ಬೆಳ್ತಂಗಡಿ : ಚಿಕನ್ ಸೆಂಟರ್ ಹೆಸರಿನಲ್ಲಿ COVID 19 ತುರ್ತು ಸೇವೆಗಳ ಪಾಸ್ ಪಡೆದು ಅಕ್ರಮ ಗೋ ಸಾಗಾಟ ಮಾಡಿ ಭಜರಂಗದಳದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗೋ ಕಳ್ಳರು ಪರಾರಿಯಾದ ಘಟನೆ ವರದಿಯಾಗಿದೆ. ಭೀಮನ ಅಮವಾಸ್ಯೆ ದಿನ ಮುಂಜಾನೆ ಮೂರು ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಸುರ್ಯ ಪಡ್ಪು ಗೋ ವ್ಯಾಪರಿ ಆಟೋ ಚಾಲಕ ರಾಜೇಶ್ ಆತನ ಮನೆಯಿಂದ ಪಿಕಪ್ ವಾಹನದಲ್ಲಿ ಮೂರು ದನ , ಎರಡು ಕರುವನ್ನು ಅಮಾನುಷವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದಾಗ ಭಜರಂಗದಳ ಕಾರ್ಯಕರ್ತರು ಮನೆಯ ಪಕ್ಕದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ರಾಜೇಶ್ ಮತ್ತು ಆತನ ಸಹಚರರು ಅವರ ಬೆಂಗಾವಲು ವಾಹನ ಅಲ್ಟೋ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ವೇಳೆ ಅವರದ್ದೇ ಮತ್ತೊಂದು ತಂಡ ಕಸಾಯಿಖಾನೆಗೆ ದನವನ್ನು ತುರ್ತು ಸೇವೆಗಳ ಪಾಸ್ ಪಡೆದು ಪಿಕಪ್ ವಾಹನ ಮತ್ತು ಬೆಂಗಾವಲು ಕಾರಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರನ್ನು ಹಿಡಿಯಲು ಗುರುವಾಯನಕೆರೆ ಬಳಿ ಹೋದಾಗ ಇಬ್ಬರು ಭಜರಂಗದಳ ಕಾರ್ಯಕರ್ತರಾದ ಗುರು ಮತ್ತು ನಿತೀಶ್ ಮೇಲೆ ಮಾರಣಾಂತಿಕ ದಾಳಿ ಮಾಡಿ, ಎರಡು ಮೊಬೈಲ್ , ನಗ ನಗದು ದರೋಡೆ ಮಾಡಿದ್ದಾರೆ. ಹಲ್ಲೆಗೊಳಗಾದ ಭಜರಂಗದಳ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನ ಕರೀಂ ಎಂವರಿಗೆ ಸೇರಿದ ಪಿಕಪ್ ಇದಾಗಿದ್ದು, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಪಾಸ್ ಪಡೆದು ಗ್ರಾಮೀಣ ಭಾಗಗಳಿಂದ ಗೋ ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ .
ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟದ ದೊಡ್ಡ ಜಾಲ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA