ಕೊರೋನಾ ಚಕ್ರವ್ಯೂಹದೊಳಗೆ ಸಿಲುಕಿ ಪರಿತಪಿಸುತ್ತಿದೆ ಕರುನಾಡು! ಕೊರೋನಾ ಕೆಂಗಣ್ಣಿಗೆ ಕಂಗೆಟ್ಟ ಸಿಲಿಕಾನ್ ಸಿಟಿ!

ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಮಹಾಮಾರಿ ತನ್ನ ರುದ್ರ ಅವತಾರವನ್ನು ಮುಂದುವರೆಸಿದ್ದು ಇಂದು ಕೂಡ ದಾಖಲೇಯ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು ರಾಜ್ಯದ 30 ಜಿಲ್ಲೆಗಳಲ್ಲೂ ತನ್ನ ನರ್ತನವನ್ನು ಮುಂದುವರೆಸಿದೆ.
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ದಾಖಲೇಯ 1373 ಸೋಂಕಿತರು ಪತ್ತೆಯಾದರೆ ಕಡಲತಡಿ ಮಂಗಳೂರಿನಲ್ಲಿ 167ಸೋಂಕಿತರು ಪತ್ತೆಯಾಗಿದ್ದು ಕರಾವಳಿ ಮಂದಿಗೂ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ.

ರಾಜ್ಯಾದ್ಯಂತ 2228 ಸೋಂಕಿತರು ಪತ್ತೆಯಾಗಿದ್ದು ಈ ಪೈಕಿ ಸೋಂಕಿತರ ಸಂಖ್ಯೆ 31105ಕ್ಕೆ ಏರಿಕೆಯಾಗಿದೆ

READ ALSO

ಸದ್ಯ ಇಂದು ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಂಡಿದ್ದು ರಾಜ್ಯದಲ್ಲಿ 17 ಮಂದಿ ಕ್ರೂರಿ ವೈರಸ್ ಕಾಟಕ್ಕೆ ಬಲಿಯಾಗಿದ್ದು ಸಾವಿನ ಸಂಖ್ಯೆ 486ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ವಿವರಗಳು: