ಗುರುವಾಯನಕೆರೆ: ರಾಷ್ಟ್ರಮಟ್ಟದಲ್ಲಿ ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸುವ ಕಂಪನಿ ಸೆಕ್ರೆಟರಿ ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
200 ಅಂಕಗಳ ಪರೀಕ್ಷೆಯಲ್ಲಿ 183 ಅಂಕಗಳನ್ನು ಪಡೆದ ಭವೇಶ್ ಸೀರ್ವಿ ರಾಜ್ಯದಲ್ಲೇ ಅದ್ವಿತೀಯ ಸಾಧಕನಾಗಿ ಗುರುತಿಸಿಕೊಂಡಿದ್ದಾನೆ. ಸಂಜನಾ ಎಸ್. ಜಿ. 175, ತನಯ್ ವಿ.ಎ. 173, ಮಹಮ್ಮದ್ ಸಾಹಿಲ್ 173, ಜೀವನ್ 155, ಶೀತಲ್ ಕೆ ಆರ್ 144, ಮುರಳಿ ಆರ್ 143, ಅರವಿಂದ್ 128, ಭಾನುಪ್ರಕಾಶ್ 115, ವಿದ್ಯಾ ಗೌರಿ ಗೌಡ 115 ಅಂಕಗಳನ್ನು ಪಡೆದುಕೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ನೀಟ್, ಜೆಇಇ, ಸಿಇಟಿ ಮೊದಲಾದ ಕೋಚಿಂಗ್ ಅತ್ಯುತ್ತಮ ಮಟ್ಟದಲ್ಲಿ ಇದ್ದರೆ, ವಾಣಿಜ್ಯ ವಿಭಾಗದಲ್ಲಿ ಸಿಎ, ಸಿಎಸ್, ಕ್ಲಾಟ್ ಕೋಚಿಂಗ್ ಉನ್ನತ ಮಟ್ಟದಲ್ಲಿದೆ. ಹೀಗಾಗಿಯೇ ವಾಣಿಜ್ಯ ವಿಭಾಗದ ಸಿ ಎಸ್ ಫಲಿತಾಂಶದಲ್ಲೂ ಎಕ್ಸೆಲ್ ನ ವಿದ್ಯಾರ್ಥಿಗಳು ನೂತನ ದಾಖಲೆ ಸ್ಥಾಪಿಸಿದ್ದಾರೆ.
ಸಾಧಕರನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಡೀನ್, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.





