ಬೆಂಗಳೂರು: ಕೋವಿಡ್-19 ಚಿಕಿತ್ಸೆಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.
ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸು ಪಡೆದ ರೋಗಿಗಳಿಗೆ ಜನರಲ್ ವಾರ್ಡ್ಗೆ 5,200 ರೂಪಾಯಿ, ಹೆಚ್ಡಿಯುಗೆ 7000 ರೂಪಾಯಿ, ವೆಂಟಿಲೇಟರ್ ಇಲ್ಲದ ಐಸೋಲೇಷನ್ಗೆ 8500 ರೂಪಾಯಿ, ವೆಂಟಿಲೇಟರ್ ಇರುವ ಐಸೋಲೇಷನ್ ಐಸಿಯುಗೆ 10 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.
ಕೊರೊನಾ ಚಿಕಿತ್ಸೆಗೆ ಶುಲ್ಕಆರೋಗ್ಯ ಇಲಾಖೆ ಶಿಫಾರಸು ಇಲ್ಲದೇ ಆಸ್ಪತ್ರೆಗೆ ತೆರಳಿದವರಿಗೆ ಜನರಲ್ ವಾರ್ಡ್ನಲ್ಲಿ 10 ಸಾವಿರ ರೂಪಾಯಿ, ಹೆಚ್ಡಿಯುಗೆ 12 ಸಾವಿರ ರೂಪಾಯಿ, ವೆಂಟಿಲೇಟರ್ ಇಲ್ಲದ ಐಸೋಲೇಷನ್ ಐಸಿಯುಗೆ 15 ಸಾವಿರ ರೂಪಾಯಿ, ವೆಂಟಿಲೇಟರ್ ಇರುವ ಐಸೋಲೇಷನ್ ಐಸಿಯುಗೆ 25 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.
ಕೊರೊನಾ ಚಿಕಿತ್ಸೆಗೆ ಶುಲ್ಕಸರ್ಕಾರದ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ಆಸ್ಪತ್ರೆಗಳ ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು. ಆರೋಗ್ಯ ವಿಮೆ ಇರುವವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ಯಾನೆಲ್ನಲ್ಲಿ ಸೇರಿರುವ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ.
ಬಿಪಿಎಲ್ ಮತ್ತು ಎಪಿಎಲ್ ಹಾಗೂ ವಲಸಿಗ ಕಾರ್ಮಿಕರು ಪಿಡಿಎಸ್ ಕಾರ್ಡ್ ಇದ್ದರೂ ಚಿಕಿತ್ಸೆ ಕೊಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.