ಬಡ ಅಜ್ಜಿಯ ಗುಡಿಸಲಿಗೆ ಬಂದರು ಜಿಲ್ಲಾಧಿಕಾರಿ! ಅಲ್ಲಿಯೇ ಊಟ ಮಾಡಿ, ಹೋಗುವಾಗ ಅಜ್ಜಿ ಕೈಗೆ ಕವರ್ ಕೊಟ್ಟರು! ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬೇರೇನಿತ್ತು ಗೊತ್ತಾ…….?

ಬಡ ಅಜ್ಜಿಯ ಗುಡಿಸಲಿಗೆ ಬಂದರು ಜಿಲ್ಲಾಧಿಕಾರಿ! ಅಲ್ಲಿಯೇ ಊಟ ಮಾಡಿ, ಹೋಗುವಾಗ ಅಜ್ಜಿ ಕೈಗೆ ಕವರ್ ಕೊಟ್ಟರು! ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬೇರೇನಿತ್ತು ಗೊತ್ತಾ…….?

ಕರುಣೆ, ದಯೆ ಇರುವ ಸಾಕಷ್ಟು ಜನರು ನಮಗೆ ಕಾಣಸಿಗುತ್ತಾರೆ, ಒಬ್ಬರಿಗೆ ಸಹಾಯ ಮಾಡುವುದೆಂದರೆ ಕೆಲವು ಜನರಿಗೆ ಸಾಕಷ್ಟು ಖುಷಿ ನೀಡುವ ಸಂಗತಿ, ಅಂತವರುಗಳಲ್ಲಿ ಕೆಲವರು ತಮ್ಮ ಸ್ವಂತ ದುಡ್ಡಿನಿಂದ ಸಹಾಯ ಮಾಡಿದರೆ, ಇನ್ನೂ ಹಲವರು ತಮ್ಮ ಕೈಯಲ್ಲಿದ್ದ ಅಧಿಕಾರದಿಂದ ಸಹಾಯ ಮಾಡುತ್ತಿರುತ್ತಾರೆ.

READ ALSO

ಇಂತವರುಗಳಲ್ಲಿ ಇಂದು ನಾವು ನಿಮಗೆ ಒಬ್ಬ ಕರುಣಾಳು ಅಧಿಕಾರಿಯ ಬಗ್ಗೆ ಹಾಗೂ ಅವರ ಕಾರ್ಯಗಳ ಬಗ್ಗೆ ತಿಳಿಸುತ್ತೇವೆ ಬನ್ನಿ ನೋಡೋಣ…

ಒಬ್ಬ ಅಜ್ಜಿ ಒಂದು ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು, ಆ ಅಜ್ಜಿಗೆ 80 ವರ್ಷ ವಯಸ್ಸು, ಅಷ್ಟೇ ಅಲ್ಲದೇ ದೈಹಿಕವಾಗಿ ಸಾಕಷ್ಟು ಬಳಲಿದ್ದರು, ರೋಗದಿಂದ ಕೂಡ ಬಲಳುತ್ತಿದ್ದರು. ಇವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ, ಅಲ್ಲದೇ ಅವರಿಗೆ ಸರಕಾರದ ಯಾವ ಯೋಜನೆಗಳು ಸಹ ಲಭಿಸುತ್ತಿರಲಿಲ್ಲ. ಆ ಅಜ್ಜಿ ಕೇವಲ ದೇವರಲ್ಲಿ ನನ್ನನ್ನು ಬೇಗನೆ ಕರೆದುಕೊಂಡು ಬಿಡು ಎಂದು ಪ್ರಾರ್ಥಿಸುತ್ತಿದ್ದರು. ಇಂತಹ ಸಮಯದಲ್ಲಿ ಆ ಅಜ್ಜಿ ವಾಸಿಸುತ್ತಿದ್ದ ಆ ಪುಟ್ಟ ಮನೆಗೆ ಸ್ವತಃ ಆ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಭೇಟಿ ನೀಡಿದರು!

ಈ ಅಜ್ಜಿ ಇರುವುದು ತಮಿಳುನಾಡಿನ ಕರೂರ್ ಎಂಬ ಜಿಲ್ಲೆಯಲ್ಲಿ ಆ ಅಜ್ಜಿಯ ಪರಿಸ್ಥಿತಿ ಆ ಜಿಲ್ಲೆಯ ಜಿಲ್ಲಾಧಿಕಾರಿ ಟಿ.ಅಂಬಜಗೇನ್ ಅವರಿಗೆ ಹೇಗೋ ಗೊತ್ತಾಗುತ್ತದೆ. ಅವರು ತಮ್ಮ ಧರ್ಮ ಪತ್ನಿಗೆ ಊಟವನ್ನು ತಯಾರಿಸಲು ಹೇಳಿದರು, ಕ್ಯಾರಿಯರ್ ಸಮೇತ ಅವರು ಆ ಅಜ್ಜಿ ಇರುವ ಜೋಪಡಿಗೆ ತೆರಳಿದರು. ಈ ಅಜ್ಜಿಯ ಅಕ್ಕ ಪಕ್ಕದವರು ಕೂಡ ಇವರೊಂದಿಗೆ ಹೆಚ್ಚು ಮಾತಾನ್ನಾಡುತ್ತಿರಲಿಲ್ಲ, ಇನ್ನೂ ಸಹಾಯದ ಮಾತಂತೂ ದೂರ. ಆದರೆ ಒಂದು ದಿನ ಆ ಜೋಪಡಿಗೆ ಇದ್ದಕ್ಕಿದ್ದ ಹಾಗೆ ಆ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಕೈಯಲ್ಲಿ ಊಟದ ಕ್ಯಾರಿಯರ್ ಹಿಡಿದು ಆ ಅಜ್ಜಿಯ ಮನೆಯ ಮುಂದೆ ನಿಂತು ಅಜ್ಜಿ “ಒಳಗೆ ಬರಬಹುದಾ ಅಜ್ಜಿ?” ಎಂದು ಕೇಳುತ್ತ ನಿಂತಿದ್ದರು. “ಅಜ್ಜಿ ನಾನು ಇವತ್ತು ನಿಮ್ಮೊಡನೆ ಊಟ ಮಾಡಲು ಬಂದಿದ್ದೇನೆ ನಡೆಯಿರಿ” ಎಂದಾಗ ಆ ಅಜ್ಜಿ ತಡವರಿಸುತ್ತ ಒಳಗೆ ಕರೆದರು. ಒಳಗೆ ಹೋಗಿ ನೆಲದ ಮೇಲೆಯೇ ಕುಳಿತುಕೊಂಡ ಜಿಲ್ಲಾಧಿಕಾರಿ ಟಿ. ಅಂಬಜಗೇನ್ ಅವರಿಗೆ ಆ ಅಜ್ಜಿ “ಸಾಹೇಬರೆ ನನ್ನ ಮನೆಯಲ್ಲಿ ಊಟ ಮಾಡಲು ತಟ್ಟೆ ಇಲ್ಲ, ಬದಲಾಗಿ ನಾನು ಬಾಳೆ ಎಲೆಯ ಮೇಲೆ ಊಟ ಮಾಡುತ್ತೇನೆ” ಎನ್ನುತ್ತಾಳೆ. ಇದಕ್ಕೆ ಬಹಳಷ್ಟು ಸಂತಸಗೊಂಡ ಇವರು “ನಾನು ಕೂಡ ಅದರಲ್ಲಿಯೇ ಊಟ ಮಾಡುತ್ತೇನೆ” ಎಂದು ಬಾಳೆ ಎಲೆಯಲ್ಲಿಯೇ ಊಟ ಮಾಡಿದರು. ಆ ಅಜ್ಜಿ ಹಾಗೂ ಅಕ್ಕ ಪಕ್ಕದ ಮನೆಯವರು ದಂಗು ಬಡಿದು ನಿಂತಿದ್ದರು.

ನಂತರ ವಾಪಸ್ ಹೋಗುವಾಗ ಅಜ್ಜಿಯ ಕೈಗೆ ಒಂದು ಕವರ್ ಇಟ್ಟರು. ಅದರಲ್ಲಿ ದುಡ್ಡಿದೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬದಲಿಗೆ ಅದರಲ್ಲಿ ಅಜ್ಜಿಗೆ ಇಂದಿರಾ ಆವಾಸ್ ಯೋಜನೆಯ ಮನೆಪತ್ರ, ವೃದ್ದಾಪ್ಯ ವೇತನದ ದಾಖಲೆ ಸೇರಿದಂತೆ, ಆ ಅಜ್ಜಿಗೆ ನ್ಯಾಯವಾಗಿ ಸಿಗಬೇಕಾದ ಎಲ್ಲ ಯಜನೆಗಳ ದಾಖಲಾತಿಗಳಿದ್ದವು! “ನೀವು ಹಣಕ್ಕಾಗಿ ಬ್ಯಾಂಕ್ ಗೂ ಹೋಗಬೇಕಾಗಿಲ್ಲ ಬದಲಾಗಿ ಆ ಹಣವೇ ನಿಮ್ಮನ್ನು ಬಂದು ಸೇರುವಂತೆ ಮಾಡುತ್ತೇನೆ” ಎಂದು ಹೇಳಿ ಜಿಲ್ಲಾಧಿಕಾರಿ ತಮ್ಮ ಕಾರು ಏರಿ ಹೊರಟಾಗ ಅಜ್ಜಿ ಹಾಗೂ ಸುತ್ತ ನೆರೆದಿದ್ದ ಜನರ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತಿದ್ದವು..! ಇಂದು ಎಲ್ಲ ಕಡೆ ಇಂಥ ಅಧಿಕಾರಿಗಳ ಅವಶ್ಯಕತೆ ಇದೆ, ಇಂತಹ ಮನಸ್ಸಿನ ಅಧಿಕಾರಿಗಳು ಇನ್ನಷ್ಟು ಹುಟ್ಟಿಬರಲಿ ಸರಕಾರದ ಕೆಲಸ ಕೇವಲ ಕಛೇರಿ ಕೆಲಸ ಮಾತ್ರ ಅಲ್ಲ ಜನರ ಸೇವೆಯೂ ಕೂಡ ಎಂದು ತೋರಿಸಿಕೊಟ್ಟ ಜಿಲ್ಲಾಧಿಕಾರಿಯವರಿಗೆ ಶುಭವಾಗಲಿ.