ಮಂಗಳೂರು: ಬಡವರ ಕಾಮಧೇನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, SNDPS ಪ್ರಶಸ್ತಿ ಪುರಸ್ಕೃತ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದ ‘ಹೃದಯವಂತರು’ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಗಳ ತತ್ವ, ಆದರ್ಶಗಳ ಪ್ರಕಾರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದೊಂದಿಗೆ, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಉದ್ದೇಶದೊಂದಿಗೆ ನಿರಂತರ ಸಮಾಜಸೇವೆಯಲ್ಲಿ ಕ್ರಾಂತಿ ಮಾಡುತ್ತಿರುವ ಹೆಮ್ಮೆಯ ಬಿರುವೆರ್ ಕುಡ್ಲ, ಸಂಘಟನೆಯ ಅಂಗಸಂಸ್ಥೆಯಾದ
ಬಿರುವೆರ್ ಕುಡ್ಲ ಪಲಿಮಾರು ಘಟಕದ ವಿಶೇಷ ಸೇವಾ ಯೋಜನೆಯಡಿಯಲ್ಲಿ ಮನೆ ಹಸ್ತಾಂತರ ಪ್ರಕ್ರಿಯೆ ನಡೆಯಿತು.
ತೀರಾ ಬಡ ಕುಟುಂಬದಲ್ಲಿ ದಿನಗಳೆಯುತ್ತಿರುವ ಪಲಿಮಾರು ಗ್ರಾಮದ, ಅವರಾಲು ಮಟ್ಟು ನಿವಾಸಿಯಾದ ಶ್ರೀಮತಿ ಕೊಲ್ಲು ಹೆಂಗಸು, ಇವರ ಮನೆಯನ್ನು ಸಂಪೂರ್ಣ ದುರಸ್ತಿಮಾಡಿ, ನವೀಕರಿಸಿ, ಶೌಚಾಲಯವನ್ನು ನಿರ್ಮಿಸಿ, ಪುನರ್ ನಿರ್ಮಾಣಗೊಂಡ ಮನೆಯಲ್ಲಿ ಗಣ ಹೋಮ ಪೂಜೆ ನಡೆಸಿ, ಭಜನೆ ಸತ್ಸಂಗದ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿ, ಸರಳ ರೀತಿಯಲ್ಲಿ ಮನೆಯನ್ನು ಹಸ್ತಾಂತರಿಸುವ ಮೂಲಕ ಬಡಕುಟುಂಬಕ್ಕೆ ಆಸರೆಯಾಗಿದ್ದಾರೆ.
ಸರಳ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷರಾದ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಹಾಗೂ ದಾನಿಗಳ ಪರವಾಗಿ ರಾಮದಾಸ್ ಅವರನ್ನು ಸನ್ಮಾನಿಸಲಾಯಿತು.
ಈ ಸತ್ಕಾರ್ಯದಲ್ಲಿ ಗ್ರಾಮದ ಹಿರಿಯವರು, ಹತ್ತು ಸಮಸ್ತರು, ದಾನಿಗಳು, ಅಭಿಮಾನಿಗಳು, ಹಾಗೂ ನಮ್ಮ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಸಂಘಟನಾ ಅಧ್ಯಕ್ಷರಾದ ಚಂದ್ರಶೇಖರ್ ಎಂ ಅಮೀನ್, ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಕಿಶೋರಬಾಬು, ಉಡುಪಿ ಘಟಕದ ಅಧ್ಯಕ್ಷರಾದ ಕಿಶೋರ್, ಬಜಪೆ ಘಟಕದ ಉಪಾಧ್ಯಕ್ಷರಾದ ಚಂದ್ರ ಪೆರಾರ, ಕೇಂದ್ರ ಸಮಿತಿಯ ಇತರ ಪದಾಧಿಕಾರಿಗಳು, ಅನೇಕ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಚಾಲಕರು, ಪಲಿಮಾರು ಘಟಕದ ಅಧ್ಯಕ್ಷರಾದ ಪ್ರಸಾದ್ ಪಲಿಮಾರು, ಕಾರ್ಯದರ್ಶಿಯಾದ ಪ್ರವೀಣ್ ಆಡ್ವೇ, ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಮಾತೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.