BIG NEWS: ಕೊರೊನಾ ಲಸಿಕೆ ಖರೀದಿಗೆ 100 ಕೋಟಿ ರೂಪಾಯಿ ನೀಡಿದ ರಾಜ್ಯ ಕಾಂಗ್ರೆಸ್​!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆಯ ಅಭಾವದಿಂದಾಗಿ ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಬೆರಳು ಮಾಡಿ ತೋರಿಸುವಂತಾಗಿದೆ. ಲಸಿಕೆಯ ಅಭಾವದಿಂದ ರಾಜ್ಯ ತತ್ತಿರಿಸಿರುವ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ರು.

ಜನರ ಜೀವ ಉಳಿಸೋದು ಕಾಂಗ್ರೆಸ್​ನ ಕರ್ತವ್ಯವಾಗಿದೆ. ಹೀಗಾಗಿ ನಾವು ಕೊರೊನಾ ಲಸಿಕೆ ಖರೀದಿಗೆ 100 ಕೋಟಿ ರೂಪಾಯಿಯನ್ನ ನೀಡಲಿದ್ದೇವೆ. ಸಿಎಂ, ಡಿಸಿಎಂ ಸೇರಿದಂತೆ ವಿವಿಧ ಸಚಿವರು ಜಾಗತಿಕ ಟೆಂಡರ್​ ಮೂಲಕ ಲಸಿಕೆ ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಲಸಿಕೆ ಖರೀದಿಯ ಪ್ರತಿಯೊಂದು ವ್ಯವಹಾರವನ್ನೂ ರಾಜ್ಯ ಸರ್ಕಾರ ಪಾರದರ್ಶಕವಾಗಿ ಇಡಬೇಕು. ಸಿಎಂ ಬಿಎಸ್​ವೈ ಅವರ ಕಣ್ಮುಚ್ಚಿಸಿ ಅವರ ಕೆಳಗಿನವರು ಅಕ್ರಮ ಮಾಡ್ತಿದ್ದಾರೆ.

READ ALSO

ಆದರೆ ನಮ್ಮ ಹಾಗೂ ಜನತೆಯ ಮುಂದೆ ಲಸಿಕೆ ಖರೀದಿಯ ಪಾರದರ್ಶಕ ವ್ಯವಹಾರವನ್ನ ನೀಡಲೇಬೇಕು ಎಂದು ಆಗ್ರಹಿಸಿದರು.

ಪ್ರತಿಯೊಂದು ಶಾಸಕ ಹಾಗೂ ಸಂಸದರಿಗೆ ಕ್ಷೇತ್ರ ಅಭಿವೃದ್ಧಿಗೆಂದು 2 ಕೋಟಿ ರೂಪಾಯಿ ಹಣವನ್ನ ನೀಡಲಾಗುತ್ತದೆ. ಈ ಅಭಿವೃದ್ಧಿ ಹಣದಲ್ಲಿ ತಲಾ 1 ಕೋಟಿ ರೂಪಾಯಿಯನ್ನ ನೀಡಲು ರಾಜ್ಯ ಕಾಂಗ್ರೆಸ್​ ನಿರ್ಧರಿಸಿದೆ. ಕಾಂಗ್ರೆಸ್​ನ 95 ಶಾಸಕರು ಹಾಗೂ ಓರ್ವ ಸಂಸದರಿಂದ ತಲಾ 1 ಕೋಟಿ ರೂಪಾಯಿ ಹಣವನ್ನ ಕಾಂಗ್ರೆಸ್​ ಲಸಿಕೆ ಖರೀದಿಗೆ ನೀಡಲಿದೆ. ಇದರ ಜೊತೆಯಲ್ಲಿ ಸಂಸದ ಹಾಗೂ ರಾಜ್ಯ ಸಭಾ ಸದಸ್ಯರಿಂದ ತಲಾ 5 ಕೋಟಿ ಹಣವನ್ನೂ ಕಾಂಗ್ರೆಸ್​ ನೀಡಲಿದೆ.