
ಹಿಂದೂ ಧರ್ಮದಲ್ಲಿ ಪ್ರತಿದಿನವೂ ದೇವರ ಕೋಣೆಯಲ್ಲಿ ಅಗರಬತ್ತಿಯನ್ನು ಹಚ್ಚುತ್ತಾರೆ. ಕೆಲವರು ಇದರ ಪ್ರಯೋಜನವನ್ನು ಅರಿತು ಅಗರಬತ್ತಿಯನ್ನು ಹಚ್ಚಿಟ್ಟರೆ, ಇನ್ನೂ ಕೆಲವರು ಇದರ ಪ್ರಯೋಜನವನ್ನು ತಿಳಿಯದೆಯೂ ದೇವರಿಗೆಂದು ಅಗರಬತ್ತಿಯನ್ನು ಹಚ್ಚಿಡುತ್ತಾರೆ. ದೇವರ ಕೋಣೆಯಲ್ಲಿ ಯಾವ ಅಗರಬತ್ತಿಯನ್ನು ಯಾಕೆ ಹಚ್ಚಿಡಬೇಕು.? ಇದರ ಪ್ರಯೋಜನವೇನು ? ಯಾವ ಅಗರಬತ್ತಿಯನ್ನು ಹಚ್ಚಬಾರದು? ಇದರ ದುಷ್ಪರಿಣಾಮವೇನು ? ಎಂದು ತಿಳಿಯೋಣ.

ದೇವರಲ್ಲಿ ನಂಬಿಕೆ ಇರುವ ಪ್ರತಿಯೊಬ್ಬ ವ್ಯಕ್ತಿಯ ಮನೆಯಲ್ಲಿ ಪೂಜಾಸ್ಥಳ ಇರುತ್ತದೆ ಮತ್ತು ದೇವರ ಕೃಪೆಗೆ ಕೆಲವು ವಸ್ತುಗಳನ್ನು ಪೂಜೆಯ ಸ್ಥಳದಲ್ಲಿ ಇಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಈ ವಸ್ತುಗಳಲ್ಲಿ ದಿನವೂ ಬಳಕೆ ಮಾಡುವ ವಸ್ತು ಧೂಪದ ಕಡ್ಡಿ ಅಥವಾ ಅಗರಬತ್ತಿ. ಧೂಪದ ಕಡ್ಡಿಗಳಿಂದ ಅನೇಕ ಶುಭ ಪ್ರಯೋಜನಗಳನ್ನು ಪಡೆಯಲಾಗುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೆ, ಅಗರಬತ್ತಿಗಳನ್ನು ಪೂಜೆ ಕೋಣೆಯಲ್ಲಿ ಬೆಳಗಿಸುವುದರಿಂದ, ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ಸಹ ತೆಗೆದುಹಾಕಬಹುದು ಮತ್ತು ಧನಾತ್ಮಕ ಶಕ್ತಿಯು ಉಳಿಯುತ್ತದೆ. ಧೂಪದ ಕಡ್ಡಿಗಳು, ಕರ್ಪೂರ, ಸುಗಂಧ ದ್ರವ್ಯ, ತುಪ್ಪದ ದೀಪ, ದೇವರ ಮುಂದೆ ಗುಗ್ಗಲು ಸುಡುವುದು ಸಹ ಶುಭವೆಂದು ಸಾಬೀತಾಗುತ್ತದೆ. ಅದು ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ತರಬಹುದು
ಕೆಮಿಕಲ್ ಅಗರಬತ್ತಿ ತರುತ್ತೆ ಆರೋಗ್ಯಕ್ಕೆ ಕುತ್ತು!
ಯಾವುದೇ ಪೂಜೆ ಪುನಸ್ಕಾರವಿದ್ದರೂ ಅಗರಬತ್ತಿ ಹಚ್ಚುವುದು ಸಹಜ. ರಾಸಾಯನಿಕ ಪರಿಮಳ ದ್ರವ್ಯವನ್ನು ಬಳಸಿ ತಯಾರಿಸುವ ಅಗರಬತ್ತಿಯ ಹೊಗೆ ಆರೋಗ್ಯಕ್ಕೆ ಒಳ್ಳೆಯದಲ್ಲ.ಮಾರುಕಟ್ಟೆಯಲ್ಲಿ ಸಿಗುವ ಕಮ್ಮಿ ಬೆಲೆಯ ಅಗರಬತ್ತಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವು ಅಗರಬತ್ತಿಗಳನ್ನು ಕೇವಲ ಸೆಗಣಿ, ಧೂಪ ಹಾಗೂ ನೈಸರ್ಗಿಕ ಪದಾರ್ಥಗಳನ್ನು ಬಳಸಿಯೇ ತಯಾರಿಸಲಾಗುತ್ತದೆ. ಇಂಥ ಅಗರಬತ್ತಿ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಆದರೆ, ಕೆಮಿಕಲ್ ಇರೋ ಅಗರಬತ್ತಿ ಬಳಸಿದರೆ ತೊಂದರೆ ತಪ್ಪಿದ್ದಲ್ಲ. ಇದರಿಂದಾಗಿ ಮೂತ್ರಪಿಂಡದ ಮೇಲಿನ ಒತ್ತಡ ಹೆಚ್ಚುತ್ತದೆ. ದೇಹಕ್ಕೆ ಸೇರಿದ ವಿಷಕಾರಿ ಅಂಶ ಹೊರಹಾಕುವುದು ಮೂತ್ರದ ಮೂಲಕ ಹೊರ ಹೋಗುತ್ತದೆ. ಇದರಿಂದ ಕಿಡ್ನಿ ಹಾಳಾಗುವ ಸಾಧ್ಯತೆಯೂ ಇದೆ. ಇದರಿಂದ ಕಿಡ್ನಿ ಹಾಳಾಗುವ ಸಾಧ್ಯತೆಯೂ ಇದೆ. ತೆಳು ಚರ್ಮದ ಮೇಲೆ ಅಗರಬತ್ತಿಯ ಹೊಗೆ ಅಲರ್ಜಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಮಕ್ಕಳು ಹಾಗೂ ವೃದ್ಧರ ಚರ್ಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಅಗರಬತ್ತಿಯಲ್ಲಿ ಮೆಗ್ನಿಷಿಯಂ ಹಾಗೂ ಕಬ್ಬಿಣಾಂಶವಿದ್ದರೆ ಕಣ್ಣುರಿ ತರಿಸುತ್ತದೆ. ನರಕ್ಕೆ ಸಂಬಂಧಿಸಿದ ಕಾಯಿಲೆಯೂ ಕಾಡುವ ಸಾಧ್ಯತೆ ಹೆಚ್ಚು. ಇದರಿಂದ ಮೆದುಳಿನ ಮೇಲೂ ಹಾನಿಯನ್ನುಂಟು ಮಾಡುತ್ತದೆ. ಇನ್ನು ಕೆಮ್ಮು, ಶೀತದಂಥ ಸಮಸ್ಯೆ ಬಹುತೇಕರನ್ನು ಕಾಡುತ್ತದೆ.ಮುಂದಿನ ದಿನಗಳಲ್ಲಿ ನೀವು ಬಳಸುವ ಅಗರಬತ್ತಿಯ ಬಗ್ಗೆ ಎಚ್ಚರವಹಿಸಿ . ನೈಸರ್ಗಿಕ ಅಗರಬತ್ತಿಯನ್ನೇ ಬಳಸಿ. ಪರಿಮಳಕ್ಕೊಸ್ಕರ ರಾಸಾಯನಿಕವನ್ನು ಬಳಸುವ ಅಗರಬತ್ತಿಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಿಬಿಡಿ.