ಬೆಳ್ತಂಗಡಿ: ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ 4 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಪೂಜೆ ಕಾರ್ಯಕ್ರಮವು ಶ್ರೀ ನಾರಾಯಣ ಗುರು ಧರ್ಮ ಪರಿಪಾವಲನ ಯೋಗಂ ತೋಟತ್ತಾಡಿ ವಠಾರದಲ್ಲಿ ನಡೆಸಲಾಯಿತು.
ಶ್ರೀ ದೇವರ ಮೂರ್ತಿ ಪ್ರತಿಷ್ಠೆ ನಂತರ ಭಜನಾ ಕಾರ್ಯಕ್ರಮದ ಉಧ್ಘಾಟನೆಯನ್ನು ಉಜಿರೆ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ರಾದ ಶ್ರೀಮತಿ ನಮಿತಾ .ಕೆ , ಧರ್ಮ ರಕ್ಷಾ ವೇದಿಕೆ ಅಧ್ಯಕ್ಷ ಪ್ರಸಾದ್ ಮಡಿಯೂರು, ಮಾಜಿ ಸೈನಿಕರು ಶಿವದಾಸನ್ ಪಾಲೆತ್ತಾಡಿ, ತಾ ಪಂ ಸದಸ್ಯ ಕೋರಗಪ್ಪ ಗೌಡ ಅರಣೆಪಾದೆ, ಅಭಿನಂದನ್ ಹರೀಶ್ ಕುಮಾರ್, ಗ್ರಾಮ ಪಂ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್,ಗ್ರಾಮ ಪಂ ಮಾಜಿ ಸದಸ್ಯ ಓಬಯ್ಯ ಗೌಡ ಬಾಯಿ ತ್ಯಾರು,ಧರ್ಮ ಜಾಗರಣ ದಿನಕರ ಅದೇಲು, ತೀಕ್ಷಿತ್ ದಿಡುಪೆ, SNDP ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಲತಾ , ಮತ್ತು ಧರ್ಮರಕ್ಷಾ ವೇದಿಕೆ ಸದಸ್ಯರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.ಸಂಜೆ ಶ್ರೀ ದೇವರ ಮೂರ್ತಿ ವೈಭವಯುತ ಶೋಭಾಯಾತ್ರೆ ನಂತರ ಬೆಂದ್ರಾಳ ಕೃಷ್ಣ ನದಿಯ ಲ್ಲಿ ವಿಸರ್ಜನೆ ನಡೆಯಿತು.