ನಿಟ್ಟೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ನಿಟ್ಟೆ ವಲಯ ವತಿಯಿಂದ ವೃಕ್ಷ ರೋಪಾಣ ಕಾರ್ಯಕ್ರಮವು ನಿಟ್ಟೆ ಡಾ. ಎನ್.ಎಸ್.ಎ.ಎಮ್ ಪಿ.ಯು ಕಾಲೇಜು ಬಳಿ ನಡೆಯಿತು.
“ನಮ್ಮ ಜೀವನದಲ್ಲಿ ಆಮ್ಲಜನಕದ ಉಪಯೋಗ ಹೇಳಲು ಅಸಾಧ್ಯವಾದ ಮಾತು. ಸಂಘಟನೆಯ ಯುವಕರು ಈ ರೀತಿಯ ಕಾರ್ಯಕ್ರಮ ಮಾಡುದರ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವುದು ಶ್ಲಾಘನೀಯ” ಎಂದು ಕೆಮ್ಮಣ್ಣು ಕ್ಷೇತ್ರದ ಅರ್ಚಕರಾದ ಶ್ರೀ ವೆಂಕಟಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ಬಜರಂಗದಳ ಕರ್ನಾಟಕ ರಾಜ್ಯ ಸಂಯೋಜಕರಾದ ಸುನಿಲ್ ಕೆ ಆರ್ ಮಾತನಾಡಿ “ಆಧುನಿಕ ಯುಗದಲ್ಲಿ ಆಮ್ಲಜನಕದ ಕೊರತೆ ನೀಗಿಸುವ ಸಲುವಾಗಿ ವೃಕ್ಷ ರೋಪಾಣ ದೇಶಾದ್ಯಂತ ನಡೆಯುತ್ತಿದೆ ಎಂದರು.
ವಿ.ಎಚ್.ಪಿ ಪ್ರಖಂಡ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಸಹಸಂಚಾಲಕ್ ಸುನಿಲ್ ನಿಟ್ಟೆ, ವಿ.ಎಚ್.ಪಿ ನಿಟ್ಟೆ ವಲಯ ಕಾರ್ಯದರ್ಶಿ ಸುಶಾಂತ್ ಕೆಮ್ಮಣ್ಣು, ಸಂಚಾಲಕರಾದ ಪ್ರಣಯ್ ನಿಟ್ಟೆ, ಸಹಸಂಚಾಲಕ್ ಮನೀಷ್ ನಿಟ್ಟೆ, ನಾಗೇಶ್ ನಿಟ್ಟೆ, ಸುಕೇಶ್ ದೂಪದಕಟ್ಟೆ, ಎಬಿವಿಪಿ ಪ್ರಮುಖರಾದ ಆಶೀಶ್ ಬೋಳ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.