ದ.ಕ ಜಿಲ್ಲಾ ಒ.ಬಿ.ಸಿ ಮೋರ್ಚಾದ ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್, ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕರಾಗಿ ಸುಜಿತ್ ರಾಜ್ ಮೀನಾ ಆಯ್ಕೆ

ಮಂಗಳೂರು: ದ.ಕ ಜಿಲ್ಲಾ ಒ.ಬಿ.ಸಿ ಮೊರ್ಚಾದ ಕಾರ್ಯದರ್ಶಿಯಾಗಿ ಅಶೋಕ್ ಕುಮಾರ್ ಕಡಿರುದ್ಯಾವರ ಆಯ್ಕೆಯಾಗಿದ್ದಾರೆ.

ಅಶೋಕ್ ಕುಮಾರ್ ಕಡಿರುದ್ಯಾವರ

ಕಡಿರುದ್ಯಾವರ ಗ್ರಾಮ ಪಂಚಾಯತಿ ಸದಸ್ಯರಾಗಿದ್ದು ಕಡಿರದ್ಯಾವರ ಶಕ್ತಿ ಕೇಂದ್ರ ಪ್ರಮುಖ್, ತಾಲೂಕು ರೈತ ಮೋರ್ಚಾದ ಮಾಜಿ ಪ್ರದಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವವುಳ್ಳವರಾಗಿದ್ದಾರೆ.

READ ALSO

ಸುಜಿತ್ ರಾಜ್ ಮೀನಾ ಮಂಜುಶ್ರೀ ನಗರ ಮುಂಡಾಜೆ

ಮುಂಡಾಜೆಯ ಬೂತ್‌ ಮಟ್ಟದ ಕಾರ್ಯಕರ್ತ ಸುಜಿತ್ ರಾಜ್ ಮೀನಾ ಮಂಜುಶ್ರೀ ನಗರ ಮುಂಡಾಜೆ ಇವರು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

ಇವರು ಚುನಾವಣೆಯ ಸಂದರ್ಭದಲ್ಲಿ ವಾರ್ಡ್‌ ಪ್ರಚಾರದ ಜವಾಬ್ದಾರಿ ಹಾಗೂ ಬೂತ್‌ ಏಜೆಂಟ್‌ ಆಗಿ ಕಾರ್ಯನಿರ್ಹಿಸುತ್ತಿದ್ದರು