ಕಡಿರುದ್ಯಾವರ: ತಾಲೂಕಿನ ಕಡಿರುದ್ಯಾವರ ಗ್ರಾಮದ ಹೇಡ್ಯಾ ಎಂಬಲ್ಲಿ ಗಂಗಯ್ಯಗೌಡ ರವರಿಗೆ ಸೇರಿದ ಹಸುವೊಂದು 30ಅಡಿ ಆಳವಿರುವ ಬಾವಿಗೆ ಬಿದ್ದ ಘಟನೆ ಜ.17 ಶನಿವಾರದಂದು ನಡೆದಿದೆ.
ಹಸು ಗಬ್ಬದ್ದಾಗಿದ್ದು ಸ್ಥಳೀಯರಾದ ಪ್ರಕಾಶ್ ಗೌಡ, ಮಹಮ್ಮದ್ ಶಾಫಿ, ಕರಿಯ, ಬಾಲಚಂದ್ರನಾಯಕ್ , ಸೈಯದ್, ಶೇಖರ್ ರವರು ಕ್ರೈನ್ ಸಹಾಯದಿಂದ ಹಸುವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿ ಹಸುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ.






