ಹೆಗ್ಗಡೆಯವರೇ, ಸಿಹಿ ಹಣ್ಣಿನ ಮರಕ್ಕೆ ಕಲ್ಲೇಟುಗಳು ಸಹಜ, ಟೀಕೆಗಳಿಗೆ ಬೆದರದೆ ಮುಂದುವರಿಯಿರಿ: ವಿಶ್ವೇಶ್ವರ ಭಟ್‌

ಬೆಂಗಳೂರು: ಧರ್ಮಸ್ಥಳ ಬರೀ ಶ್ರದ್ಧಾಭಕ್ತಿಯ ಕೇಂದ್ರವಾಗುವುದರ ಜತೆಗೆ, ಅದು ಸಮಾಜದ ಎಲ್ಲ ಸ್ತರದ ಜನರ ಬಾಳನ್ನು ಒಳಗೊಂಡ ಅಪರೂಪದ ಧರ್ಮಕ್ಷೇತ್ರ. ಅಂಥ ಕ್ಷೇತ್ರಕ್ಕೆ ಅರ್ಧ ಶತಮಾನಗಳ ಕಾಲ ನಾಯಕತ್ವವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು (Veerendra Heggade) ನೀಡಿದ್ದಾರೆ. ಜಾಲಿಯ ಮರಕ್ಕೆ ಯಾರೂ ಕಲ್ಲು ಹೊಡೆಯುವುದಿಲ್ಲ. ಸಿಹಿಯಾದ ಹಣ್ಣು ನೀಡುವ ಮರಕ್ಕೆ ಕಲು ಹೊಡೆಯುತ್ತಾರೆ. ಆದ್ದರಿಂದ ಯಾವ ಟೀಕೆಗಳಿಗೂ ಕಿವಿಗೊಡದೆ ಮುಂದುವರಿಯಿರಿ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ (Vishweshwar Bhat) ಅವರು ಮಾರ್ಮಿಕವಾಗಿ ನುಡಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಯಕತ್ವ ಗಮನಿಸಿದರೆ ದೊಡ್ಡ ಕಂಪನಿಗಳ ಸಿಇಒಗಳ ಕಾರ್ಯವೈಖರಿ ನೆನಪಾಗುತ್ತದೆ. ಹಾಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವುದರ ಜೊತೆಗೆ ಫೋಟೋಗ್ರಫಿ, ಹಳೆಯ ವಸ್ತುಗಳ ಸಂಗ್ರಹ ಮೊದಲಾದ ಅಪರೂಪದ ಗುಣಗಳನ್ನೂ ರೂಢಿಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಇಂದು (ಜುಲೈ 26) ನಡೆದ ವಿಶ್ವವಾಣಿ ಪ್ರಕಾಶನದ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳ ಬಿಡುಗಡೆ ಮಾಡಿದರು.

ಹೆಗ್ಗಡೆಯವರ ನಾಯಕತ್ವ ಗಮನಿಸಿದರೆ ದೊಡ್ಡ ಕಂಪನಿಗಳ ಸಿಇಒಗಳ ಕಾರ್ಯವೈಖರಿ ನೆನಪಾಗುತ್ತದೆ. ಹಾಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವುದರ ಜೊತೆಗೆ ಫೋಟೋಗ್ರಫಿ, ಹಳೆಯ ವಸ್ತುಗಳ ಸಂಗ್ರಹ ಮೊದಲಾದ ಅಪರೂಪದ ಗುಣಗಳನ್ನೂ ರೂಢಿಸಿಕೊಂಡಿದ್ದಾರೆ. ಅತ್ಯುತ್ತಮ ಓದುಗ ಹಾಗೂ ಲೇಖಕ ಸಹ ಆಗಿದ್ದಾರೆ. ಧರ್ಮೋತ್ಥಾನ ಟ್ರಸ್ಟ್‌ನ ಮೂಲಕ ನಾಡಿನಾದ್ಯಂತ 200ಕ್ಕೂ ಅಧಿಕ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.

Spread the love
  • Related Posts

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಗುರುವಾಯನಕೆರೆ: ರಾಷ್ಟ್ರಮಟ್ಟದಲ್ಲಿ ಇನ್ಸಿಟ್ಯೂಟ್ ಆಫ್‌ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸುವ ಕಂಪನಿ ಸೆಕ್ರೆಟರಿ ಪರೀಕ್ಷೆಯ ಎರಡನೇ ಆವೃತ್ತಿಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. 200 ಅಂಕಗಳ ಪರೀಕ್ಷೆಯಲ್ಲಿ 183 ಅಂಕಗಳನ್ನು…

    Spread the love

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಬೆಳ್ತಂಗಡಿ: ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ 6-7ನೇ ತರಗತಿ ವಿಭಾಗದಲ್ಲಿ ಪುಷ್ಟಿ ಮುಂಡಾಜೆಗೆ ಪ್ರಥಮ ಸ್ಥಾನ. ಅಳದಂಗಡಿ ಆಮಂತ್ರಣ ಪರಿವಾರದ ದಶಮಾನೋತ್ಸವದ ಸಂದರ್ಭ ಶನಿವಾರ ಅಳದಂಗಡಿಯಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ 6-7ನೇ ತರಗತಿ ವಿಭಾಗದಲ್ಲಿ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ…

    Spread the love

    You Missed

    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ, ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    • By admin
    • January 20, 2026
    • 181 views
    ಸಿ.ಎಸ್. ಫಲಿತಾಂಶ ಪ್ರಕಟ: ಎಕ್ಸೆಲ್ ವಿದ್ಯಾರ್ಥಿಗಳು ರಾಜ್ಯದಲ್ಲೇ ಅಭೂತಪೂರ್ವ ಸಾಧನೆ,  ಭವೇಶ್ ಸೀರ್ವಿ ರಾಜ್ಯಕ್ಕೆ ಪ್ರಥಮ ಸ್ಥಾನ

    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    • By admin
    • January 20, 2026
    • 61 views
    ಆಮಂತ್ರಣ ಪರಿವಾರದ ದಶಮಾನೋತ್ಸವದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪುಷ್ಟಿ ಮುಂಡಾಜೆ ಪ್ರಥಮ

    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    • By admin
    • January 18, 2026
    • 80 views
    ಹಳ್ಳಿ ಹೈದ ಗಿಲ್ಲಿ ನಟನಿಗೆ ‘ಬಿಗ್’ ಕಿರೀಟ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ರನ್ನರ್ ಆಫ್

    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    • By admin
    • January 18, 2026
    • 69 views
    ಚಾರ್ಮಾಡಿ ಘಾಟಿಯಲ್ಲಿ ಹಬ್ಬಿದ ಕಾಡ್ಗಿಚ್ಚು ಅಪಾರ ಸಸ್ಯ ಪ್ರಬೇಧಗಳು, ಪ್ರಾಣಿ ಸಂಕುಲಕ್ಕೆ ಹಾನಿ ಸಾಧ್ಯತೆ!!! ನಿರಂತರ ಕಾಡ್ಗಿಚ್ಚಿಗೆ ಶಾಶ್ವತ ಪರಿಹಾರ ಯಾವಾಗ???

    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️

    • By admin
    • January 18, 2026
    • 58 views
    ಚಾರ್ಮಾಡಿ ಘಾಟಿಯ ತುತ್ತ ತುದಿಯಲ್ಲಿ ಕಾಣಿಸಿಕೊಂಡ ಬೆಂಕಿ ಇದು ಆಕಸ್ಮಿಕವೋ‼️ ಅಥವಾ ದುಷ್ಟರ ಕೃತ್ಯವೋ⁉️

    ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಹಾಗೂ ನ್ಯಾಯಾಲಯದ ಪ್ರತಿಬಂಧಕ ಆಜ್ಞೆ ಉಲ್ಲಂಘಿಸಿದ ವಿಠಲಗೌಡ ಬಂಧನಕ್ಕೆ ಕೋರ್ಟ್ ಆದೇಶ

    • By admin
    • January 17, 2026
    • 84 views
    ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿಂದನೆ ಹಾಗೂ ನ್ಯಾಯಾಲಯದ ಪ್ರತಿಬಂಧಕ ಆಜ್ಞೆ ಉಲ್ಲಂಘಿಸಿದ ವಿಠಲಗೌಡ  ಬಂಧನಕ್ಕೆ ಕೋರ್ಟ್ ಆದೇಶ