
ಬೆಂಗಳೂರು: ಮಾಸಿಕ 15 ಸಾವಿರ ರೂಪಾಯಿ ನಿಶ್ಚಿತ ಗೌರವಧನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್ಗೆ ನಿರ್ಧರಿಸಲಾಗಿದೆ.
ಸತತ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಸಂಘಟನೆಯ ಮುಖಂಡರ ಹೋರಾಟವು ಸಿಎಂ ಸಿದ್ದರಾಮಯ್ಯ ಅವರೊಂದಿಗಿನ ಸಂಧಾನ ಯಶಸ್ವಿಯಾದ ಹಿನ್ನೆಲೆ ಮುಷ್ಕರ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಆಶಾ ಕಾರ್ಯಕರ್ತೆಯರು ರೂ.15 ಸಾವಿರಕ್ಕೆ ಗೌರವ ಧನ ಹೆಚ್ಚಿಸಲು ಬೇಡಿಕೆ ಇಟ್ಟಿದ್ದರು. ಆದರೆ ಸಿಎಂ ಅವರು 10 ಸಾವಿರ ರೂಪಾಯಿಗೆ ಏರಿಸಲು ಸೂಚನೆ ನೀಡಿದ್ದಾರೆ. ಸಿಎಂ ಅವರ ಸೂಚನೆಗೆ ಆಶಾ ಕಾರ್ಯಕರ್ತರೆಯರು ಒಪ್ಪಿದ್ದು, ಮುಷ್ಕರ ಹಿಂಪಡೆದಿದ್ದಾರೆ.
ಎಪ್ರಿಲ್ ನಿಂದ 10 ಸಾವಿರ ರೂಪಾಯಿ ಗೌರವಧನಕ್ಕೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‍ನ ಖಾಲಿ ಜಾಗ ಸೇರಿ ರಸ್ತೆಯಲ್ಲೇ ಜಾಗರಣೆ ಮಾಡುವ ಮೂಲಕ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು. ಧರಣಿಯು ಇಂದಿಗೆ ಐದನೇ ದಿನಕ್ಕೆ ಕಾಲಿಟ್ಟಿದ್ದು ಸಿಎಂ ಸಂಧಾನದ ಬಳಿಕ ಹಿಂಪಡೆಯಲಾಗಿದೆ.
ಸಿಎಂ ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಕೆಗೆ ಮಾಡುತ್ತಾರೋ ಕಾದು ನೋಡಬೇಕಿದೆ ಮುಂದೆ ಇನ್ನೊಂದು ಸುತ್ತಿನ ಹೋರಾಟಕ್ಕೆ ಅವಕಾಶ ಆಗದಂತೆ ಬೇಡಿಕೆ ಈಡೇರಿಸುವಂತಾಗಲಿ ಎಂಬುದು ನಮ್ಮ ಆಶಯವಾಗಿದೆ.