ದಿನಾಂಕ 26.01 .21 ರಂದು ಕೆರ್ವಾಶೆಯ ಯುವಜನ ವೇದಿಕೆಯ 31ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ದಿಬ್ಬಣ ನಾಟಕದ ಪ್ರಥಮ ಪ್ರಯೋಗವು ಕಿಕ್ಕಿರಿದು ಸೇರಿದ ಕಲಾಭಿಮಾನಿಗಳ ಚಪ್ಪಾಳೆ ಗಿಟ್ಟಿಸುದರೊಂದಿಗೆ ಕಣ್ಮನ ತಣಿಸುವಲ್ಲಿ ಯಶಸ್ವಿ ಯಾಗಿ ಈ ವರ್ಷದ ಯಶಸ್ವಿ ನಾಟಕವಾಗಿ ಹೊರಹೊಮ್ಮಿದೆ.
” ಜಿಲ್ಲಾ ರಾಜೋತ್ಸವ ಪ್ರಶಸ್ತಿ’, ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ” ಪುರಸ್ಕೃತ ಕಲಾ ಬ್ರಹ್ಮ ದಿನೇಶ್ ಪ್ರಭು ಕಲ್ಲೊಟ್ಟೆ ಸಾರಥ್ಯದ ಪಲ್ಲವಿ ಕಲಾವಿದೆರ್ ಕಾರ್ಕಳ ಇವರ ಈ ವರ್ಷದ ನೂತನ ನಾಟಕ “ದಿಬ್ಬಣ“ ಅತ್ಯಂತ ಯಶಸ್ವಿಯಾಗಿ ಪ್ರಥಮ ಪ್ರದರ್ಶನ ಕಂಡು ಜನಮೆಚ್ಚುಗೆಯನ್ನು ಪಡೆದುಕೊಂಡಿದೆ.
ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ, ಜಗನಾಥ ಶೆಟ್ಟಿ ಕುಡ್ಲ ನಿರ್ದೇಶಿರುವ ನಾಟಕವು ಅತ್ಯುತ್ತಮ ಕೌಟುಂಬಿಕ ಚಿತ್ರಣವನ್ನು ತೊರಿಸುವುದಲ್ಲದೆ ಪ್ರಸ್ತುತ ದಿನಗಳಲ್ಲಿ ಅತ್ಯಂತ ಕ್ರೂರವಾಗಿ ಸಮಾಜದ ಹೆಣ್ಣುಮಗಳೊಬ್ಬಳ ಮೇಲೆ ಆಗುವ ದೌರ್ಜನ್ಯವನ್ನೂ, ಕನಸೆಂಬ ಕುದುರೆಯನ್ನೇರಿ ಪ್ರಯಾಣಿಸುತ್ತಿರುವ ಹೆತ್ತವರ ಪಾಡು, ಅತ್ಯಂತ ಧಯನೀಯವಾಗಿ ಪ್ರೇಕ್ಷಕರ ಕಣ್ಣಂಚನ್ನು ಒದ್ದೆಯಾಗಿಸುತ್ತ ಸಮಾಜ ವರ್ಗವು ಒಂದು ದಿಟ್ಟ ನಿರ್ದಾರಕ್ಕೆ ಬರುವಂತೆ ಸಂದೇಶಿಸುವ ರಂಗ ಚಿತ್ರಣವೇ "ದಿಬ್ಬಣ".
ನಾಟಕದ ಪ್ರಾರಂಭದಿಂದಲೂ ಅಂತ್ಯದವರೆಗೂ ಪ್ರೇಕ್ಷಕರನ್ನು ಒಂದರ ಮೇಲೊಂದು ಭಿನ್ನ ವಿಭಿನ್ನ ಶೈಲಿಯಲ್ಲಿ ಬರುವ ಪಾತ್ರಗಳು,ಮಾಡುವ ಅವಾಂತರಗಳು ಕಥೆಗೆ ಪೂರಕವಾಗಿಯೇ ಇರುವ ಹಾಸ್ಯದ ಸವಿಯು ಪ್ರೇಕ್ಷಕರನ್ನು ಕೂಳಿತಲ್ಲಿ ಕೂರದ ಹಾಗೆ ಕಚಗುಳಿ ಇಡುತ್ತಾ 100% "ದಿಬ್ಬಣ" ಒಂದು ಸೂಪರ್ ಹಿಟ್ ನಾಟಕವಾಗಿ ಹೊರಹೊಮ್ಮಿದೆ.