ಡಾ.ರಾಜ್, ವಿಷ್ಣು, ಅಂಬರೀಶ್, ಎಲ್ಲಾ ದಿಗ್ಗಜರ ಜೊತೆ ಅಭಿನಯಿಸಿದ ಸ್ಯಾಂಡಲ್ ವುಡ್ ನ ಪೋಷಕ ನಟಿ ಶಾಂತಮ್ಮ ಇನ್ನಿಲ್ಲ

ಮೈಸೂರು: ಕನ್ನಡ ಸಿನಿಮಾರಂಗದ ಹಿರಿಯ ನಟಿ ಶಾಂತಮ್ಮ ನಿಧನರಾಗಿದ್ದಾರೆ. ಶಾಂತಮ್ಮ ಅವರಿಗೆ 95 ವರ್ಷ ವಯಸ್ಸಾಗಿತ್ತು . ಶನಿವಾರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೋನಾ ಪರಿಸ್ಥಿತಿ ಕಾರಣ ಮೈಸೂರಿನ ಮಗಳ ಮನೆಯಲ್ಲಿ ಶಾಂತಮ್ಮ ಇದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಹಿರಿಯ ನಟಿ ಸಾವನಪ್ಪಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

READ ALSO

ಸುಮಾರು 500 ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದರು. ಕನ್ನಡ.ತಮಿಳು.ತೆಲುಗು.ಮಲೆಯಾಳಂ ಸೇರಿ ದಕ್ಷಿಣ ಭಾರತದ ಎಲ್ಲ ಭಾಷಾಚಿತ್ರರಂಗದಲ್ಲಿಯೂ ಹೆಸರು ಮಾಡಿದ್ದರು. ಗುಬ್ಬಿ ವೀರಣ್ಣ ಅವರ ಪತ್ನಿ ಬಿ ಜಯಮ್ಮರ ತಮ್ಮನ ಹೆಂಡತಿ ಶಾಂತಮ್ಮ. ಶಾಂತಮ್ಮ ಅವರಿಗೆ ಆರು ಜನ ಮಕ್ಕಳಿದ್ದಾರೆ.