ಬೆಂಗಳೂರು : ಈಗಾಗಲೇ ಕೊರೋನಾ ವಿಮಾ ಸೌಲಭ್ಯವನ್ನು ಕೊರೋನಾ ಕರ್ತವ್ಯ ನಿರತ ವಾರಿಯರ್ಸ್ ಗಳಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ಕೋವಿಡ್-19 ಕರ್ತವ್ಯ ನಿರತ ರಾಜ್ಯದ ಗ್ರಾಮ ಪಂಚಾಯ್ತಿ ನೌಕರರು ಸೋಂಕಿನಿಂದ ಮರಣ ಹೊಂದಿದಲ್ಲಿ ರೂ.30 ಲಕ್ಷ ವಿಮಾ ಪರಿಹಾರವನ್ನು ನೀಡಲಾಗುತ್ತದೆ ಎಂಬುದಾಗಿ ಆದೇಶ ಹೊರಡಿಸಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾದಂತ ಪಿ ಶಿವಶಂಕರ್ ಆದೇಶ ಹೊರಡಿಸಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳಡಿ ಗ್ರಾಮ ಪಂಚಾಯ್ತಿಗಳಿಂದ ನಿಯೋಜಿತ ಸಿಬ್ಬಂದಿಯವರುಗಳು ರೋಗಗ್ರಸ್ಥರ ಸಂಪರ್ಕದಿಂದ ಮರಣ ಹೊಂದಿದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಪ್ರಾಮಾಣಿಕರಿಸಿದಲ್ಲಿ, ಅಂತಹವರ ಕುಟುಂಬಕ್ಕೆ ರೂ.30 ಲಕ್ಷಗಳನ್ನು ಜಿಲ್ಲಾ, ತಾಲೂಕು ಪಂಚಾಯ್ತಿಗಳಲ್ಲಿ ಲಭ್ಯವಿರುವ ಅನುದಾನದಿಂದ ವೆಚ್ಚ ಭರಿಸಲು ಎಂಬುದಾಗಿ ಆದೇಶಿಸಿದ್ದಾರೆ.