ಆಸಿಡ್ ಕುಡಿದು ಮಹಿಳೆ ಆತ್ಮಹತ್ಯೆ!!! ಬೆಳ್ತಂಗಡಿಯ ಕಳೆಂಜದಲ್ಲಿ ನಡೆದ ಘಟನೆ!

ಬೆಳ್ತಂಗಡಿ : ಮಹಿಳೆಯೊಬ್ಬರು ಆಸಿಡ್ ಸೇವಿಸಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ನಡೆದಿದೆ.

ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಕಳೆಂಜ ಗ್ರಾಮದ ಕಾಯರ್ತಡ್ಕ ನಿವಾಸಿ ಯಶೋಧರ ಅವರ ಪತ್ನಿ ಜಯಶ್ರೀ (23) ಎಂಬ ವಿವಾಹಿತ ಮಹಿಳೆ ತನ್ನ ಮನೆಯಲ್ಲಿ ರಬ್ಬರಿಗೆ ಉಪಯೋಗಿಸುವ ಆಸಿಡ್ ಕುಡಿದಿದ್ದು, ವಿಷಯ ತಿಳಿದ ತಕ್ಷಣ ಮನೆಯವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಮಧ್ಯೆ ಮಹಿಳೆ ಸಾವನ್ನಪ್ಪಿದ್ದಾರೆ.

READ ALSO

ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಧರ್ಮಸ್ಥಳ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದು ಪ್ರಕರಣದ ಸತ್ಯಾಸತ್ಯ ತನಿಖೆಯಿಂದ ಹೊರ ಬರಬೇಕಾಗಿದೆ.