ದಿನ ಬಳಕೆ ವಸ್ತುಗಳಿಗೂ ಇದೆ EXPIRY Date! ಹಾಗಾದ್ರೆ ಯಾವ ವಸ್ತು ಯಾವಾಗ ಬದಲಿಸಬೇಕು……..!?

ಮಾತ್ರೆ, ಔಷಧಿ, ಪ್ಯಾಕೆಟ್ ಆಹಾರಗಳಿಗೆ ಕೊನೆ ದಿನಾಂಕವಿರುತ್ತದೆ. ಇವುಗಳನ್ನು ತಯಾರಿಸುವ ವೇಳೆ ತಯಾರಿಸಿದ ದಿನಾಂಕದ ಜೊತೆ ಅಂತಿಮ ಬಳಕೆ ದಿನಾಂಕವನ್ನು ವಸ್ತುಗಳ ಮೇಲೆ ಹಾಕಿರಲಾಗುತ್ತದೆ.

ಆದ್ರೆ ದಿನ ಬಳಕೆಯ ಕೆಲ ವಸ್ತುಗಳಿಗೆ ಈ ದಿನಾಂಕವನ್ನು ಹಾಕಿರುವುದಿಲ್ಲ. ಅದ್ರಲ್ಲಿ ಪ್ರತಿ ದಿನ ಬಳಸುವ ಟೂತ್ ಬ್ರಶ್, ಟವಲ್, ಬಾಚಣಿಕೆ ಸೇರಿದಂತೆ ಅನೇಕ ವಸ್ತುಗಳು ಸೇರಿವೆ. ಕೊನೆ ದಿನಾಂಕ ಹಾಕಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ವರ್ಷಗಟ್ಟಲೆ ಬಳಸುವುದು ಸರಿಯಲ್ಲ.

READ ALSO

ಪ್ರತಿ ದಿನ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವ ಟೂತ್ ಬ್ರಶನ್ನು ಸಾಮಾನ್ಯವಾಗಿ ವರ್ಷಗಟ್ಟಲೆ ಬಳಸುವವರಿದ್ದಾರೆ. ಬ್ರಶ್ ಸಂಪೂರ್ಣ ಹಾಳಾಗುವವರೆಗೂ ಅದನ್ನು ಬಳಸ್ತಾರೆ. ಆದ್ರೆ ಇದು ತಪ್ಪು. ಬ್ರಶ್ ಅವಧಿ ಮೂರು ತಿಂಗಳು ಮಾತ್ರ. ಹೆಚ್ಚು ಸಮಯ ಬಳಸಿದ್ರೆ ನೆಗಡಿ, ಹಲ್ಲು ನೋವು ಸೇರಿದಂತೆ ಸೋಂಕುಗಳ ಸಮಸ್ಯೆ ಎದುರಾಗುತ್ತದೆ.

ಇನ್ನು ಟವೆಲ್ ಗಳ ಬಗ್ಗೆ ಹೇಳುವುದಾದ್ರೆ ಟವೆಲನ್ನು ಪ್ರತಿ ದಿನ ಅನೇಕ ಬಾರಿ ಬಳಸುತ್ತೇವೆ. ಟವೆಲ್ ನಲ್ಲಿ ಕೀಟಾಣುಗಳಿರುತ್ತವೆ. ಹಾಗಾಗಿ ಆಗಾಗ ಟವೆಲ್ ತೊಳೆಯಬೇಕು. ಒಮ್ಮೆ ಟವೆಲ್ ಖರೀದಿ ನಂತ್ರ ಮೂರ್ನಾಲ್ಕು ವರ್ಷ ಅದ್ರ ಸುದ್ದಿಗೆ ಹೋಗುವುದಿಲ್ಲ. ಆದ್ರೆ ಇದು ತಪ್ಪು. ಒಂದು ವರ್ಷ ಮಾತ್ರ ಒಂದು ಟವೆಲ್ ಬಳಸಬೇಕು. ನಂತ್ರ ಅದನ್ನು ಬದಲಿಸಬೇಕು. ಇಲ್ಲವಾದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ.

ಕೂದಲ ಸೌಂದರ್ಯ ವೃದ್ಧಿಗೆ ಬಳಸುವ ಬಾಚಣಿಕೆ ಕೂದಲ ಸಮಸ್ಯೆಗೆ ಕಾರಣವಾಗಬಹುದು. ಬಾಚಣಿಕೆಯಲ್ಲಿ ಕೊಳಕಿರುತ್ತದೆ. ಇದು ಹೊಟ್ಟು, ಅಲರ್ಜಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಆಗಾಗ ಅದನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಒಂದೇ ಬಾಚಣಿಕೆ ಬಳಸಬಾರದು.

ಒಂದೇ ಮೇಕಪ್ ಬ್ರಶ್ ಹಾಗೂ ಸ್ಪಂಜ್ ಬಳಕೆ ಕೂಡ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಇದ್ರಿಂದ ಮೊಡವೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಪ್ರತಿ ಬಾರಿ ಮೇಕಪ್ ನೀಡಿದ ನಂತ್ರ ಮೇಕಪ್ ಬ್ರಶ್ ತೊಳೆಯಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ಬದಲಿಸಬೇಕು.