ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ನಡೆದ 13ನೇ ವರ್ಷದ ಪಾದಯಾತ್ರೆಯ ಸಮಾರೋಪದಲ್ಲಿ ಭಕ್ತರನ್ನು ಉದ್ದೇಶಿಸಿ ಧರ್ಮಾಧಿಕಾರಿಗಳಾದ ಡಾ.ಡಿವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನರ್ಸಿಂಗ್ ಕಾಲೇಜು ಹಾಗೂ ಕೃಷಿ ಕಾಲೇಜನ್ನು ಈ ವರ್ಷ ಆರಂಭಿಸಲಾಗುವುದು, ಪಾದಯಾತ್ರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಪ್ರಾದಾಯದ ಒಂದು ಭಾಗವಾಗಿದ್ದು, ನೀವೆಲ್ಲಾ ಪಾದಯಾತ್ರೆಯಲ್ಲಿ ಬಂದು ಪ್ರೀತಿ, ವಿಶ್ವಾಸ ವ್ಯಕ್ತಪಡಿಸಿದ್ದೀರಿ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಅನೇಕ ಮಂದಿ ಬಂದು ಹೇಳಿರುವುದು ಸಂತಸ ತಂದಿದೆ. ಕ್ಷೇತ್ರದ ಮೇಲೆ ಬಂದ ಅಪವಾದಗಳು ಸ್ವಾಮಿಯ ಅನುಗ್ರಹದಿಂದ ಮುಕ್ತವಾಗಿದೆ ಎಂದರು.
ಕ್ಷೇತ್ರದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಆರಂಭಿಸುತ್ತೇವೆ. ಕೃಷಿ ಕಾಲೇಜನ್ನು ಆರಂಭಿಸುವ ಯೋಜನೆ ಇದ್ದು, ಇದಕ್ಕೆ 50 ರಿಂದ 100 ಎಕ್ರೆ ಜಾಗಬೇಕಾಗಿದ್ದು ಇನ್ನೂ ಸ್ಥಳದ ಆಗಬೇಕಾಗಿದೆ ಎಂದು ತಿಳಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರ ರಾದ ಶರತ್‌ಕೃಷ್ಣ ಪನ್ವೆಟ್ನಾಯ ಶುಭಹಾರೈಸಿದರು.

ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರವೊಂದು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಜಗತ್ತಿಗೆ ಮಾದರಿಯಾಗಿದೆ. ಸಾಮಾಜಿಕ ಬದ್ಧತೆಯಲ್ಲಿ ಕೆಲಸ ಮಾಡುವವರು ವ್ಯಕ್ತಿ ಪೂಜ್ಯ ಖಾವಂದರು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವರ್ಷದಿಂದ ವರ್ಷಕ್ಕೆ ಪಾದಯಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಕೋಟ್ಯಾಂತರ ಜನರ ಶ್ರದ್ಧಾ ಕೇಂದ್ರವಾಗಿರುವ ಧರ್ಮಸ್ಥಳದ ಕಾರ್ಯಕ್ರಮಗಳು ನಮ್ಮೆಲ್ಲರನ್ನೂ ಒಟ್ಟಾಗಿಸುತ್ತದೆ. ಭಜನೆ ಇಂದು ಆಧ್ಯಾತ್ಮಿಕತೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ಹರ್ಷೇಂದ್ರ ಕುಮಾರ್, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಬರೋಡ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ, ಕಾಲೇಜುನಪ್ರಾಚಾರ್ಯ ವಿಶ್ವನಾಥ್, ಪೂರಣ್ ವರ್ಮ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ವೀರೂ ಶೆಟ್ಟಿ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ಸೋನೀಯ ಯಶೋವರ್ಮ, ಅಖಿಲ ಕರ್ನಾಟಕ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ತಾಲೂಕು ಅಧ್ಯಕ್ಷೆ ಕಾಸಿಂ ಮಲ್ಲಿಗೆ ಮನೆ, ಸಿರಿ ಸಂಸ್ಥೆಯ ನಿರ್ದೇಶಕ ಕೆ.ಎನ್ ಜನಾರ್ದನ್, ಉದ್ಯಮಿ ಮೋಹನ ಶೆಟ್ಟಿಗಾರ್, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್, ಡಾ. ಎಲ್.ಹೆಚ್ ಮಂಜುನಾಥ್, ಭುಜಬಲಿ ಧರ್ಮಸ್ಥಳ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಸಂಧ್ಯಾ ಟ್ರೆಡರ್‌ನ ರಾಜೇಶ್ ಪೈ, ಪ್ರಶಾಂತ್ ಜೈನ್ ಅಮೃತ್ ಟೆಸ್ಟೈಲ್ಸ್, ಪ್ರಭಾಕರ ಜೈನ್ ಮಹಾವೀರ ಸಿಲ್ಕ್, ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್, ರವೀಂದ್ರ ಶೆಟ್ಟಿ ಬಳಂಜ, ಉದ್ಯಮಿ ಅರವಿಂದ್ ಕಾರಂತ್, ರವಿ ಚಕ್ಕಿತ್ತಾಯ, ಗ್ರಾ.ಪಂ ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ,ಶಾಂತ ಬಂಗೇರ, ಕಿರಣ್ ಶೆಟ್ಟಿ ಜೈನಪೇಟೆ, ಶೀತಲ್ ಜೈನ್ ಪೌರನ್, ಹರಿಯಂತ ಜೈನ್ ಬೆಳ್ತಂಗಡಿ ಅಜೇಯ್ ಶೆಟ್ಟಿ ಉಜಿರೆ, ಪದ್ಮಪ್ರಸಾದ್ ಜೈನ್ ಧರ್ಮಸ್ಥಳ,ಪ್ರಿಯಾಂಕ ಜೈನ್ ಧರ್ಮಸ್ಥಳ, ಮಮತಾ ಎಂ. ಶೆಟ್ಟಿ, ರಾಜಶೇಖರ ಅದ್ರೆ, ಶ್ರಿಧರ ಕೆ.ವಿ ಉಜಿರೆ, ಶಶಿಧರ ಕಲ್ಮಂಜ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ | ಶ್ರೀನಾಥ್, ನ್ಯಾಯವಾದಿ ಧನಂಜಯ ರಾವ್, ಸೀತಾರಾಮ ಬಿ.ಎಸ್ ಬೆಳಾಲ್, ಜಯಂತ್ ಶೆಟ್ಟಿ ಕುಂಟಿನಿ, ತಿಮ್ಮಪ್ಪ ಗೌಡ ಬೆಳಾಲು, ಪುಷ್ಪರಾಜ ಹೆಗ್ಡೆ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಬರೇಮೇಲು, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಜಯಪ್ರಕಾಶ್ ಶೆಟ್ಟಿ ಉಜಿರೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರುಗಳಾದ, ಡಿ.ಎ ರಹಿಮಾನ್, ತಿಮ್ಮಪ್ಪ ಗೌಡ, ಕಿಶೋರ್ ಹೆಗ್ಡೆ, ಯದುಪತಿ ಗೌಡ, ಸತೀಶ್ ಕಾಮತ್ ಕಡಿರುದ್ಯಾವರ, ಈಶ್ವರ ಬೈರಾ, ಹತ್ಯಡ್ಕ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್, ಅವಿನಾಶ್ ಅಗ್ರೀಲಿಫ್, ಡಾ. ಪ್ರದೀಪ್ ನಾವೂರು, ತಾಲೂಕಿನ ಗಣ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ನಾಗರಿಕರು, ಹೆಗ್ಗಡೆ ಅಭಿಮಾನಿಗಳು ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ವಿಪತ್ತು ನಿರ್ವಹಣಾ ತಂಡ, ಉಜಿರೆಯ ಬದುಕು ಕಟ್ಟೋಣ ತಂಡಗಳ ಸದಸ್ಯರು ಭಾಗವಹಿಸಿದ್ದರು.





