ದ.ಕ ಜಿಲ್ಲಾ SP ಕಛೇರಿಯಲ್ಲಿ ಪ್ರೊಬೆಷನರಿ PSI ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಲಾರ ಮೂಲದ ಏಳು ತಿಂಗಳ ಗರ್ಭಿಣಿ ಕೊರೊನಾಗೆ ಬಲಿ!

READ ALSO

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಕಳೆದ ಸುಮಾರು ಮೂರು ತಿಂಗಳುಗಳಿಂದ ಕರ್ತವ್ಯದಲ್ಲಿದ್ದ ಪ್ರೊಬೆಷನರಿ ಪಿಎಸ್‌ಐ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮೂಲತಃ ಕೋಲಾರದ ಶ್ಯಾಮಿಲಿ(24) ಅವರು ಕೋಲಾರದ ಆಸ್ಪತ್ರೆಯೊಂದರಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಶ್ಯಾಮಿಲಿ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದು, ಇವರು ಸರಕಾರದ ನಿಯಮದಂತೆ ಕರ್ತವ್ಯದಲ್ಲಿ ಇರಲಿಲ್ಲ. ಒಂದು ತಿಂಗಳ ಹಿಂದೆಯೇ ಕೋಲಾರಕ್ಕೆ ತೆರಳಿದ್ದರು. ಕೋಲಾರದಲ್ಲಿದ್ದ ಸಮಯ ಕೊರೊನಾ ದೃಢಪಟ್ಟಿತ್ತು. ನಂತರ ಆಸ್ಪತ್ರೆಗೆ ಸೇರಿದ್ದರು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಡಿ.ಜಿ ಪ್ರವೀಣ್ ಸೂದ್ ಅವರು ಸಂತಾಪ ಸೂಚಿಸಿದ್ದಾರೆ.