ಪಶ್ಚಿಮ ಘಟ್ಟಗಳ ಹಾಗೂ ಕರಾವಳಿ ಪ್ರದೇಶಗಳ ಶಾಶ್ವತ ಸಂಪರ್ಕಕೊಂಡಿಗಾಗಿ ದಿಡುಪೆ ಸಂಸೆ ಎಳನೀರು ರಸ್ತೆ ನಿರ್ಮಾಣಕ್ಕೆ ಸದನದಲ್ಲಿ ಧ್ವನಿಯಾಗುವವರು ಯಾರು??

🖋️• ಸಂಪಾದಕರು 🎯ಕಾಲನಿರ್ಣಯನ್ಯೂಸ್

ಬೆಳ್ತಂಗಡಿ: ಉಭಯ ಜಿಲ್ಲೆಗಳ ಸಂಪರ್ಕಕೊಂಡಿ ನಿರ್ಮಾಣಕ್ಕಾಗಿ ಚಿಕ್ಕಮಗಳೂರು ಉಡುಪಿ ದಕ್ಷಿಣಕನ್ನಡ ಜಿಲ್ಲೆಯ ಲಕ್ಷಾಂತರ ಜನರ ಶತಮಾನದಕನಸ್ಸು ನನಸಾಗಿಸಲು ಹಾಗೂ ಪರ್ಯಾಯ ರಸ್ತೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳ ಒಗ್ಗಟ್ಟಿನ ಪ್ರದರ್ಶನ ಸದನದಲ್ಲಿ ಧ್ವನಿಯಾಗಲಿ.

ಮಂಗಳೂರು ಬೆಂಗಳೂರು ಸಂಪರ್ಕ ಕೊಂಡಿಗಳು ನಿರಂತರವಾಗಿ ಕಳಚಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದ್ದು ಮಳೆಗಾಲದ ಸಮಯದಲ್ಲಿ ಚಾರ್ಮಾಡಿ ಘಾಟ್, ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ತೊಡಕಾಗುತ್ತಿದ್ದು ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರವನ್ನು ಮತ್ತೆ ಎಚ್ಚರಿಸುವ ಬಗ್ಗೆ ಜನಪ್ರತಿನಿಧಿಗಳು ಆಸಕ್ತರಾಗಬೇಕು. ಹಾಗೂ ಇದಕ್ಕಾಗಿ ಈ ಸಮಯ ಸೂಕ್ತವಾಗಿದೆ. ಮಂಗಳೂರು ಮಾಣಿ ರಸ್ತೆಯ ಮೂಲಕ ಗುಂಡ್ಯ ಶಿರಾಡಿಘಾಟ್ ಮೂಲಕ ಸಕಲೇಶಪುರ ಸಂಪರ್ಕ , ಮಂಗಳೂರು ಬಿಸಿರೋಡ್, ಬೆಳ್ತಂಗಡಿ ಉಜಿರೆ ಚಾರ್ಮಾಡಿ ಕೊಟ್ಟಿಗೆಹಾರ,ಹಾಸನ ಮಾರ್ಗವಾಗಿ ಬೆಂಗಳೂರು, ಮೈಸೂರು ಸಂಪರ್ಕ, ಮಂಗಳೂರು, ಪುತ್ತೂರು ಸುಳ್ಯ ಸಂಪಾಜೆ ಮೂಲಕ ಮೈಸೂರು ಬೆಂಗಳೂರು ಸಂಪರ್ಕ ಮಾಡಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಶಿರಾಡಿಘಾಟ್, ಚಾರ್ಮಾಡಿ ಘಾಟ್, ಸಂಪಾಜೆ ಘಾಟ್ ಪ್ರತಿವರ್ಷ ಮಳೆಯಿಂದ ಸಂಚಾರಕ್ಕೆ ತೋಡಕು ಉಂಟಾಗಿ ಸಂಪರ್ಕ ಕೊಂಡಿ ಕಳಚಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ತೇಪೆ ಕಾರ್ಯದ ಬದಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ. ಚಾರ್ಮಾಡಿ ಘಾಟ್ ಹಾಗೂ ಶಿರಾಡಿ ಘಾಟ್ ಮಾರ್ಗದಲ್ಲಿ ರಸ್ತೆ ಅಗಲೀಕರಣ ಮಾಡಲು ಆಗದೇ ಇದರಿಂದ ನಿರಂತರ ಪ್ರಾಕೃತಿಕ ದುರಂತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂದಕ್ಕೂ ಸಮಸ್ಯೆ ಕಟ್ಟಿಟ್ಟಬುತ್ತಿ.

ಧಾರ್ಮಿಕ ಕೇಂದ್ರಗಳ ಸಂಪರ್ಕ ಕೊಂಡಿಯೂ ಹೌದು:

ಇತಿಹಾಸ ಪ್ರಸಿದ್ಧ ಕ್ಷೇತ್ರಗಳಾದ ಶ್ರೀ ಕುಕ್ಕೆಸುಬ್ರಹ್ಮಣ್ಯದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ , ಕಾಜೂರು ದರ್ಗಾ ಶರೀಫ್ ಮಸೀದಿ , ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ಕ್ಷೇತ್ರ ಹಾಗೂ ಇತರ ಧಾರ್ಮಿಕ ಕ್ಷೇತ್ರಗಳಿಗೆ ಹತ್ತಿರದ ಸಂಪರ್ಕ ಸೇತುವು ಇದಾಗಿದೆ.

ಪ್ರವಾಸೋದ್ಯಮಕ್ಕೂ ಇದು ಪೂರಕ:

ಪಶ್ಚಿಮ ಘಟ್ಟಗಳ ಸ್ವಾದವನ್ನು ಅರಿಯಲು ಹಾಗೂ ಎರ್ಮಾಯಿಫಾಲ್ಸ್,ಬಂಡಾಜೆ ಪಾಲ್ಸ್, ಕಡಮಗುಂಡಿ ಫಾಲ್ಸ್, ಸಿರಿಮನೆ ಫಾಲ್ಸ್, ಹಾಗೂ ವಿವಿಧ ಜಲಪಾತಗಳನ್ನು ಈ ಸಂಪರ್ಕ ರಸ್ತೆಯಿಂದ ಸಂದಿಸಬಹುದಾಗಿದೆ.

ಪರ್ಯಾಯ ಹಾಗೂ ಶಾಶ್ವತ ಪರಿಹಾರ ಹೇಗೆ: ಮಂಗಳೂರು ಉಜಿರೆ ಸೋಮಂತ್ತಡ್ಕ ಕಾನರ್ಪ ಕಾಜೂರು ಡಿಡುಪೆ ಸಂಸೆ ಎಳನೀರು ಸಂಪರ್ಕ ವ್ಯವಸ್ಥೆ ಮಾಡುವ ಬಗ್ಗೆ ಅನುಮೋದನೆ ಮಾಡಿಸುವಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಇದರಿಂದ ಕೇವಲ 5ರಿಂದ 7ಕಿ.ಮಿ ಒಳಗೆ ಅರಣ್ಯದೊಳಗೆ ರಸ್ತೆ ನಿರ್ಮಾಣ ಆಗಬೇಕಾಗಿದೆ ಈಗಾಗಲೇ ಈ ಸಂಪರ್ಕಕ್ಕಾಗಿ ಕಚ್ಚಾರಸ್ತೆ ನಿರ್ಮಾಣ ಆಗಿದ್ದು ಇದರ ಅಗಲೀಕರಣ ಹಾಗೂ ಯೋಗ್ಯ ರಸ್ತೆ ನಿರ್ಮಾಣ ಆಗಬೇಕಾಗಿದೆ ಇದಕ್ಕಾಗಿ ಸುರಂಗ ಮಾರ್ಗ ಮಾಡಿದರು ಯಾವುದೇ ಅರಣ್ಯಕ್ಕಾಗಲಿ ವನ್ಯಜೀವಿಗಳ ಓಡಾಟಕ್ಕಾಗಲಿ ಸಮಸ್ಯೆ ಇಲ್ಲದೆ ಮಾಡಬಹುದು ಕನಿಷ್ಠ 7ಕಿ.ಮೀಗೆ ಫ್ಲೈಓವರ್ ರಸ್ತೆ ನಿರ್ಮಾಣವನ್ನು ಮಾಡಬಹುದಾಗಿದೆ. ಚಾರ್ಮಾಡಿ ಶಿರಾಡಿ ಸಂಪಾಜೆ ಘಾಟ್ ಸುಮಾರು 30ಕಿ.ಮೀ ರಿಂದ 40ಕಿ.ಮೀ ದೂರ ಸಂಚಾರ ಇದ್ದು ಇದಕ್ಕೆ ಪರ್ಯಾಯವಾಗಿ ದಿಡುಪೆ ಸಂಸೆ ಎಳನೀರು ರಸ್ತೆ ಅಭಿವೃದ್ಧಿ ಮಾಡುವುದು ಬಹಳ ಯೋಗ್ಯಕರ.

ಕಳಸ ತಾಲೂಕಿನ ಸಂಸೆಯಿಂದ ಬೆಳ್ತಂಗಡಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಬಗ್ಗೆ ಶಾಸಕರಾದ  ನಯನಾ ಮೋಟಮ್ಮ ಮತ್ತು ಹರೀಶ್‍ ಪೂಂಜಾ ರವರು ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದರು.  

ದಿಡುಪೆ-ಸಂಸೆ ರಸ್ತೆ ಸರ್ವೇ ಕಾರ್ಯ ನಡೆಸಿ ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 6 ಅಡಿ ಅಗಲದ ಸರ್ವಋತು ರಸ್ತೆ, ಉಳಿದೆಡೆ 12 ಅಡಿ ಅಗಲದ ರಸ್ತೆ ನಿರ್ಮಿಸುವ ಕುರಿತು ಸಮಗ್ರ ಯೋಜನಾ ವರದಿ (ಡಿಪಿಆರ್‌) ರಚಿಸಿ ಸರಕಾರಕ್ಕೆ ಈ ಹಿಂದೆಯೇ ಸಲ್ಲಿಸಲಾಗಿದೆ.

ಸದನದಲ್ಲಿ ಮತ್ತೆ ಸಂಪರ್ಕಕೊಂಡಿಗಾಗಿ ಮರುಧ್ವನಿ ಆಗಬೇಕಾಗಿದೆ

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಒಟ್ಟಾಗಿ ಸದನದಲ್ಲಿ ಧ್ವನಿಗೂಡಿಸಿದಲ್ಲಿ ಪಶ್ಚಿಮ ಘಟ್ಟದ ಹಾಗೂ ಕರಾವಳಿ ಸಂಪರ್ಕ ಕೊಂಡಿಯನ್ನು ಶಾಶ್ವತವಾಗಿ ಜೋಡಿಸುವ ಕಾರ್ಯ ಮಾಡಬಹುದಾಗಿದೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 196 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 36 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 303 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 51 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 106 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 51 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ