ಆಲ್ಕೋಹಾಲ್ ಸೇವಿಸಿದ ನಂತರ ಕೆಲವರ ಮಾತಿನ ವರಸೆ ಬದಲಾಗುತ್ತದೆ. ಅದರಲ್ಲೂ ಕೆಲವರು ಮಾತೃಭಾಷೆಯನ್ನು ಮಾತನಾಡುತ್ತಿದ್ದವರು ಎಣ್ಣೆ ಸೇವಿಸಿದ ನಂತರ ಆಂಗ್ಲ ಭಾಷೆ ಮಾತನಾಡಲು ಪ್ರಾರಂಭಿಸುತ್ತಾರೆ. ಹಾಗಂತ ಇಂಗ್ಲೀಷ್ ಮಾತ್ರವಲ್ಲ ಬಾಯಿಗೆ ಬಂದದನ್ನು ಹೇಳುತ್ತಾರೆ.
ಅಚ್ಚರಿ ವಿಚಾರವೆಂದರೆ ಆಲ್ಕೋಹಾಲ್ ಸೇವಿಸಿದ ನಂತರ ಜನ ಏಕೆ ಇಂಗ್ಲೀಷ್ ಮಾತನಾಡುತ್ತಾರೆ ಎಂಬ ಬಗ್ಗೆ ಸಂಶೋಧನೆಯನ್ನ ಮಾಡಲಾಗಿದೆ. ಅದರ ಮೂಲಕ ನಿಜವಾದ ಕಾರಣವನ್ನು ಅವರು ಕಂಡುಕೊಂಡಿದ್ದಾರೆ. ಹಾಗಾದರೆ ಎಣ್ಣೆ ಹೊಟ್ಟೆ ಒಳಕ್ಕೆ ಸೇರಿದ ನಂತರ ಜನ ಯಾಕೆ ಇಂಗ್ಲೀಷ್ ಮಾತನಾಡುತ್ತಾರೆ ?ಎಂಬುದಕ್ಕೆ ಕಾರಣ ತಿಳಿಯೋಣ.
ಜರ್ನಲ್ ಆಫ್ ಸೈಕೋಫಾರ್ಮಾಕಾಲಜಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, 1 ರಿಂದ 2 ಪೆಗ್ ಆಲ್ಕೋಹಾಲ್ ಸೇವಿಸಿ ಅಮಲು ಹತ್ತುತ್ತಿದ್ದಂತೆ ಜನರ ಮನಸ್ಸಿನಲ್ಲಿದ್ದ ಭಯ ಅಥವಾ ಹಿಂಜರಿಕೆ ಅಲ್ಲಿಗೆ ಕೊನೆಯಾಗುತ್ತದೆ.
ತನ್ನಿಂದ ಎಲ್ಲವೂ ಸಾಧ್ಯ ಎಂಬ ಮನೋಭಾವನೆ ಬರುತ್ತದೆ. ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದು ಅವರಲ್ಲಿ ದೃಢವಾಗುತ್ತದೆ.
ಹಾಗಾಗಿ ಅಮಲು ಹೆಚ್ಚಾದಂತೆ ಅವರ ವರಸೆ ಬದಲಾಗುತ್ತದೆ. ಈ ವೇಲೆ ಮಾತನಾಡುವ ಭಾಷೆ, ಸ್ಟೈಲ್ ಕೂಡ ಬದಲಾಗುತ್ತದೆ. ಭಾರತೀಯರಾದರೆ ಕುಡಿದ ನಂತರ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿಸಲು ಪ್ರಾರಂಭಿಸುತ್ತಾರೆ.
ಮತ್ತೊಂದು ವಿಚಾರವೆಂದರೆ ಆಲ್ಕೋಹಾಲ್ ಕುಡಿತ ನಂತರ ಸ್ಮರಣಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಯಾವ ವಿಚಾರವನ್ನು ಮಾತನಾಡಲು ಹಿಂಜರಿಯುತ್ತೇವೆ ಅದನ್ನು ಧೈರ್ಯವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ.
ಇನ್ನು ಕೆಲವರು ಆಲ್ಕೋಹಾಲ್ ಸೇವಿಸಿದ ನಂತರ ತಮಗಿಷ್ಟವಾದ ಕೆಲಸ ಮಾಡಲು ಮುಂದಾಗುತ್ತಾರೆ. ಆ ಸಮಯವನ್ನು ಸಂತೋಷದಿಂದ ಕಳೆಯಲು ಮುಂದಾಗುತ್ತಾರೆ. ಕುಡಿಯುವ ಸಮಯಕ್ಕೆ ನೃತ್ಯ ಮಾಡಲು ಕೆಲವರು ಹೊರಟರೆ. ಇನ್ನು ಕೆಲವರು ತಮ್ಮ ಬೇಸರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಅಮಲು ಒಳಗೆ ಹೋದಂತೆ ಕಾನ್ಫಿಡೆನ್ಸ್ ಬೂಸ್ಟ್ ಆಗುತ್ತದೆ. ಹಾಗಾಗಿ ಆಲ್ಕೋಹಾಲ್ ಕುಡಿದ ಜನರು ನಾಚಿಕೆಯನ್ನು ಬಿಟ್ಟು ಬೇರೆ ಭಾಷೆಯನ್ನು ಆ ಸಮಯದಲ್ಲಿ ಮಾತನಾಡುತ್ತಾರೆ.