ಮಾಣಿ ಗ್ರಾಮದ ಇತಿಹಾಸದ ಬೆಳಕು ಚೆಲ್ಲುವ ದಾಸಗದ್ದೆ ಶಿಲಾ ಶಾಸನ ದೊರೆತ ಪರಿಸರದಲ್ಲಿ ಪ್ರಾಚೀನ ಎರಡು ಲಿಂಗಮುದ್ರೆ ಕಲ್ಲು ಮತ್ತು ಒಂದು ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿಕಲ್ಲು ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಇತಿಹಾಸದ ಬೆಳಕನ್ನು ಚೆಲ್ಲುವ ವೀರಕಂಭ ದಾಸಗದ್ದೆ ಶಿಲಾ ಶಾಸನ ಇರುವ ಪರಿಸರದಲ್ಲಿ ಅರೆಬೆಟ್ಟು- ಪದವು ಮತ್ತು ತೆಕ್ಕಿಯಾಪು ಗಡಿ ಯಲ್ಲಿ ಎರಡು ಲಿಂಗ ಮುದ್ರೆಯ ಕಲ್ಲುಗಳು ಹಾಗೂ ಮಾಣಿ ,ಅನಂತಾಡಿ, ವೀರಕಂಭ ಸಂದಿಸುವ ವಾಮನಮೇರ್ ಪಡ್ಪು ಎಂಬಲ್ಲಿ ಅರಸೊತ್ತಿಗೆ ಕಾಲದ ಪ್ರಾಚೀನ ಗಡಿಕಲ್ಲು ಲಭ್ಯ ವಾಗಿದೆ.
ಮಾಣಿ ಗ್ರಾಮದ ಇತಿಹಾಸ ಮೇಲೆ ಬೆಳಕು ಚೆಲ್ಲುವ ಮಾಣಿ -ಕಂಬಳ ಶಾಸನ 1969ನೇ ಇಸವಿಯ ಆಸುಪಾಸಿನಲ್ಲಿ ಹಾಸನ- ಮಂಗಳೂರು ರೈಲು ಮಾರ್ಗ ನಿರ್ಮಾಣ ದ ವೇಳೆ ಮಣ್ಣಿನಲ್ಲಿ ಸೇರಿರುವ ಕಾರಣ. ದಾಸಗದ್ದೆಯ ಶಾಸನ ಮಾಣಿ ಕಂಬಳ ಶಾಸನ ಸಮಕಾಲೀನ ವಾಗಿರುವ ಸಾದ್ಯತೆ ಇರುವುದರಿಂದ ಸದ್ಯ ಲಭ್ಯವಿರುವ ಈ ಒಂದು ಶಾಸನ ಮಾಣಿ ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಏಕೈಕ ಐತಿಹಾಸಿಕ ಮಹತ್ವದ ಶಾಸನ ಆಗಿದೆ.ಅದರ ನೇರವಾಗಿ ಅರಬೆಟ್ಟು ಪದವು ಮತ್ತು ತೆಕ್ಕಿಯಾಪು ಗಡಿಯಲ್ಲಿ ಲಿಂಗಮುದ್ರೆಯ ಕಲ್ಲು ಲಭ್ಯ ವಾಗಿದೆ.ಲಿಂಗಮುದ್ರೆಯ ಕಲ್ಲು ಪ್ರಾಚೀನ ಅರಸರ ಕಾಲದಲ್ಲಿ ಗ್ರಾಮದ ಸೀಮಾ ಬಂದಿ ಕಲ್ಲು ಆಗಿದ್ದು. ಇವುಗಳನ್ನು ಪ್ರಾಚೀನ ಕಾಲದಲ್ಲಿ ದೇವರ ಹೆಸರಿನಲ್ಲಿ ಉಂಬಳಿ ಬಿಟ್ಟ ಭೂಮಿ ಮತ್ತು ಗ್ರಾಮದ ವ್ಯಾಪ್ತಿ ಪ್ರದೇಶ ಗುರುತಿಸಲ್ಪಡುವ ಉದ್ದೇಶದಿಂದ ಸ್ತಾಪಿಸಲ್ಪಡುತ್ತಿದ್ದರು ಎನ್ನಲಾಗಿದೆ. ಸಾದಾರಣ ಎತ್ತರದ ಗಾತ್ರದ ಶಿಲೆಯ ಮದ್ಯದಲ್ಲಿ ಶಿವಲಿಂಗ ಹಾಗೂ ಅಕ್ಕ ಪಕ್ಕ ಸೂರ್ಯ ಚಂದ್ರರ ಕೆತ್ತನೆ ಇದೆ.
ಮಾಣಿ – ವೀರಕಂಭ- ಅನಂತಾಡಿ ಮೂರು ಗ್ರಾಮಗಳು ಸಂದಿಸುವ ವಾಮನಮೇರ್ ಪದವು ಎಂಬಲ್ಲಿ ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿ ಬಾಂದು ಕಲ್ಲು ಲಭ್ಯ ವಾಗಿರುತ್ತವೆ. ಇನ್ನು ಹುಡುಕಾಡಿದರೆ ಇನ್ನೂ ಲಿಂಗ ಮುದ್ರೆಯ ಕಲ್ಲುಗಳು,ಗಡಿ ಕಲ್ಲು ಸಿಗುವ ಸಾದ್ಯತೆ ಇದೆ ಎಂದು ಸ್ತಳೀಯರು ಅಭಿಪ್ರಾಯ ಪಟ್ಟಿದ್ದಾರೆ.ಒಟ್ಟಾರೆ ಈ ಬಗ್ಗೆ ಅದ್ಯಯನ ನಡೆಸಿದರೆ ಸ್ತಳೀಯ ಇತಿಹಾಸದ ಬಗ್ಗೆ ಕುತೂಹಲಕಾರಿ ಸಂಗತಿಗಳು ಅನಾವರಣ ಆಗಬಹುದು ಎಂದು ನಿರೀಕ್ಷಿಸಲಾಗಿದೆ.