ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ?

ಈ ವರ್ಷ ನವೆಂಬರ್ 13 ರಿಂದ 16 ಈ ಅವಧಿಯಲ್ಲಿ ದೀಪಾವಳಿ ಹಬ್ಬವಿದೆ. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಸಂಚಾರಸಾರಿಗೆ ನಿರ್ಬಂಧವನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಜನಜೀವನ ಮೊದಲಿನಂತಾಗುತ್ತಿದ್ದರೂ, ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ನಿರ್ಬಂಧಗಳಿಂದ ನಿತ್ಯದಂತೆ ದೀಪಾವಳಿಯನ್ನು ಆಚರಿಸಲು ಮಿತಿ ಇದೆ. ಇಂತಹ ಸ್ಥಳಗಳಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂಬುದರ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.

(ಟಿಪ್ಪಣಿ: ಈ ಅಂಶಗಳು ಯಾವ ಸ್ಥಳಗಳಲ್ಲಿ ದೀಪಾವಳಿ ಹಬ್ಬವನ್ನು ಎಂದಿನಂತೆ ಆಚರಿಸಲು ನಿರ್ಬಂಧ ಅಥವಾ ಕಟ್ಟುಪಾಡುಗಳಿವೆಯೋ ಅಂತಹವರಿಗಾಗಿ ಇವೆ. ಯಾವ ಸ್ಥಳದಲ್ಲಿ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಎಂದಿನಂತೆ ಹಬ್ಬವನ್ನು ಆಚರಿಸಲು ಸಾಧ್ಯವಿದೆಯೋ, ಅಂತಹ ಸ್ಥಳಗಳಲ್ಲಿ ನಿತ್ಯದ ಪದ್ಧತಿಯಂತೆ ಆಚರಿಸಬೇಕು).

ಪ್ರಶ್ನೆ : ಗೋವತ್ಸದ್ವಾದಶಿಯ ದಿನದಂದು ಹೊರಗೆ ಹೋಗಿ ಕರುವಿನೊಂದಿಗಿರುವ ಗೋವಿನ ಪೂಜೆಯನ್ನು ಮಾಡಬೇಕೇ ? ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ಗೋವತ್ಸದ್ವಾದಶಿಯ ದಿನವು ದೀಪಾವಳಿಗೆ ಹೊಂದಿಕೊಂಡು ಬರುವುದರಿಂದ, ಅದನ್ನು ದೀಪಾವಳಿಯಲ್ಲಿ ಸಮಾವೇಶಗೊಳಿಸಲಾಗಿದೆ; ಆದರೆ ವಾಸ್ತವದಲ್ಲಿ ಈ ಹಬ್ಬ ಪ್ರತ್ಯೇಕವಾಗಿದೆ. ಗೋವತ್ಸದ್ವಾದಶಿಯ ದಿನದಂದು ಹೊರಗೆ ಹೋಗಿ ಕರುವಿನೊಂದಿಗಿರುವ ಗೋವನ್ನು ಪೂಜಿಸುವಲ್ಲಿ ಅಡಚಣೆಯಾಗುತ್ತಿದ್ದರೆ, ಮನೆಯಲ್ಲಿ ಯಾವುದಾದರೊಂದು ಗೋವಿನ ಮೂರ್ತಿಯಿದ್ದರೆ ಅದನ್ನು ಪೂಜಿಸಬೇಕು. ಮನೆಯಲ್ಲಿ ಮೂರ್ತಿಯಿಲ್ಲದಿದ್ದರೆ, ಮಣೆಯ ಮೇಲೆ ಗೋವಿನ ಚಿತ್ರವನ್ನು ಬಿಡಿಸಿ ಅದನ್ನು ಪೂಜಿಸಬೇಕು.

ಪ್ರಶ್ನೆ : ನರಕಚತುರ್ದಶಿಗೆ ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮಮುಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡುತ್ತಾರೆ. ಉತ್ತರಾಣಿ ಟೊಂಗೆಯನ್ನು ತಲೆಯಿಂದ ಕಾಲುಗಳವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯವರೆಗೆ ಹೀಗೆ 3 ಸಲ ಗೋಲಾಕಾರವಾಗಿ ತಿರುಗಿಸುತ್ತಾರೆ. ಇದಕ್ಕಾಗಿ ಬೇರುಗಳಿರುವ ಉತ್ತರಾಣಿ ವನಸ್ಪತಿಯನ್ನು ಉಪಯೋಗಿಸುತ್ತಾರೆ. ಉತ್ತರಾಣಿ ವನಸ್ಪತಿ ಲಭ್ಯವಿಲ್ಲದಿದ್ದಲ್ಲಿ ಏನು ಮಾಡಬೇಕು?

ಉತ್ತರ : ಉತ್ತರಾಣಿ ವನಸ್ಪತಿ ಲಭ್ಯವಿಲ್ಲದಿದ್ದಲ್ಲಿ ದೇವರಿಗೆ ಪ್ರಾರ್ಥನೆ ಮಾಡಿ ಸ್ನಾನ ಮಾಡಬೇಕು.

ಪ್ರಶ್ನೆ : ದೀಪಾವಳಿಯ ದಿನಗಳಲ್ಲಿ ಯಮತರ್ಪಣ, ಬ್ರಾಹ್ಮಣಭೋಜನ ಮತ್ತು ವಸ್ತ್ರದಾನವನ್ನು ಮಾಡಲಾಗುತ್ತದೆ. ಇವುಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ಯಮತರ್ಪಣ ವಿಧಿಯನ್ನು ಮನೆಯಲ್ಲಿ ಮಾಡಲು ಸಾಧ್ಯವಿದೆ. ಇದರಲ್ಲಿ ಯಮನ 14 ಹೆಸರುಗಳನ್ನು ಬಳಸಿ ನೀರಿನಿಂದ ತರ್ಪಣವನ್ನು ಕೊಡಲಾಗುತ್ತದೆ. ಈ ತರ್ಪಣೆ ವಿಧಿಯನ್ನು ಪಂಚಾಂಗದಲ್ಲಿ ನೀಡಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು. ಬ್ರಾಹ್ಮಣ ಭೋಜನ ಕೊಡುವುದು ಮತ್ತು ವಸ್ತ್ರದಾನ ಮಾಡುವುದು ಸಾಧ್ಯವಿಲ್ಲದಿದ್ದರೆ, ಸದುಪಯೋಗವಾಗುವ ಸ್ಥಳಗಳಲ್ಲಿ ಅಥವಾ ಧಾರ್ಮಿಕ ಕಾರ್ಯಗಳನ್ನು ಮಾಡುವ ಸಂಸ್ಥೆಗಳಿಗೆ ಸಾಧ್ಯವಿದ್ದಷ್ಟು ಧನವನ್ನು ಅರ್ಪಣೆಯ ರೂಪದಲ್ಲಿ ಅರ್ಪಿಸಬೇಕು.

ಪ್ರಶ್ನೆ :ಲಕ್ಷ್ಮೀ ಪೂಜೆಗಾಗಿ ಕೊತ್ತಂಬರಿ ಕಾಳು, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ಲಕ್ಷ್ಮೀ ಪೂಜೆಗಾಗಿ ಆವಶ್ಯಕ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ, ಎಷ್ಟು ಸಾಮಗ್ರಿಗಳು ಲಭ್ಯವಿವೆಯೋ, ಅಷ್ಟು ಸಾಮಗ್ರಿಗಳಿಂದ ಭಾವಪೂರ್ಣವಾಗಿ ಪೂಜಾವಿಧಿಯನ್ನು ಮಾಡಬೇಕು. ಬತ್ತಾಸು ಇತ್ಯಾದಿ ಸಾಮಗ್ರಿಗಳು ದೊರಕದಿದ್ದಲ್ಲಿ, ದೇವರಿಗೆ ಮನೆಯಲ್ಲಿರುವ ತುಪ್ಪಸಕ್ಕರೆ, ತುಪ್ಪಬೆಲ್ಲ ಅಥವಾ ಯಾವುದಾದರೊಂದು ಸಿಹಿ ಪದಾರ್ಥದ ನೈವೇದ್ಯವನ್ನು ತೋರಿಸಬೇಕು.

ಪ್ರಶ್ನೆ : ಅಭ್ಯಂಗಸ್ನಾನಕ್ಕಾಗಿ ಉಟಣೆ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ಅಭ್ಯಂಗಸ್ನಾನಕ್ಕಾಗಿ ಉಟಣೆ ಲಭ್ಯವಿಲ್ಲದಿದ್ದರೆ, ಅದರ ಬದಲು ಕೊಬ್ಬರಿ ಎಣ್ಣೆಯಲ್ಲಿ ಅರಿಶಿಣಪುಡಿ ಹಾಕಿ ಶರೀರಕ್ಕೆ ಹಚ್ಚಿಕೊಳ್ಳಬೇಕು.

ಪ್ರಶ್ನೆ : ತುಳಸಿವಿವಾಹಕ್ಕಾಗಿ ಪುರೋಹಿತರು ಸಿಗದಿದ್ದರೆ ಏನು ಮಾಡಬೇಕು ?

ಉತ್ತರ : ತುಳಸಿವಿವಾಹಕ್ಕಾಗಿ ಪುರೋಹಿತರು ಸಿಗದಿದ್ದರೆ ನಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಅಷ್ಟು ಭಾವಪೂರ್ಣ ರೀತಿಯಲ್ಲಿ ಪೂಜೆಯನ್ನು ಮಾಡಬೇಕು. ಅದೂ ಸಾಧ್ಯವಾಗದಿದ್ದರೆ, ಶ್ರೀ ತುಳಸೀದೇವ್ಯೈ ನಮಃ’ ಎಂದು ನಾಮಜಪವನ್ನು ಮಾಡುತ್ತ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯಾದ ಬಳಿಕ ರಾಮರಕ್ಷಾ ಸ್ತೋತ್ರದಲ್ಲಿರುವ ಈ ಮುಂದಿನ ಸಾಲುಗಳನ್ನು ಪಠಿಸಬೇಕು.

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ |
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ||
ರಾಮಾನ್ನಾಸ್ತಿ ಪರಾಯಣಮ್ ಪರತರಮ್ ರಾಮಸ್ಯ ದಾಸೋಽಸ್ಮ್ಯಹಮ್|
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ||

ತದಂತರ ಬೃಹತ್ ಸ್ತೋತ್ರ ರತ್ನಾಕರ ಈ ಗ್ರಂಥದಲ್ಲಿರುವ ಸರಸ್ವತಿ ಸ್ತೋತ್ರದ ಪ್ರಾರಂಭದ ಮುಂದಿನ ಸಾಲುಗಳನ್ನು ಪಠಿಸಬೇಕು.

ಯಾ ಕುನ್ದೇನ್ದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ|
ಯಾ ವೀಣಾವರದಣ್ಡಮಣ್ಡಿತಕರಾ ಯಾ ಶ್ವೇತಪದ್ಮಾಸನಾ||
ಯಾ ಬ್ರಹ್ಮಾಚ್ಯುತ ಶಂಕರಪ್ರಭೃತಿಭಿರ್ದೇವೈಃ ಸದಾ ವನ್ದಿತಾ|
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಃಶೇಷಜಾಡ್ಯಾಪಹಾ ||

ಈ ಶ್ಲೋಕವನ್ನು ಹೇಳಿದ ಬಳಿಕ ‘ಸುಮುಹೂರ್ತ ಸಾವಧಾನ’ ಎಂದು ಹೇಳಿ ತುಳಸಿಗೆ ಅಕ್ಷತೆಗಳನ್ನು ಅರ್ಪಿಸಬೇಕು.

ದೀಪಾವಳಿಯ ಆಧ್ಯಾತ್ಮಿಕ ಮಹತ್ವ, ಹಬ್ಬಗಳನ್ನು ಆಚರಿಸುವ ಪದ್ಧತಿಗಳು ಈ ವಿಷಯದಲ್ಲಿ ವಿವರವಾದ ಮಾಹಿತಿಯನ್ನು ಸನಾತನದ `ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’ ಈ ಗ್ರಂಥದಲ್ಲಿ ನೀಡಲಾಗಿದೆ. ಈ ಗ್ರಂಥವು www.sanatanshop.com ಜಾಲತಾಣದಲ್ಲಿ ಆನ್‌ಲೈನ್ ಮಾರಾಟಕ್ಕೆ ಲಭ್ಯವಿದೆ. ದೀಪಾವಳಿಯ ವಿವರವಾದ ಮಾಹಿತಿ ಇಲ್ಲಿಯೂ ಲಭ್ಯವಿದೆ.

ದೃಷ್ಟಿಕೋನ

ದೀಪಾವಳಿಯ ಹಬ್ಬದ ದಿನಗಳಲ್ಲಿ ಮೋಜು-ಮಜಾ ಮಾಡುವ ಪರಂಪರೆ ಪ್ರಾರಂಭವಾಗಿದೆ. ಸದ್ಯದ ಆಪತ್ಕಾಲದ ಸ್ಥಿತಿಯನ್ನು ನೋಡಿದರೆ ಮೋಜು-ಮಜಾ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡುವುದು ಯೋಗ್ಯವಾಗಿಲ್ಲ. ಕೊರೋನಾದ ಸಂಕಟ ಇದ್ದರೂ, ಆಪತ್ಕಾಲದಲ್ಲಿ ಯಾವ ಕ್ಷಣ ಯಾವ ಸಂಕಟ ಎದುರಾಗಬಹುದು ಎಂಬುದನ್ನು ಹೇಳಲು ಬರುವುದಿಲ್ಲ. ಜಾಗತಿಕ ಸ್ತರದಲ್ಲಿ ಕೆಲವು ದೇಶಗಳಲ್ಲಿ ಯುದ್ಧಗಳು ಪ್ರಾರಂಭವಾಗಿವೆ. ಅನೇಕ ದೇಶಗಳಲ್ಲಿ ಪರಸ್ಪರ ಘರ್ಷಣೆಗಳು ಪ್ರಾರಂಭವಾಗಿವೆ. ಅನೇಕ ಸ್ಥಳಗಳಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ಈ ಬೆಳವಣಿಗೆಗಳು ಜಗತ್ತನ್ನು ಮೂರನೇ ಮಹಾಯುದ್ಧದೆಡೆಗೆ ಕೊಂಡೊಯ್ಯಬಹುದು. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಸಾಧನೆಯ ಬಲವಿರುವುದು ಆವಶ್ಯಕವಾಗಿದೆ. ಸದ್ಯದ ಕಾಲವು ಸಾಧನೆಗೆ ಸಂಧಿಕಾಲವಾಗಿರುವುದರಿಂದ ಈ ಕಾಲದಲ್ಲಿ ಮಾಡಿದ ಸಾಧನೆಯ ಫಲವು ಅನೇಕ ಪಟ್ಟುಗಳಷ್ಟು ಹೆಚ್ಚು ಸಿಗುತ್ತದೆ. ಆದುದರಿಂದ ದೀಪಾವಳಿಯ ದಿನಗಳಲ್ಲಿ ಮೋಜು-ಮಜಾ ಮಾಡಲು ಸಮಯವನ್ನು ವ್ಯಯಿಸದೇ ಆದಷ್ಟು ಹೆಚ್ಚು ಸಮಯವನ್ನು ಸಾಧನೆಗೆ ನೀಡಲು ಪ್ರಯತ್ನಿಸಿದರೆ ವ್ಯಕ್ತಿಗೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು.

🖋️ ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

Spread the love
  • Related Posts

    ಬೆಳ್ತಂಗಡಿಯ ಸೋಮಂತ್ತಡ್ಕದಲ್ಲಿ ಬಸ್ ಅಫಘಾತ ಪ್ರಯಾಣಿಕರು ಪಾರು

    ಬೆಳ್ತಂಗಡಿ: ಧರ್ಮಸ್ಥಳದಿಂದ ಆಲಂದಡ್ಕ ಸಂಚರಿಸುತ್ತಿದ್ದ ಸಾರಿಗೆ ಬಸ್ ಮುಂಡಾಜೆ ಸಮೀಪದ ಸೋಮಂತಡ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಸರಿದ ಘಟನೆ ಜ. 28ರ ಮಂಗಳವಾರ ನಡೆದಿದೆ. ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಮುಂಡಾಜೆ ಮೂಲಕ ಆಲಂದಡ್ಕಕ್ಕೆ ಹೋಗುತ್ತಿದ್ದ ಬಸ್ ಸುಮಾರು 4.30 ಕ್ಕೆ ಅಪಘಾತ…

    Spread the love

    ಬಿಗ್ ಬಾಸ್ ಕನ್ನಡದ ಸೀಸನ್ 11ರಲ್ಲಿ ಗೆದ್ದು ಬೀಗಿದ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ

    ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿಸೊಗಡಿನ ಹನುಮಂತ ಹೊರಹೊಮ್ಮಿದ್ದಾರೆ.ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ ಬಿಗ್ ಬಾಸ್ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದಾರೆ. ತ್ರಿವಿಕ್ರಮ್ ಮತ್ತು ರಜತ್‌…

    Spread the love

    You Missed

    ಬೆಳ್ತಂಗಡಿಯ ಸೋಮಂತ್ತಡ್ಕದಲ್ಲಿ ಬಸ್ ಅಫಘಾತ ಪ್ರಯಾಣಿಕರು ಪಾರು

    • By admin
    • January 28, 2025
    • 137 views
    ಬೆಳ್ತಂಗಡಿಯ ಸೋಮಂತ್ತಡ್ಕದಲ್ಲಿ ಬಸ್ ಅಫಘಾತ ಪ್ರಯಾಣಿಕರು ಪಾರು

    ಬಿಗ್ ಬಾಸ್ ಕನ್ನಡದ ಸೀಸನ್ 11ರಲ್ಲಿ ಗೆದ್ದು ಬೀಗಿದ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ

    • By admin
    • January 26, 2025
    • 82 views
    ಬಿಗ್ ಬಾಸ್ ಕನ್ನಡದ ಸೀಸನ್ 11ರಲ್ಲಿ ಗೆದ್ದು ಬೀಗಿದ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ

    ತೆಂಗಿನ ಮರ ಏರುವ ಕಾರ್ಮಿಕರಿಗೆ ‘ಕೇರಾ’ ಸುರಕ್ಷಾ ವಿಮಾ ಯೋಜನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

    • By admin
    • January 19, 2025
    • 125 views
    ತೆಂಗಿನ ಮರ ಏರುವ ಕಾರ್ಮಿಕರಿಗೆ ‘ಕೇರಾ’ ಸುರಕ್ಷಾ ವಿಮಾ ಯೋಜನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

    ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

    • By admin
    • January 19, 2025
    • 31 views
    ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಉಸ್ತುವಾರಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

    • By admin
    • January 18, 2025
    • 32 views
    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡ ಮಂಜೂರುಗೊಳಿಸುವಂತೆ ಉಸ್ತುವಾರಿ ಸಚಿವರಿಗೆ ವಕೀಲರ ನಿಯೋಗದಿಂದ ಮನವಿ

    ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮ ಹಾಗೂ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ

    • By admin
    • January 18, 2025
    • 63 views
    ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮ ಹಾಗೂ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ