ಇಂದು ವಿಶ್ವ ತೆಂಗಿನಕಾಯಿ ದಿನ ತೆಂಗಿನಕಾಯಿಯ ಮಹತ್ವ ತಿಳಿಯಲು ಇಲ್ಲಿ ಭೇಟಿ ನೀಡಿ

ದಕ್ಷಿಣ ಭಾರತದ ಹೆಚ್ಚಿನ ಅಡುಗೆ ಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು.

ತೆಂಗಿನಕಾಯಿಯ ಎಳನೀರು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಎಳೆಯ ಮಕ್ಕಳಿಗೂ, ಅಶಕ್ತರಿಗೂ ಉತ್ತಮ ಆಹಾರವಾಗಿದೆ. ಬೆಳೆದ ಕಾಯಿಯು ಅಡುಗೆಗೆ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬಹರಿದಿನಗಳಲ್ಲಿ ಇದರ ಬೇಡಿಕೆಯು ಬಹುಮುಖ್ಯವಾಗಿದೆ.

ತೆಂಗಿನ ಮರದ ಕಾಂಡ, ಗರಿ, ಕಾಯಿ, ನಾರು, ಕರಟಗಳನ್ನು ಬಳಸಿ ತಯಾರಿಸುವ ಆಕರ್ಷಕ ಕರಕುಶಲ ಉತ್ಪನ್ನಗಳು ಪೆನ್‌ ಸ್ಟ್ಯಾಂಡ್‌, ಗೃಹಾಲಂಕಾರ ವಸ್ತುಗಳು, ವಿವಿಧ ಕಲಾಕೃತಿಗಳು, ಹುರಿಹಗ್ಗ, ಕಾಲೊರೆಸುವ ಚಾಪೆಗಳು, ಚೀಲಗಳು, ಕರಟದ ಚಿಪ್ಪಿನ ಆಭರಣಗಳು, ಕ್ಲಿಪ್‌ ಗಳು ಇತ್ಯಾದಿ ಬಹುತೇಕರು ಅಡುಗೆಗಳಿಗೆ ತೆಂಗಿನೆಣ್ಣೆಯನ್ನೇ ಬಳಸುತ್ತಾರೆ. ತೆಂಗಿನೆಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಅಂಶ ಜಾಸ್ತಿ ಇದೆಯೆಂದೂ, ಅದು ಹೃದಯಾಘಾತವನ್ನು ಹೆಚ್ಚಿಸುತ್ತದೆಯೆಂದೂ ಇತರ ಖಾದ್ಯತೈಲ ಉತ್ಪಾದಕ ಸಂಸ್ಥೆಗಳು ಪ್ರಚಾರಮಾಡುತ್ತಿವೆ. ಇದರಲ್ಲಿ ಸತ್ಯಾಂಶಕ್ಕಿಂತಲೂ ವ್ಯಾವಹಾರಿಕ ದೃಷ್ಟಿಕೋನವೇ ಹೆಚ್ಚು ಎಂಬುದು ಇತ್ತೀಚೆಗೆ ವೇದ್ಯವಾಗುತ್ತಿದೆ. ತೆಂಗಿನೆಣ್ಣೆಯು ಚರ್ಮದ ಶುಷ್ಕತೆಯನ್ನು ಕಡಿಮೆಮಾಡುವುದರೊಂದಿಗೆ ಕೆಲವು ಸೋಂಕುಗಳನ್ನೂ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಮಂದಿ ಅಡುಗೆಗೂ, ತಲೆ-ಮೈಗೆ ಹಚ್ಚಿಕೊಳ್ಳಲೂ ತೆಂಗಿನ ಎಣ್ಣೆಯನ್ನೇ ಬಳಸಿ ಆರೋಗ್ಯದಿಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಹೀಗೆ ತೆಂಗಿನಮರದ ಪ್ರತಿ ಭಾಗಗಳೂ, ಪ್ರತಿಹಂತದಲ್ಲಿಯೂ ಉಪಯುಕ್ತವಾಗಿದ್ದು, ಬಯಸಿದ್ದನ್ನೆಲ್ಲ ಕೊಡುವ ಮರ ಎಂಬ ಅರ್ಥದಲ್ಲಿ ಕಲ್ಪವೃಕ್ಷವೆಂದೂ ಕರೆಯಲ್ಪಡುತ್ತದೆ. ಏಷ್ಯಾದ ವಿವಿಧ ದೇಶಗಳ ಆರ್ಥಿಕ ಬೆಳವಣಿಗೆಗೆ ತೆಂಗಿನಕಾಯಿ ಬೆಳೆಯನ್ನು ಪೋ›ತ್ಸಾಹಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ, ಏಷ್ಯಾ-ಫೆಸಿಫಿಕ್‌ ದೇಶಗಳ ತೆಂಗಿನಕಾಯಿ ಸಮುದಾಯ ಮಂಡಳಿಯನ್ನು ರಚಿಸಿ, ಸೆಪ್ಟೆಂಬರ್‌ 2 ರಂದು “ವಿಶ್ವ ತೆಂಗಿನಕಾಯಿ ದಿನ’ ಎಂದು ಘೋಷಿಸಿದ್ದಾರೆ.

ಎಪಿಸಿಸಿ 18 ಸದಸ್ಯ ರಾಷ್ಟ್ರಗಳ ಅಂತರ್-ಸರ್ಕಾರಿ ಸಂಸ್ಥೆಯಾಗಿದ್ದು, ಇದು ಏಷ್ಯನ್ ಪೆಸಿಫಿಕ್ ಪ್ರದೇಶದ ಗರಿಷ್ಠ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ತೆಂಗಿನಕಾಯಿ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು, ಸಂಘಟಿಸಲು ಮತ್ತು ಸಮನ್ವಯಗೊಳಿಸುವ ಉದ್ದೇಶ ಹೊಂದಿದೆ. ಎಪಿಸಿಸಿಯ ಸ್ಥಾಪಕ ಸದಸ್ಯರಲ್ಲಿ ಭಾರತ ಕೂಡ ಒಂದು. ಭಾರತದಲ್ಲಿ, ತೆಂಗಿನಕಾಯಿ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ಪ್ರತಿ ವರ್ಷ ವಿಶ್ವ ತೆಂಗಿನ ದಿನವನ್ನು ದೇಶಾದ್ಯಂತ ತೆಂಗಿನಕಾಯಿ ಬೆಳೆಯುವ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.

‘ಅಂತಾರಾಷ್ಟ್ರೀಯ ತೆಂಗಿನಕಾಯಿ ಸಮುದಾಯ’ (ವಿಶ್ವದ ತೆಂಗಿನಕಾಯಿ ಉತ್ಪಾದಿಸುವ ದೇಶಗಳ ಸಂಘಟನೆ) ಘೋಷಿಸಿದಂತೆ ಈ ವರ್ಷ ವಿಶ್ವ ತೆಂಗಿನ ದಿನಾಚರಣೆಯ ವಿಷಯವು ‘ಜಗತ್ತನ್ನು ಉಳಿಸಲು ತೆಂಗಿನಕಾಯಿ ಉದ್ದಿಮೆಯಲ್ಲಿ ಹೂಡಿಕೆ ಮಾಡಿ’ ಎಂಬ ಧ್ಯೇಯ ಹೊಂದಿದೆ. ಮುಖ್ಯವಾಗಿ ತೆಂಗಿನಕಾಯಿಯ ವೈಜ್ಞಾನಿಕ ಹೆಸರು ಕೊಕೊಸ್ ನ್ಯೂಸಿಫೆರಾ. ಇದರಲ್ಲಿ ಕ್ಯಾಲೋರಿ ಪ್ರಮಾಣ 283 ಕೆ.ಸಿ.ಎಲ್, ಕೊಬ್ಬಿನಾಂಶ (76.54%), ಮ್ಯಾಂಗನೀಸ್ (52.17%), ತಾಮ್ರ (38.67%), ಕಬ್ಬಿಣ (24.25%), ಒಟ್ಟು ಆಹಾರದ ಫೈಬರ್ (18.95%), ಸೆಲೆನಿಯಮ್, ಸೆ 8.1ಮಿ.ಗ್ರಾ. (14.73%), ರಂಜಕ, ಪಿ 90 ಮಿ.ಗ್ರಾಂ. (12.86%), ಕಾರ್ಬೋಹೈಡ್ರೇಟ್ 12.18 ಗ್ರಾಂ (9.37%), ಸತು, Zn 0.88 ಮಿ.ಗ್ರಾ, (8.00%), ವ್ಯಾಲಿನ್ 0.162 ಗ್ರಾಂ (7.67%) ಹೊಂದಿದೆ.

ತೆಂಗಿನಕಾಯಿಯು ಆರೋಗ್ಯಕ್ಕೆ ಉತ್ತಮವಾಗಿದ್ದು, ತೂಕ ನಿರ್ವಹಣೆ, ಸಕ್ಕರೆ ಕಾಯಿಲೆ ನಿಯಂತ್ರಣ, ಜೀರ್ಣಕ್ರಿಯೆಯ ಸುಧಾರಣೆ, ಚರ್ಮದ ಸೋಂಕು ತಡೆ, ಕೂದಲಿನ ಬೆಳವಣಿಗೆಗೆ ಉತ್ತೇಜನ, ಮೂಳೆ ಆರೋಗ್ಯ, ಹಲ್ಲಿನ ಆರೈಕೆ, ಒತ್ತಡ ನಿವಾರಣೆ ಮಾಡುತ್ತದೆ. ತೆಂಗಿನಕಾಯಿಯನ್ನು ವಿಶ್ವದಾದ್ಯಂತ 90ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತದೆ. ತೆಂಗಿನ ತೋಟವನ್ನು ಸ್ಥಾಪಿಸುವುದು ತುಂಬಾ ಕಷ್ಟವಾದರೂ ಅದನ್ನು ಒಮ್ಮೆ ಬೆಳದ ನಂತರ, ವರ್ಷಪೂರ್ತಿ ತೆಂಗಿನಕಾಯಿ ಕೊಯ್ಲು ಮಾಡುವುದರಿಂದ ಇದು ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ತೆಂಗಿನಕಾಯಿಯ ವಿಶ್ವ ಉತ್ಪಾದನೆಯು ವಾರ್ಷಿಕವಾಗಿ ಸುಮಾರು 55 ದಶಲಕ್ಷ ಟನ್‌ಗಳಷ್ಟಿದೆ.

ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ವಿಶ್ವದ ತೆಂಗಿನ ಹಣ್ಣುಗಳನ್ನು ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಾಗಿವೆ. ಇಂಡೋನೇಷ್ಯಾದಲ್ಲಿ 183,000,000 ಟನ್, ಫಿಲಿಪೈನ್ಸ್​ನಲ್ಲಿ 153,532,000 ಟನ್, ಭಾರತದಲ್ಲಿ 119,300,000 ಟನ್ ಬೆಳಯಲಾಗುತ್ತದೆ. ಇನ್ನು ಇಂಡೋನೇಷ್ಯಾ ವಿಶ್ವದ ಅತಿದೊಡ್ಡ ತೆಂಗಿನಕಾಯಿ ರಫ್ತುದಾರನಾಗಿದ್ದು, ರಫ್ತು ಪ್ರಮಾಣ 290 ಸಾವಿರ ಟನ್‌ಗಳಷ್ಟಿದೆ. ಥೈಲ್ಯಾಂಡ್ (70 ಸಾವಿರ ಟನ್) ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಂತರ ವಿಯೆಟ್ನಾಂ 57 ಸಾವಿರ ಟನ್. ಈ ಎಲ್ಲಾ ದೇಶಗಳು ಒಟ್ಟಾಗಿ ಒಟ್ಟು ರಫ್ತಿನ 23% ಪಾಲನ್ನು ಹೊಂದಿವೆ. ಇನ್ನು ಭಾರತ 11 ಸಾವಿರ ಟನ್ ರಫ್ತು ಮಾಡುತ್ತದೆ. 2018ರಲ್ಲಿ ಥೈಲ್ಯಾಂಡ್ 210 ಸಾವಿರ ಟನ್ ಮತ್ತು ಮಲೇಷ್ಯಾ 199 ಸಾವಿರ ಟನ್ ತೆಂಗಿನಕಾಯಿಯನ್ನು ಆಮದು ಮಾಡಿಕೊಂಡಿದೆ. ಒಟ್ಟು ಆಮದುಗಳಲ್ಲಿ ಕ್ರಮವಾಗಿ 31% ಮತ್ತು 30%. ಒಟ್ಟು ಆಮದುಗಳ ವಿಷಯದಲ್ಲಿ ಚೀನಾ (60 ಸಾವಿರ ಟನ್) 9% ಪಾಲನ್ನು ಹೊಂದಿದ್ದು, ಯು.ಎಸ್ (5.7%) ನಂತರದ ಸ್ಥಾನದಲ್ಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (27 ಸಾವಿರ ಟನ್), ನೆದರ್ಲ್ಯಾಂಡ್ಸ್ (19 ಸಾವಿರ ಟನ್) ಮತ್ತು ಸಿಂಗಾಪುರ (11 ಸಾವಿರ ಟನ್) ಆಮದು ಮಾಡಿಕೊಂಡಿದೆ. ವಿಶ್ವದ ಪ್ರಮುಖ ತೆಂಗಿನಕಾಯಿ ಉತ್ಪಾದಿಸುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ವಾರ್ಷಿಕ ತೆಂಗಿನ ಉತ್ಪಾದನೆಯು 20.82 ಲಕ್ಷ ಹೆಕ್ಟೇರ್‌ಗೆ 2395 ಕೋಟಿ ತೆಂಗಿನಕಾಯಿ ಬೆಳೆಯಲಾಗುತ್ತದೆ.

Spread the love
  • Related Posts

    ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ, ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ

    ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ…

    Spread the love

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವ ಅಕ್ಟೋಬರ್ 24 ಶುಕ್ರವಾರದಂದು ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರೀಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ…

    Spread the love

    You Missed

    ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ, ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ

    • By admin
    • October 24, 2025
    • 20 views
    ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳವು ನಾಡಿನ ಪವಿತ್ರ ಹಾಗೂ ಪುಣ್ಯಕ್ಷೇತ್ರ, ಹೆಗ್ಗಡೆಯವರು ಮಾತೃಹೃದಯದಿಂದ ಮಾಡುವ ಸಮಾಜ ಸೇವೆ ಅನನ್ಯ ಮತ್ತು ಅನುಪಮವಾಗಿದೆ

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    • By admin
    • October 23, 2025
    • 26 views
    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ನಾಳೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    • By admin
    • October 23, 2025
    • 25 views
    ನಾಳೆ  ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    • By admin
    • October 23, 2025
    • 44 views
    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    • By admin
    • October 23, 2025
    • 220 views
    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 88 views
    17ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ