ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಸಾನ್ನಿಧ್ಯ ಸರತಿ ಸಾಲು ಸಂಕೀರ್ಣದ ಉದ್ಘಾಟನೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ 2024-2025ರ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಸಾನ್ನಿಧ್ಯ ಸರತಿ ಸಾಲು ಸಂಕೀರ್ಣದ ಲೋಕಾರ್ಪಣೆ ಹಾಗೂ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ದೇವಾಲಯದ ನಿರ್ವಹಣೆ ಮತ್ತು ಭಕ್ತರ ಆರೈಕೆಗಾಗಿ ಒಂದು ಮಾದರಿ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸಲಾಗಿದ್ದು. ಸರತಿ ಸಾಲಿನಲ್ಲಿ ಕಾಯುವ ಅವಧಿಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ. ಈ ಕೆಳಗಿನ ವಿಶೇಷ ವೈಶಿಷ್ಟ್ಯಗಳೊಂದಿಗೆ ಹೊಸ ಸರತಿ ಸಾಲಿನ ಸಂಕೀರ್ಣ ಶ್ರೀ ಸಾನ್ನಿಧ್ಯ ವನ್ನು ನಿರ್ಮಿಸಲಾಗಿದೆ. ನೂತನ ಸರತಿ ಸಾಲಿನ ಸಂಕೀರ್ಣದ ವಿಸ್ತೀರ್ಣ 2,75.177 ಚದರ ಅಡಿ ಆಗಿದ್ದು ಇದು ವೃತ್ತಾಕಾರದಲ್ಲಿದೆ. 16 ಸಭಾಂಗಣಗಳೊಂದಿಗೆ ಎರಡು ಅಂತಸ್ತಿನ ರಚನೆಯಾಗಿದೆ. ಪ್ರತಿ ಸಭಾಂಗಣದಲ್ಲಿ 600 ರಿಂದ 800 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಏಕ ಕಾಲಕ್ಕೆ ಒಟ್ಟು 10,000-12.000 ಜನರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂಕೀರ್ಣವು ವಿಶಾಲವಾದ ಸಭಾಂಗಣಗಳನ್ನು ಹೊಂದಿದ್ದು, ಭಕ್ತಾದಿಗಳು ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಬದಲು ಆರಾಮವಾಗಿ ಕಾಯಬಹುದು.ಪ್ರತಿ ಸಭಾಂಗಣವು ಪ್ರವೇಶ, ನಿರ್ಗಮನ ಮತ್ತು ತುರ್ತುನಿರ್ಗಮನ ದ್ವಾರಗಳು. ಕುಡಿಯುವ ನೀರು. ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಇತರ ವಿಷಯಗಳ ಬಗ್ಗೆ ಡಿಜಿಟಲ್ ಟಿ.ವಿ.ಗಳ ಮೂಲಕ ಮಾಹಿತಿ, ಮಾರ್ಗದರ್ಶನಗಳನ್ನು ನೀಡಲಾಗುತ್ತದೆ. ಕ್ಯೂ ಕಾಂಪ್ಲೆಕ್ಸ್‌ನ ಕಾರ್ಯಾಚರಣೆಯು ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟಿದ್ದು. ಪ್ರತಿ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆಯನ್ನು ಕಾಣಬಹುದಾಗಿದೆ. ಸಂಪೂರ್ಣ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸುಸಜ್ಜಿತವಾದ 160 AI ಆಧಾರಿತ ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ, ಕಣ್ಣಾವಲು ಮತ್ತು ಸುಧಾರಿತ ಕಾರ್ಯಗಳನ್ನು ಮಾಡಲಾಗುತ್ತದೆ. ಈ ಸ್ಮಾರ್ಟ್ ಕ್ಯಾಮೆರಾಗಳನ್ನು ಸೂಕ್ತ ಸಾಫ್ಟ್‌ವೇ‌ರ್ ಮತ್ತು ಅಪ್ಲಿಕೇಶನ್‌ಗಳೊಂದಿಗೆ ಅಳವಡಿಸಲಾಗಿದೆ. ಇವುಗಳಿಂದ ಭಕ್ತಾದಿಗಳಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುವುದರೊಂದಿಗೆ ಆತಂಕ ಮುಕ್ತ ವಾತಾವರಣವನ್ನು ಕಲ್ಪಿಸಲಾಗುತ್ತದೆ ಎಂದು ಧರ್ಮಸ್ಥಳ ಧರ್ಮಾದಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ವಿವರಿಸಿದರು.

ಬಳಿಕ ಕ್ಯೂ ಕಾಂಪ್ಲೆಕ್ಸ್ ಉದ್ಘಾಟನೆ ನೆರವೇರಿಸಿ ಅಮೃತವರ್ಷಿಣಿ ಸಭಾಂಗಣದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯು ಕಾಂಪ್ಲೆಕ್ಸ್ ಮಾಡಿದ್ದಾರೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಾರೆ, ಭಕ್ತರು ನಿಲ್ಲುವುದಕ್ಕಾಗಿ ಕ್ಯು ಕಾಂಪ್ಲೆಕ್ಸ್ ಮಾಡಲಾಗಿದೆ, ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ಎಂದು ಹೇಳಿದರು. ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು ಸಮಾನತೆಯನ್ನು ತೋರಿಸುತ್ತದೆ, ಧಾರ್ಮಿಕ ಸಂಸ್ಥೆಗಳು ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿವೆ, ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿ, ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ ಎಂದು ಹೇಳಿದರು. ನಮ್ಮ ಯುವಜನರಿಗೆ ನಮ್ಮ ನಾಗರಿಕತೆಯ ಆಳದ ಬಗ್ಗೆ ಅರಿವು ಮೂಡಿಸಲು ನಾನು ಎಲ್ಲಾ ಧಾರ್ಮಿಕ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ. ನಮ್ಮ ಯುವಕರು ನಮ್ಮ ನಾಗರಿಕತೆಯ ಚಿನ್ನದ ಗಣಿಯ ಸದ್ಗುಣ, ಬುದ್ಧಿವಂತಿಕೆ, ಜ್ಞಾನ ಮತ್ತು ಆಳಕ್ಕೆ ತೆರೆದುಕೊಳ್ಳಬೇಕು, ಆದ್ದರಿಂದ ಸಮಕಾಲೀನ ಕಾಲದಲ್ಲಿ ಅಮೂಲ್ಯವಾದ ಪರಂಪರೆಯು ಕಳೆದುಹೋಗುವುದಿಲ್ಲ. ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು, ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು ಮೆಸಪೊಟೆಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ, ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ. ಜನರ ಅಭಿಪ್ರಾಯಕ್ಕೆ ಬೆಲೆ ಇದೆ ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೆಶ್ ಚೌಟ, ಶ್ರೀಮತಿ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್ ಹಾಗೂಉಪಸ್ಥಿತರಿದ್ದರು.

Spread the love
  • Related Posts

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಬೆಳ್ತಂಗಡಿ: ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ 6-7ನೇ ತರಗತಿ ವಿಭಾಗದಲ್ಲಿ ಪುಷ್ಟಿ ಮುಂಡಾಜೆಗೆ ಪ್ರಥಮ ಸ್ಥಾನ. ಅಳದಂಗಡಿ ಆಮಂತ್ರಣ ಪರಿವಾರದ ದಶಮಾನೋತ್ಸವದ ಸಂದರ್ಭ ಶನಿವಾರ ಅಳದಂಗಡಿಯಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ 6-7ನೇ ತರಗತಿ ವಿಭಾಗದಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ…

    Spread the love

    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಮುಕ್ತಾಯಗೊಂಡಿದ್ದು, ಗಿಲ್ಲಿ ನಟ ವಿನ್ನರಾಗಿದ್ದಾರೆ. ಅವರು 50 ಲಕ್ಷ ರೂಪಾಯಿ ಮತ್ತು ಬಿಗ್ ಬಾಸ್ ಟ್ರೋಫಿಯನ್ನು ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್-ಅಪ್ ಆಗಿ ಮುಗಿಸಿದರು, ಅಶ್ವಿನಿ ಗೌಡ ಎರಡನೇ…

    Spread the love

    You Missed

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    • By admin
    • January 20, 2026
    • 25 views
    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    • By admin
    • January 18, 2026
    • 64 views
    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    • By admin
    • January 18, 2026
    • 66 views
    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️

    • By admin
    • January 18, 2026
    • 53 views
    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️

    ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಹಾಗೂ ನ್ಯಾಯಾಲಯದ ಪ್ರತಿಬಂಧಕ ಆಜ್ಞೆ ಉಲ್ಲಂಘಿಸಿದ ವಿಠಲಗೌಡ ಬಂಧನಕ್ಕೆ ಕೋರ್ಟ್ ಆದೇಶ

    • By admin
    • January 17, 2026
    • 83 views
    ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಹಾಗೂ ನ್ಯಾಯಾಲಯದ ಪ್ರತಿಬಂಧಕ ಆಜ್ಞೆ ಉಲ್ಲಂಘಿಸಿದ ವಿಠಲಗೌಡ  ಬಂಧನಕ್ಕೆ ಕೋರ್ಟ್ ಆದೇಶ

    ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರದ ಆದೇಶ

    • By admin
    • January 17, 2026
    • 52 views
    ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವಂತೆ ಸರ್ಕಾರದ ಆದೇಶ