ಅಕ್ಟೋಬರ್ 25 ರಂದು ಕಾರ್ಯಾಗಾರವೊಂದನ್ನು ನಡೆಸಲು ಮಠದ ಸಿಇಒ ಭೇಟಿಯಾಗಿದ್ದರು ಎಂದು ತಿಳಿದು ಬಂದಿದೆ.
ಕಾರ್ಯಕ್ರಮ ಮುಗಿದ ನಂತರ ಪರಿಚಿತನಾಗಿದ್ದ ಸಿಇಒ ಬೆಂಗಳೂರಿಗೆ ಬಂದಿರುವುದಾಗಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ನಾನು ವಿಚ್ಛೇದನ ಪಡೆದುಕೊಂಡಿದ್ದು ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.