ಮಂಗಳೂರು : ಕೊರೋನ ಸಮಸ್ಯೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೆ ಹದಿನಾಲ್ಕು ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆಯಾದರೂ ಅಚ್ಚರಿಯಿಲ್ಲ. ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದಲೇ ಲಾಕ್ ಡೌನ್ ಗೆ ಒಲವು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಆರು ದಿನ ಪೂರೈಸಿದ ಜಿಲ್ಲಾಡಳಿತ ಘೋಷಣೆಯ ಲಾಕ್ ಡೌನ್, ಜುಲೈ 23 ರ ಬೆಳಿಗ್ಗೆ 5 ಗಂಟೆವರೆಗೆ ಇರಲಿದೆ. ಸದ್ಯದಲ್ಲೇ ಬರುವ ಹಬ್ಬಗಳಾದ ನಾಗರ ಪಂಚಮಿ, ಬಕ್ರೀದ್ ಗೆ ನಿರ್ಬಂಧ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
ಜಿಲ್ಲಾಡಳಿತದ ಮುಂದೆ ಜನಪ್ರತಿನಿಧಿ, ಸಾರ್ವಜನಿಕರ ಒತ್ತಾಯ ಹೆಚ್ಚಾಗಿರುವುದರಿಂದ ನಾಳೆ ಸಿಎಂ ಜತೆ ಚರ್ಚೆಯ ಬಳಿಕ ಅಧಿಕೃತ ನಿರ್ಧಾರ ಹೊರಬೀಳಲಿದೆ.