TRENDING
Next
Prev

ಕೊರೋನಾ ಲಸಿಕೆ ಖರೀದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ!

ನವದೆಹಲಿ : ಕೊರೊನಾ ಸೋಂಕಿತರಿಗೆ ಕೇಂದ್ರ ಸರ್ಕಾರ. ಶುಭಸುದ್ಧಿ ನೀಡಿದ್ದು, ಕೊರೋನಾ ವೈರಸ್ ಸದೆಬಡಿಯುವ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ಖರೀದಿ ಹಾಗೂ ವಿತರಣೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಹೌದು, ಕೊರೋನಾ ಲಸಿಕೆಯನ್ನು ತಾನೇ ಖರೀದಿಸಿ ಎಲ್ಲ ರಾಜ್ಯಗಳಿಗೆ ವಿತರಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಕೊರೋನಾ ಲಸಿಕೆ ವಿಚಾರವಾಗಿ ರಚಿಸಲಾಗಿರುವ ಕಾರ್ಯಪಡೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

READ ALSO

ಲಸಿಕೆ ಸಂಗ್ರಹಕ್ಕೆ ಬೇರೆ ಇನ್ನು ಯಾವುದೇ ಮಾರ್ಗಗಳನ್ನು ಕಂಡುಕೊಳ್ಳದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ಸೂಚಿಸಲಾಗಿದೆ. ಸರ್ಕಾರವೇ ಔಷಧ ಕಂಪನಿಗಳಿಂದ ಲಸಿಕೆಯನ್ನು ಖರೀದಿಸಿ ಸಾರ್ವಜನಿಕರಿಗೆ ನೀಡಲಿದೆ ಎಂದು ಪುಣೆಯ ಸಿಎಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದಾರ್​ ಪೂನಾವಾಲಾ ಈ ಹಿಂದೆ ಹೇಳಿದ್ದರು.