ಧರ್ಮಸ್ಥಳದ ಧೃತಿಯ ವೈದ್ಯಕೀಯ ಚಿಕಿತ್ಸೆಗೆ ಬೇಕಿದೆ ತುರ್ತು ಆರ್ಥಿಕ ನೆರವು

ಮಂಗಳೂರು: ಧರ್ಮಸ್ಥಳ ಗ್ರಾಮದ ಅಗುಳೆ ಬೈಲು ನಿವಾಸಿ ದಿನೇಶ್ ಹಾಗೂ ಭಾರತಿ ದಂಪತಿಯ ಪುತ್ರಿ ಧೃತಿ ರಕ್ತ ಕಣಗಳ ಕೊರತೆಯ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಗೆ ಆರ್ಥಿಕ ನೆರವಿನ ಆಸರೆ ಬೇಕಿದೆ

ರಕ್ತ ಹೀನತೆಯಿಂದ ಬಳಲಿದ ಮಗಳ ಸಂಕಟ ನೋಡಲಾಗದೇ ಆಕೆಗೆ ಚಿಕಿತ್ಸೆ ಕೊಡಿಸಲು ಸರಕಾರಿ, ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಗುಣಮುಖಳಾಗಿಲ್ಲ ಈ ಬಾಲೆ,

READ ALSO

ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆ ನೀಡಿದಲ್ಲಿ ಗುಣಮುಖಳನ್ನಾಗಿಸಬಹುದು, ಅದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯವಾಗುತ್ತದೆ ಎಂದಿದ್ದಾರೆ.

ಬಡ ಕುಟುಂಬದಲ್ಲಿರುವ ಈ ದಂಪತಿಗಳು ದಿನಾ ಕೂಲಿ ಕೆಲಸಗಳನ್ನು ಮಾಡಿ, ಅಷ್ಟೊಂದು ಹಣ ಎಲ್ಲಿಂದ ಹೊಂದಿಸುವುದು ಎಂದು ಕಂಗಾಲಾಗಿದ್ದಾರೆ.

ಧೃತಿ 4 ತಿಂಗಳ ಮಗುವಿದ್ದಾಗಲೇ ತಿಂಗಳಿಗೊಮ್ಮ ಜ್ವರ ಬರುತ್ತಿತ್ತು ಚಿಕಿತ್ಸೆ ನೀಡಿದಾಗ ಕಡಿಮೆಯಾಗುತ್ತಿತ್ತು. ಆದರೆ ಈ ಒಂದು ವರ್ಷದಿಂದ ಬಿಳಿರಕ್ತ ಕಣ ಹಾಗೂ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತಿವೆ. ಅದು ಯಾವ ಕ್ಷಣದಲ್ಲಿ ಕಡಿಮೆ ಆಗುತ್ತೆ ಎಂಬುದು ತಿಳಿಯುವುದಿಲ್ಲ ವಾರಕ್ಕೊಮ್ಮೆ ಈ ಸಮಸ್ಯೆ ಈ ಮಗುವನ್ನು ಕಾಡುತ್ತಿದ್ದು, ಚಿಕಿತ್ಸೆಗೆ ಕಡಿಮೆ ಎಂದರೂ ಪ್ರತಿ ತಿಂಗಳಿಗೆ 50 ಸಾವಿರಕ್ಕಿಂತಲೂ ಅಧಿಕ ಹಣ ಬೇಕಾಗುತ್ತದೆ.

ತಿಂಗಳಿಗೆ 2ಬಾರಿಯಾದರೂ ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನ ಕಳೆದಂತೆ ಮಗುವಿನ ಆರೋಗ್ಯ ಸ್ಥಿತಿ ಜಟಿಲವಾಗುತ್ತಿದೆ. ಈ ಸಂಕಟದ ಜೊತೆ ಮತ್ತೊಂದು ನೋವು ಆ ಮಗುವನ್ನು ಭಾಧಿಸುತ್ತಿದ್ದು, ಇತ್ತೀಚೆಗೆ ಮೂಗಿನಿಂದ ಅಥವಾ ಬಾಯಿಯಿಂದ ರಕ್ತ ಸುರಿಯಲು ಪ್ರಾರಂಭವಾಗಿದೆ ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆಯ ಅಗತ್ಯ ಇದ್ದು, ಒಂದು ವೇಳೆ ಸೂಕ್ತ ಚಿಕಿತ್ಸೆ ಮಾಡದಿದ್ದಲ್ಲಿ ಮಗುವಿನ ಆರೋಗ್ಯ ಮತ್ತಷ್ಟು ಹಹದಗೆಡುವ ಸಾಧ್ಯತೆಯಿದೆ

ವೈದ್ಯರ ಸಲಹೆಯಂತೆ ಬೆಂಗಳೂರಿಗೆ ತೆರಳಿ ಮಗುವನ್ನು ಗುಣಪಡಿಸಬೇಕೆಂದರೆ ಈ ಬಡ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಏದುರಾಗಿದೆ. ಬೆಂಗಳೂರಿನಲ್ಲಿ ನಡೆಸುವ ಚಿಕಿತ್ಸೆಗೆ ಅಂದಾಜು 25ರಿಂದ 30ಲಕ್ಷ ದೊಡ್ಡ ಮೊತ್ತದ ಅವಶ್ಯಕತೆಯಿದೆ. ಈ ದೊಡ್ಡ ಮೊತ್ತವನ್ನು ಭರಿಸಲಾರದೆ ಮಗುವಿನ ತಂದೆ, ತಾಯಿ ಕಂಗಾಲಾಗಿದ್ದಾರೆ.

ಈ ಪುಟ್ಟ ಮಗುವಿನ ಆರೋಗ್ಯದ ಸಮಸ್ಯೆ ಪರಿಹರಿಸಲು ಕೊಡುಗೈ ದಾನಿಗಳ ಸಹಾಯ ಅತ್ಯಗತ್ಯವಾಗಿದೆ. ಈ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಸಹಕರಿಸಿ ಬಡ ಕುಟುಂಬಕ್ಕೆ ಆಸರೆಯಾಗಿ ಮಗುವಿಗೆ ಶೀಘ್ರದಲ್ಲಿಯೇ ಚಿಕಿತ್ಸೆ ನೀಡುವ ಸಲುವಾಗಿ ಧನ ಸಹಾಯ ಮಾಡುವವರು ಈ ಕೆಳಕಂಡ ಖಾತೆಗೆ ಹಣ ಜಮೆ ಮಾಡಬಹುದಾಗಿದೆ.

ಬ್ಯಾಂಕ್: ಸಿಂಡಿಕೇಟ್ ಬ್ಯಾಂಕ್, ಧರ್ಮಸ್ಥಳ ಶಾಖೆ ದಿನೇಶ್ ಧರ್ಮಸ್ಥಳ
ಖಾತೆ ಸಂಖ್ಯೆ: 02462200015461
IFSC CODE: SYNB0000246
ಸಂಪರ್ಕ ಸಂಖ್ಯೆ:9008995557