ಪಾತಕಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ! ಪೋಲೀಸರ ಗನ್ ಕಸಿದು ಪರಾರಿಯಾಗಲು ಯತ್ನ! ಈ ಸಂದರ್ಭ ಪೋಲೀಸರ ಗುಂಡಿನ ದಾಳಿಗೆ ಗ್ಯಾಂಗ್ ಸ್ಟಾರ್ ಬಲಿ!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯನ್ನು ನಿನ್ನೆ ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ ಪಾತಕಿ ವಿಕಾಸ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಮುಗಿಸಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಿ ಪಾತಕಿ ದುಬೆ ಯನ್ನು ಕರೆದೊಯ್ಯುತ್ತಿದ್ದ ವಾಹನಪಲ್ಟಿ ಯಾಗಿದ್ದು ಈ ವೇಳೆ ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆ ಪೋಲಿಸರ ಕೈಯಲ್ಲಿದ್ದ ಗನ್ ಕಸಿದು ಕೊಳ್ಳಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

READ ALSO

ಹಂತಕ ದುಬೆಯನ್ನು ಎನ್ಕೌಂಟರ್ ನಲ್ಲಿ ಮುಗಿಸಿದ ಪೋಲೀಸರು ಪೋಲೀಸರ ಗುಂಡಿನ ದಾಳಿಗೆ ಗ್ಯಾಂಗ್ ಸ್ಟಾರ್ ಬಲಿಯಾಗಿದ್ದು ವರದಿಯಾಗಿದೆ